ನವಿ ಮುಂಬೈನ ಶಾಲಾ ಬಾಲಕ ತನಿಷ್ಕ್ ಗಾವಟೆ ಈ ದಾಖಲೆ ನಿರ್ಮಿಸಿದ್ದು, ಮುಂಬೈ ಕ್ರಿಕೆಟ್ ಅಸೋಸಿಯೇಶನ್ ನ ಆಶ್ರಯದಲ್ಲಿ ನಡೆದ ಅಂಡರ್ -14 ನವಿ ಮುಂಬೈ ಶಿಲ್ಡ್ ಆಹ್ವಾನಿತ ಕ್ರಿಕೆಟ್ ಟೂರ್ನಮೆಂಟ್ ಪಂದ್ಯದಲ್ಲಿ ಗಾವಟೆ ಮಂಗಳವಾರ ಔಟಾಗದೆ 1,045 ರನ್ ದಾಖಲಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾನೆ. ಶಾಲಾ ಕ್ರಿಕೆಟ್‌ನಲ್ಲಿ ಇದೊಂದು ವಿಶ್ವದಾಖಲೆಯಾಗಿದ್ದು, ಈ ಹಿಂದೆ 2016ರ ಜನವರಿಯಲ್ಲಿ ಇದೇ ಮುಂಬೈನ ಬಾಲಕ ಪ್ರಣವ್ ಧನವಾಡೆ 1, 009 ರನ್ ಸಿಡಿಸಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ.