ಬಳಿಕ ಶಬ್ ಮನ್ ಗಿಲ್ ಭಾರತದ ರನ್ ಗಳಿಕೆಯನ್ನು 250ರ ಗಡಿದಾಟಿಸಿದರು. ಏಕಾಂಗ ಹೋರಾಟ ಪ್ರದರ್ಶನ ನೀಡಿದ ಗಿಲ್ ಕೇವಲ 54 ಎಸೆತಗಳಲ್ಲಿ 63 ರನ್ ಸಿಡಿಸಿದರು. ಕಲ್ರಾ ಔಟ್ ಆದ ಬಳಿಕ ಬಂದ ಹಿಮಾಂಶು ರಾಣಾ 14 ರನ್ ಗಳಿಸಿ ಔಟ್ ಆದರು. ಇವರ ಬೆನ್ನಲ್ಲೇ ಗಿಲ್ ಕೂಡ 63 ರನ್ ಗಳಿಸಿ ನಿರ್ಗಮಿಸಿದರು. ಬಳಿಕ ಕ್ರೀಸ್ ಗೆ ಬಂದ ಯಾವೊಬ್ಬ ಬ್ಯಾಟ್ಸಮನ್ ಕೂಡ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲುವ ಪ್ರಯತ್ನ ಮಾಡಲಿಲ್ಲ. ಆದರೂ ಪೃಥ್ವಿ ಚೌಹಾಣ್, ಕಲ್ರಾ ಮತ್ತು ಗಿಲ್ ಹಾಕಿಕೊಟ್ಟ ಬೃಹತ್ ರನ್ ಗಳ ನೆರವನಿಂದ ಭಾರತ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 328 ರನ್ ಗಳಿಸಿತು.