3ನೇ ಟೆಸ್ಟ್ ಪಂದ್ಯ: ಒಂದೇ ಪಂದ್ಯದಿಂದ ಹಲವು ದಾಖಲೆಗಳ ಮುರಿದ ಜಸ್ ಪ್ರೀತ್ ಬುಮ್ರಾ

ಜಸ್ ಪ್ರೀತ್ ಬುಮ್ರಾ ಹೊಸ ವರ್ಷಕ್ಕೆ ಇನ್ನೂ 2 ದಿನ ಬಾಕಿ ಇರುವಂತೆಯೇ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಗಿಫ್ಟ್ ನೀಡಿದ್ದು, ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಹಲವು ದಾಖಲೆಗಳ ನಿರ್ಮಾಣ ಮಾಡಿದ್ದಾರೆ.
ವಿಕೆಟ್ ಪಡೆದ ಸಂಭ್ರಮದಲ್ಲಿ ಬುಮ್ರಾ
ವಿಕೆಟ್ ಪಡೆದ ಸಂಭ್ರಮದಲ್ಲಿ ಬುಮ್ರಾ
ಮೆಲ್ಬೋರ್ನ್: ಜಸ್ ಪ್ರೀತ್ ಬುಮ್ರಾ ಹೊಸ ವರ್ಷಕ್ಕೆ ಇನ್ನೂ 2 ದಿನ ಬಾಕಿ ಇರುವಂತೆಯೇ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಗಿಫ್ಟ್ ನೀಡಿದ್ದು, ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಹಲವು ದಾಖಲೆಗಳ ನಿರ್ಮಾಣ ಮಾಡಿದ್ದಾರೆ.
ಹೌದು... ನಿನ್ನೆಯಷ್ಟೇ ಮೊದಲ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಪಡೆದು 39 ವರ್ಷಗಳ ಹಳೆಯ ದಾಖಲೆಯನ್ನು ಮುರಿದ್ದ ಬುಮ್ರಾ ಇದೀಗ ಮತ್ತೆ ಎರಡನೇ ಇನ್ನಿಂಗ್ಸ್ ನಲ್ಲೂ 2 ವಿಕೆಟ್ ಪಡೆಯುವ ಮೂಲಕ ಕೋಚ್ ರವಿಶಾಸ್ತ್ರಿ ಅವರ ಹೆಸರಲ್ಲಿದ್ದ ಹಳೆಯ ದಾಖಲೆಯೊಂದನ್ನು ಕೂಡ ಹಿಂದಿಕ್ಕಿದ್ದಾರೆ. 1985ರಲ್ಲಿ ರವಿಶಾಸ್ತ್ರಿ ಇದೇ ಎಂಸಿಜಿ ಕ್ರೀಡಾಂಗಣದಲ್ಲಿ ಎರಡೂ ಇನ್ನಿಂಗ್ಸ್ ಗಳಿಂದ 179 ರನ್ ನೀಡಿ  ವಿಕೆಟ್ ಗಳಿಸಿದ್ದರು, ಇದೀಗ ಈ ದಾಖಲೆಯನ್ನು ಬುಮ್ರಾ ಹಿಂದಿಕ್ಕಿದ್ದು, ಕೇವಲ 51 ರನ್ ನೀಡಿ ಬುಮ್ರಾ  8 ವಿಕೆಟ್ ಕಬಳಿಸಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಮತ್ತೋರ್ವ ಭಾರತೀಯ ಬೌಲಿಂಗ್ ಲೆಜೆಂಡ್ ಬಿಎಸ್ ಚಂದ್ರಶೇಖರ್ ಅವರ ಹೆಸರಿದ್ದು, 1977ರಲ್ಲಿ ಚಂದ್ರಶೇಖರ್ ಅವರು104 ರನ್ ಗಳಿಗೆ 12 ವಿಕೆಟ್ ಕಬಳಿಸಿದ್ದರು. (6/52 ಮೊದಲ ಇನ್ನಿಂಗ್ಸ್ ಮತ್ತು 6/52 ಎರಡನೇ ಇನ್ನಿಂಗ್ಸ್) ಇದು ಎಂಸಿಜಿ ಕ್ರೀಡಾಂಗಣದಲ್ಲಿ ಭಾರತೀಯ ಬೌಲರ್ ವೊಬ್ಬರ ಶ್ರೇಷ್ಠ ನಿರ್ವಹಣೆಯಾಗಿದೆ.
39 ವರ್ಷಗಳ ದಾಖಲೆ ಪತನ
ಇನ್ನು ನಿನ್ನೆಯ ಪಂದ್ಯದಲ್ಲಿ 6 ವಿಕೆಟ್ ಗಳಿಸಿದ ಬುಮ್ರಾ ವೃತ್ತಿ ಜೀವನದ ಉತ್ತಮ ಪ್ರದರ್ಶನ ನೀಡಿದ್ದರು. ಈ ಮೂಲಕ ಆಸೀಸ್, ಇಂಗ್ಲೆಂಡ್ ಮತ್ತು ಸೌತ್ ಆಫ್ರಿಕಾ ವಿರುದ್ಧ ಕ್ಯಾಲೆಂಡರ್ ವರ್ಷ ಒಂದರಲ್ಲಿ 5 ವಿಕೆಟ್ ಪಡೆದ ಮೊದಲ ಏಷ್ಯಾ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. ಅಲ್ಲದೇ 2018 ರಲ್ಲಿ ಟೀಂ ಇಂಡಿಯಾ ಪರ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಶಮಿ ಅವರೊಂದಿಗೆ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ.
ಟೆಸ್ಟ್ ಕ್ರಿಕೆಟ್‍ಗೆ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ ವರ್ಷದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಸಾಧನೆಯನ್ನು ಬುಮ್ರಾ ಮಾಡಿದ್ದಾರೆ. 2018 ವರ್ಷದಲ್ಲಿ ಬುಮ್ರಾ 45 ವಿಕೆಟ್ ಪಡೆದಿದ್ದಾರೆ. 1979 ರಲ್ಲಿ ದಿಲೀಪ್ ದೋಷಿ ಪಾದಾರ್ಪಣೆ ಮಾಡಿದ ವರ್ಷದಲ್ಲಿ 40 ವಿಕೆಟ್ ಪಡೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com