ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸುಳ್ಳು ಹೇಳುತ್ತಿದ್ದಾರೆ: ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸುಳ್ಳು ಹೇಳುತ್ತಿದ್ದಾರೆ ಎಂದು ಇಂಗ್ಲೆಂಡ್ ತಂಡದ ವೇಗಿ ಜೇಮ್ಸ್ ಆ್ಯಂಡರ್ಸನ್ ಅವರು ಹೇಳಿದ್ದಾರೆ.
Published on
ಲಂಡನ್: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸುಳ್ಳು ಹೇಳುತ್ತಿದ್ದಾರೆ ಎಂದು ಇಂಗ್ಲೆಂಡ್ ತಂಡದ ವೇಗಿ ಜೇಮ್ಸ್ ಆ್ಯಂಡರ್ಸನ್ ಅವರು ಹೇಳಿದ್ದಾರೆ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಹಿಂದೆ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಆ್ಯಂಡರ್ಸನ್, 'ಕೊಹ್ಲಿ ಇಂತಹದೊಂದು ಹೇಳಿಕೆಯನ್ನು ಕೊಟ್ಟಿದ್ದರೆ ಅವರು ಸುಳ್ಳು ಹೇಳುತ್ತಿದ್ದಾರೆ. ವೈಯಕ್ತಿಕವಾಗಿ ರನ್ ಗಳಿಸದಿದ್ದರೆ ಕೊಹ್ಲಿಗೆ ವಿಷಯವೇ ಅಲ್ಲವೇ? ಎಂದು ಬಹುಶಃ ಅವರು ಸುಳ್ಳು ಹೇಳುತ್ತಿರಬೇಕು. ಯಾವುದೇ ಆಟಗಾರನಿರಲಿ ತಂಡದ ಯಶಸ್ಸಿನೊಂದಿಗೆ ತನ್ನ ವೈಯುಕ್ತಿಕ ಪ್ರದರ್ಶನದ ಕುರಿತೂ ಗಮನ ಹರಿಸುತ್ತಾನೆ. ಖಂಡಿತವಾಗಿಯೂ ಭಾರತ ಇಲ್ಲಿ ಸರಣಿ ಗೆಲ್ಲಲು ಬಯಸುತ್ತದೆ. ನಾಯಕನಾಗಿ ವಿರಾಟ್ ಕೊಹ್ಲಿ ತಮ್ಮ ತಂಡಕ್ಕಾಗಿ ರನ್ ಗಳಿಸುವ ತವಕದಲ್ಲಿದ್ದಾರೆ. ಇದಕ್ಕಾಗಿ ಅವರು ಕಠಿಣ ತಾಲೀಮಿನಲ್ಲಿ ತೊಡಗಿದ್ದಾರೆ. ಖಂಡಿತವಾಗಿಯೂ ಭಾರತ ಇಲ್ಲಿ ಸರಣಿ ಗೆಲ್ಲಲು ಬಯಸುತ್ತದೆ. ನಾಯಕನಾಗಿ ವಿರಾಟ್ ಕೊಹ್ಲಿ ತಮ್ಮ ತಂಡಕ್ಕಾಗಿ ರನ್ ಗಳಿಸುವ ತವಕದಲ್ಲಿದ್ದಾರೆ ಎಂಬುದು ನಮಗೆ ತಿಳಿದಿದೆ ಎಂದು ಹೇಳಿದರು.
ಖಂಡಿತಾ ಟೆಸ್ಟ್ ಸರಣಿಯಲ್ಲಿ ಭಾರತ ಇಂಗ್ಲೆಂಡ್ ತಂಡಕ್ಕೆ ಪ್ರಬಲ ಪೈಪೋಟಿ ನೀಡಲಿದೆ. ಸದ್ಯ ಬಿಸಿ ಗಾಳಿ ಬೀಸುತ್ತಿರುವ ಹಿನ್ನಲೆಯಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಹವಾಮಾನ ಹೆಚ್ಚು ಹೊಂದಿಕೆಯಾಗಲಿದೆ. ಅಂತೆಯೇ ಸಮಕಾಲೀನ ಕ್ರಿಕೆಟಿಗರಲ್ಲಿ ವಿರಾಟ್ ಕೊಹ್ಲಿ, ಜೋ ರೂಟ್, ಕೇನ್ ವಿಲಿಯಮ್ಸನ್, ಸ್ಟೀವ್ ಸ್ಮಿತ್ ಇವರಲ್ಲಿ ಶ್ರೇಷ್ಠ ಆಟಗಾರ ಯಾರು ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಆ್ಯಂಡರ್ಸನ್, ಇವರೆಲ್ಲರೂ ಅತ್ಯುತ್ತಮ ಆಟಗಾರರಾಗಿದ್ದು, ನಿಜ ಹೇಳಬೇಕೆಂದರೆ ಇವರಿಗೆ ದಾಳಿ ನಡೆಸಲು ಇಷ್ಟಪಡುವುದಿಲ್ಲ ಎಂದು ಹೇಳಿದರು.
ಇನ್ನು ಈ ಹಿಂದೆ ಮಾಧ್ಯಮವೊಂದಕ್ಕೆ ಮಾತನವಾಡಿದ್ದ ವಿರಾಟ್ ಕೊಹ್ಲಿ, ಎಲ್ಲಿಯ ವರೆಗೂ ತಂಡ ಚೆನ್ನಾಗಿ ಆಡುತ್ತದೆಯೋ ಅಲ್ಲಿಯ ವರೆಗೆ ನನ್ನ ವೈಯಕ್ತಿಕ ಫಾರ್ಮ್ ಬಗ್ಗೆ ಚಿಂತಿಸದೇ ಪಂದ್ಯವನ್ನು ಆನಂದಿಸಲಿದ್ದೇನೆ ಎಂದಿದ್ದರು. 
ಇದೇ ಆಗಸ್ಟ್ 1ರಿಂದ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com