ಬಟರ್ ಚಿಕನ್ ಸೇವನೆ ತ್ಯಜಿಸಲು ಎಂಎಸ್ ಧೋನಿಗೆ ವಿರಾಟ್ ಕೊಹ್ಲಿ ಸ್ಪೂರ್ತಿ!

ಕ್ರಿಕೆಟಿಗರು ಪಂದ್ಯದ ವೇಳೆ ಅತ್ಯುತ್ತಮ ಪ್ರದರ್ಶನ ನೀಡಬೇಕಾದರೆ ಅದಕ್ಕೂ ಫಿಟ್ನೆಸ್ ಸಹ ಬೇಕಾಗುತ್ತದೆ. ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳುವ ಸಲುವಾಗಿ ಆಟಗಾರರು ಕಟ್ಟುನಿಟ್ಟಿನ ಡಯೇಟ್ ಮಾಡಬೇಕಾಗುತ್ತದೆ...
ವಿರಾಟ್ ಕೊಹ್ಲಿ, ಎಂಎಸ್ ಧೋನಿ
ವಿರಾಟ್ ಕೊಹ್ಲಿ, ಎಂಎಸ್ ಧೋನಿ
ಕ್ರಿಕೆಟಿಗರು ಪಂದ್ಯದ ವೇಳೆ ಅತ್ಯುತ್ತಮ ಪ್ರದರ್ಶನ ನೀಡಬೇಕಾದರೆ ಅದಕ್ಕೂ ಫಿಟ್ನೆಸ್ ಸಹ ಬೇಕಾಗುತ್ತದೆ. ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳುವ ಸಲುವಾಗಿ ಆಟಗಾರರು ಕಟ್ಟುನಿಟ್ಟಿನ ಡಯೇಟ್ ಮಾಡಬೇಕಾಗುತ್ತದೆ. 
ಇನ್ನು ಟೀಂ ಇಂಡಿಯಾದ ತಂಡದಲ್ಲಿ ವಿರಾಟ್ ಕೊಹ್ಲಿ ಸದ್ಯ ಅತ್ಯುತ್ತಮ ಫಿಟ್ನೆಸ್ ಅನ್ನು ಕಾಪಾಡಿಕೊಂಡು ಬಂದಿದ್ದಾರೆ. ತಮ್ಮ ಫಿಟ್ನೆಸ್ ಗಾಗಿ ತಮ್ಮ ಅತ್ಯಂತ ಇಷ್ಟವಾದ ಚಿಕನ್ ಅನ್ನು ಸಹ ಸೇವನೆ ಮಾಡುವುದನ್ನು ಬಿಟ್ಟುಬಿಟ್ಟಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. 
ಕಳೆದ ಐದು ವರ್ಷಗಳಲ್ಲಿ ವಿರಾಟ್ ಕೊಹ್ಲಿ ಚಿಕನ್ ಮುಟ್ಟಿಲ್ಲ. ಅಂತೇ ಇದೀಗ ಕೊಹ್ಲಿಯಿಂದ ಸ್ಪೂರ್ತಿ ಪಡೆದಿರುವ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಹ ಚಿಕನ್ ತಿನ್ನುವುದನ್ನು ಬಿಟ್ಟುಬಿಟ್ಟಿದ್ದಾರೆ. 
ಎಂಎಸ್ ಧೋನಿ 2014ರಲ್ಲಿ ಟೆಸ್ಟ್ ತಂಡದ ನಾಯಕತ್ವಕ್ಕೆ ವಿದಾಯ ಹೇಳಿದ್ದರು. ಅಲ್ಲಿಂದ ತಮ್ಮ ಡಯೇಟ್ ಅನ್ನು ಕಟ್ಟು ನಿಟ್ಟು ಮಾಡಿಕೊಂಡಿರುವ ಧೋನಿ ಸಹ ಚಿಕನ್ ತಿನ್ನುವುದನ್ನು ಬಿಟ್ಟುಬಿಟ್ಟಿದ್ದಾರೆ. ಇದಕ್ಕೆ ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಪಂದ್ಯಾವಳಿ ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com