ಟ್ವಿಟರ್ ಆಯ್ತು, ಈಗ ಕಾನೂನು ಸಮರ: ಅನುಷ್ಕಾ, ಕೊಹ್ಲಿಗೆ ಅರ್ಹಾನ್ ಸಿಂಗ್ ಲೀಗಲ್ ನೋಟಿಸ್
ರಸ್ತೆ ಮೇಲೆ ಕಸ ಎಸೆದ ಎಂದು ನಿಂದಿಸಿದ ಆರೋಪದ ಮೇರೆಗೆ ನಟ ಅರ್ಹಾನ್ ಸಿಂಗ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದು, ನವ ದಂಪತಿಗಳಿಗೆ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.
ಮುಂಬೈ: ರಸ್ತೆ ಮೇಲೆ ಕಸ ಎಸೆದ ಎಂದು ನಿಂದಿಸಿದ ಆರೋಪದ ಮೇರೆಗೆ ನಟ ಅರ್ಹಾನ್ ಸಿಂಗ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದು, ನವ ದಂಪತಿಗಳಿಗೆ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.
ಈ ಬಗ್ಗೆ ಹಿಂದಿ ಸುದ್ದಿ ಮಾಧ್ಯಮವೊಂದಕ್ಕೆ ನಟ ಅರ್ಹಾನ್ ಸಿಂಗ್ ಮೊಬೈಲ್ ಸಂದೇಶದ ಮೂಲಕ ಮಾಹಿತಿ ನೀಡಿದ್ದು, ನನ್ನ ವಕೀಲರ ಮೂಲಕ ಕೊಹ್ಲಿ ದಂಪತಿಗೆ ಲೀಗಲ್ ನೋಟಿಸ್ ನೀಡಲಾಗಿದೆ. ಈಗ ಚೆಂಡು ಕೋರ್ಟ್ ಅಂಗಳದಲ್ಲಿದ್ದು, ಈ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ.
ಕೊಹ್ಲಿ-ಅನುಷ್ಕಾ ಜೋಡಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಮತ್ತೊಂದು ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ರಸ್ತೆಯ ಮೇಲೆ ಕಸ ಎಸೆಯುತ್ತಿರುವುದನ್ನು ಕಂಡಿದ್ದರು. ಕಂಡು ಸುಮ್ಮನಿರದ ಅನುಷ್ಕಾ ಕಸ ಎಸೆದ ವ್ಯಕ್ತಿ ಅರ್ಹಾನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅರ್ಹಾನ್ ಕ್ಷಮೆಯಾಚಿಸಿದ್ದರೂ ಬಿಡದೆ ವಿರುಷ್ಕಾ ಸಿಡುಕಾಡಿದ್ದರು. ಆ ಸಂದರ್ಭ ಅನುಷ್ಕಾ ಅವರು ಅರ್ಹಾನ್ ಅವರಿಗೆ ಸ್ವಚ್ಛತೆಯ ಪಾಠ ಮಾಡಿದ್ದನ್ನು ಕೊಹ್ಲಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು. ಈ ವಿಡಿಯೋ ವೈರಲ್ ಕೂಡ ಆಗಿತ್ತು.
ಈ ಘಟನೆ ಸಂದರ್ಭ ಕಾರಿನಲ್ಲಿದ್ದು ಅವಮಾನಕ್ಕೀಡಾಗಿದ್ದ ಅರ್ಹಾನ್ ಮತ್ತವರ ತಾಯಿ ಗೀತಾಂಜಲಿ, ಅವಮಾನಿಸುವ ರೀತಿಯಲ್ಲಿ ಸಾರ್ವಜನಿಕವಾಗಿ ಸ್ವಚ್ಛತೆಯ ಪಾಠ ಮಾಡಿದ ವಿರಾಟ್-ಅನುಷ್ಕಾ ಜೋಡಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಅರ್ಹಾನ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಅಸಮಾಧಾನ ವ್ಯಕ್ತಪಡಿಸಿದ್ದರು. ಜೊತೆಗೆ ಈಗ ಕಾನೂನು ರೀತಿಯಲ್ಲಿ ಕೊಹ್ಲಿ-ಅನುಷ್ಕಾ ಜೋಡಿಗೆ ಎಚ್ಚರಿಕೆ ನೀಡಲು ಅರ್ಹಾನ್ ಮುಂದಾಗಿದ್ದಾರೆ.
Saw these people throwing garbage on the road & pulled them up rightfully. Travelling in a luxury car and brains gone for a toss. These people will keep our country clean? Yeah right! If you see something wrong happening like this, do the same & spread awareness. @AnushkaSharmapic.twitter.com/p8flrmcnba