ಯುವಿ, ಗೇಯ್ಲ್ ಸೇರಿ ಐಪಿಎಲ್ ಹರಾಜು ಪ್ರಕ್ರಿಯೆಗೆ 1122 ಕ್ರಿಕೆಟಿಗರ ಸಹಿ: ಬಿಸಿಸಿಐ

ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ನ 11ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಮುಂಬರುವ ಜನವರಿ 27ರಿಂದ ಆರಂಭವಾಗಲಿದ್ದು, ಒಟ್ಟು 1122 ಆಟಗಾರರು ಹರಾಜು ಪ್ರಕ್ರಿಯೆಗೆ ಸಹಿ ಹಾಕಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ನ 11ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಮುಂಬರುವ ಜನವರಿ 27ರಿಂದ ಆರಂಭವಾಗಲಿದ್ದು, ಒಟ್ಟು 1122 ಆಟಗಾರರು ಹರಾಜು ಪ್ರಕ್ರಿಯೆಗೆ ಸಹಿ ಹಾಕಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
ಐಪಿಎಲ್ 11ನೇ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಇಂದು ಸುದ್ದಿಗೋಷ್ಠಿ ನಡೆಸಿದ ಬಿಸಿಸಿಐ, ಜನವರಿ 27 ಮತ್ತು 28ರಂದು ನಡೆಯಲಿರುವ ಹರಾಜು ಪ್ರಕ್ರಿಯೆಗಾಗಿ ಪ್ರಮುಖ ಆಟಗಾರರಾದ ಭಾರತದ ಯುವರಾಜ್  ಸಿಂಗ್, ವಿಂಡೀಸ್ ನ ಕ್ರಿಸ್ ಗೇಯ್ಲ್, ಇಂಗ್ಲೆಂಡ್ ನ ಜೋ ರೂಟ್ ಸೇರಿದಂತೆ ಒಟ್ಟು 112 ಕ್ರಿಕೆಟಿಗರು ಸಹಿ ಹಾಕಿದ್ದಾರೆ ಎಂದು ತಿಳಿಸಿದೆ. ಈಗಾಗಲೇ ಈ ಆಟಗಾರರ ಪಟ್ಟಿಯನ್ನು ಎಲ್ಲ 8 ಫ್ರಾಂಚೈಸಿಗಳಿಗೆ ರವಾನೆ ಮಾಡಲಾಗಿದ್ದು, ಈ  ಪೈಕಿ ಈಗಾಗಲೇ ತಂಡಗಳಿಗೆ ಆಯ್ಕೆಯಾಗಿರುವ 281 ಮತ್ತು ಆಯ್ಕೆ ಬಾಕಿ ಇರುವ 838 ಆಟಗಾರರು ಸೇರಿದ್ದಾರೆ ಎನ್ನಲಾಗಿದೆ.  ಇದರಲ್ಲಿ 778 ಮಂದಿ ಭಾರತೀಯ ಕ್ರಿಕೆಟಿಗರಿದ್ದು, 334 ಮಂದಿ ವಿದೇಶಿ ಆಟಗಾರರು ಇದ್ದಾರೆ ಎಂದು  ಬಿಸಿಸಿಐ ತಿಳಿಸಿದೆ.
ಇನ್ನು 282 ವಿದೇಶಿ ಆಟಗಾರರ ಪೈಕಿ, 58 ಮಂದಿ ಆಸ್ಟ್ರೇಲಿಯನ್, ದಕ್ಷಿಣ ಆಫ್ರಿಕಾದ 57 ಮತ್ತು ಶ್ರೀಲಂಕಾ, ವೆಸ್ಟ್ ಇಂಡೀಸ್ ತಂಡಗಳ ತಲಾ 39 ಆಟಗಾರರು, ನ್ಯೂಜಿಲೆಂಡ್ ನ 30 ಆಟಗಾರರು, ಇಂಗ್ಲೆಂಡ್ ನ 26 ಮಂದಿ  ಆಟಗಾರರು ಹರಾಜು ಪ್ರಕ್ರಿಯೆಗೆ ಸಹಿ ಹಾಕಿದ್ದಾರೆ. ಇದಲ್ಲದೆ ಆಫ್ಘಾನಿಸ್ತಾನದ 13 ಮಂದಿ ಆಟಗಾರರೂ ಕೂಡ ಈ ಬಾರಿ ಐಪಿಎಲ್ ನಲ್ಲಿ ಕಾಣಿಸಿಕೊಳ್ಳಲಿದ್ದು, ಬಾಂಗ್ಲಾದೇಶದ 8, ಅಮೆರಿಕದ ಇಬ್ಬರು, ಜಿಂಬಾಂಬ್ವೆ 7 ಮತ್ತು ಐರ್ಲೆಂಡ್  ನ ಇಬ್ಬರು ಆಟಗಾರರು ಐಪಿಎಲ್ ಹರಾಜು ಪ್ರಕ್ರಿಯೆಗೆ ಸಹಿ ಹಾಕಿದ್ದಾರೆ. 
ಜನವರಿ 27 ಮತ್ತು 28ರಂದು ಐಪಿಎಲ್ ಹರಾಜ ಪ್ರಕ್ರಿಯೆ ನಡೆಯಲಿದ್ದು, ಈ ಹಿಂದಿನಂತೆಯೇ ಬೆಂಗಳೂರಿನಲ್ಲಿ ಹರಾಜು ಪ್ರಕ್ರಿಯೆ ನಡೆಸಲು ಐಪಿಎಲ್ ಆಡಳಿತ ಮಂಡಳಿ ನಿರ್ಧರಿಸಿದೆ. ಇನ್ನು ಈ ಬಾರಿ ಹರಾಜು ಪ್ರಕ್ರಿಯೆಯಲ್ಲಿ  ತಂಡಗಳ ಬಜೆಟ್ ಅನ್ನು 66 ಕೋಟಿ ರು.ಗಳಿಂದ 80 ಕೋಟಿ ರು.ಗಳಿಗೆ ಏರಿಕೆ ಮಾಡಲಾಗಿದ್ದು, ತಂಡಗಳಿಗೆ ಇದರಿಂದ ಹೆಚ್ಚುವರಿ ಆಟಗಾರ ಖರೀದಿಗೆ ಮತ್ತು ಉತ್ತಮ ಆಟಗಾರನ ಮೇಲೆ  ಹೆಚ್ಚು ಹಣ ಹೂಡಲು ನೆರವಾಗುತ್ತದೆ  ಎನ್ನಲಾಗಿದೆ. ಅಂತೆಯೇ ಈ ಬಾರಿಯೂ ಪ್ರತೀ ತಂಡಗಳು ಎಲ್ಲ ಐದೂ ಆಟಗಾರರನ್ನೂ ಮುಂದುವರೆಸಿಕೊಳ್ಳಲು ಅವಕಾಶ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com