ನಟಿ ಎಲ್ಲಿ ಅವ್ರಾಮ್ ಆಯ್ತು ಈಗ ಇಶಾ ಗುಪ್ತಾ ಜತೆ ಹಾರ್ದಿಕ್ ಪಾಂಡ್ಯ ಡೇಟಿಂಗ್!

ನಟಿ ಎಲ್ಲಿ ಅವ್ರಾಮ್ ಜತೆ ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಸುತ್ತಾಡುತ್ತಿರುವ ಫೋಟೋಗಳು ಕಳೆದ ತಿಂಗಳು ಜಗಜ್ಜಾಹೀರು ಆಗಿದ್ದವು....
ಎಲ್ಲಿ-ಹಾರ್ದಿಕ್-ಇಶಾ
ಎಲ್ಲಿ-ಹಾರ್ದಿಕ್-ಇಶಾ
Updated on
ನಟಿ ಎಲ್ಲಿ ಅವ್ರಾಮ್ ಜತೆ ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಸುತ್ತಾಡುತ್ತಿರುವ ಫೋಟೋಗಳು ಕಳೆದ ತಿಂಗಳು ಜಗಜ್ಜಾಹೀರು ಆಗಿದ್ದವು ಈ ಜೋಡಿ ಡೇಟಿಂಗ್ ನಡೆಸುತ್ತಿದೆ ಎಂಬ ವರದಿಗಳು ಬಿತ್ತರವಾಗಿದ್ದವು. ಆದರೆ ಬಾಲಿವುಡ್ ನಲ್ಲಿ ಸುದೀರ್ಘ ಸಂಬಂಧಗಳು ಇರುವುದಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. 
ಹೌದು ಎಲ್ಲಿ ಅವ್ರಾಮ್ ಜೊತೆ ಸುತ್ತಾಡುತ್ತಿದ್ದ ಹಾರ್ದಿಕ್ ಪಾಂಡ್ಯ ಇದೀಗ ಅವರಿಂದ ದೂರವಾಗಿದ್ದಾರೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಬಾಲಿವುಡ್ ನಟಿ ಇಶಾ ಗುಪ್ತಾ ಜತೆ ಹಾರ್ದಿಕ್ ಡೇಟಿಂಗ್ ಶುರು ಮಾಡಿದ್ದಾರೆ ಎಂಬುದು ಇದೀಗ ವರದಿಯಾಗಿದೆ. 
ಪಾರ್ಟಿಯೊಂದರಲ್ಲಿ ಇಶಾ ಗುಪ್ತಾ ಮತ್ತು ಹಾರ್ದಿಕ್ ಪಾಂಡ್ಯ ಭೇಟಿಯಾಗಿದ್ದಾರೆ. ನಂತರ ಇಬ್ಬರು ಮೊಬೈಲ್ ನಂಬರ್ ತೆಗೆದುಕೊಂಡು ಚಾಟಿಂಗ್ ಮಾಡುತ್ತಿದ್ದಾರೆ ಎಂಬ ವಿಷಯವನ್ನು ಇಶಾ ಗುಪ್ತಾ ಆಪ್ತರು ತಿಳಿಸಿದ್ದಾರೆ. 
ಇನ್ನು ತಮ್ಮ ಖಾಸಗಿ ಬದುಕು ಸಾರ್ವಜನಿಕ ಚರ್ಚಾ ವಿಷಯವಾಗದಂತೆ ನೋಡಿಕೊಳ್ಳಲು ಇಬ್ಬರು ಹೆಚ್ಚು ಜಾಗರೂಕವಾಗಿ ತಮ್ಮ ಭೇಟಿಗಳನ್ನು ಗುಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com