ಇತ್ತೀಚೆಗಷ್ಟೇ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗಿ ಅಶ್ವಿನ್ ಆಯ್ಕೆಯಾಗಿದ್ದು, ಈ ಬಗ್ಗೆ ಹೆಮ್ಮೆಯಿಂದಲೇ ಆಂಗ್ಲ ಕ್ರೀಡಾ ವೆಬ್ ಸೈಟಿನೊಂದಿಗೆ ಮಾತನಾಡಿದ ಅಶ್ವಿನ್, ಕಿಂಗ್ಸ್ ಇಲೆವೆನ್ ತಂಡದ ಆಡಳಿತ ಮಂಡಳಿ ನನಗಿಂತಲೂ ಹಿರಿಯ ಮತ್ತು ನುರಿತ ಆಟಗಾರರು ತಂಡದಲ್ಲಿದ್ದಾಗ್ಯೂ ನನ್ನ ಮೇಲೆ ಭರವಸೆ ಇಟ್ಟು ಈ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ, ಹೀಗಾಗಿ ಈ ಜವಾಬ್ದಾರಿಯನ್ನು ನಾನು ಯಶಸ್ವಿಯಾಗಿ ನಿಭಾಯಿಸಬೇಕಿದೆ. ಪ್ರತೀ ಬಾರಿಯ ಐಪಿಎಲ್ ಟೂರ್ನಿಯಂತೆಯೇ ಈ ಬಾರಿಯ ಐಪಿಎಲ್ ನಲ್ಲೂ ನಾನು ಪಾಲ್ಗೊಳ್ಳುತ್ತಿದ್ದು, ಈ ಬಾರಿ ನನ್ನ ಮೇಲೆ ದೊಡ್ಡ ಜವಾಬ್ದಾರಿ ಇದೆ.