ಸೌರವ್ ಗಂಗೂಲಿ ತಿರಸ್ಕರಿಸಿದ್ದನ್ನು ಎಂಎಸ್ ಧೋನಿ ಸ್ವ ಇಚ್ಛೆಯಿಂದ ಮಾಡಿದ್ದಾದರೂ ಏನು ಗೊತ್ತಾ?

ಟೀಂ ಇಂಡಿಯಾದ ಮಿಸ್ಟರ್ ಕೂಲ್ ಎಂದೇ ಖ್ಯಾತರಾಗಿರುವ ಎಂಎಸ್ ಧೋನಿ ಇದೀಗ ತಮ್ಮ ಸರಳತೆಯಿಂದ ಅಭಿಮಾನಿಗಳ ಮನಸನ್ನು ಗೆದ್ದಿದ್ದಾರೆ...
ಸೌರವ್ ಗಂಗೂಲಿ-ಎಂಎಸ್ ಧೋನಿ
ಸೌರವ್ ಗಂಗೂಲಿ-ಎಂಎಸ್ ಧೋನಿ
ಡಬ್ಲಿನ್: ಟೀಂ ಇಂಡಿಯಾದ ಮಿಸ್ಟರ್ ಕೂಲ್ ಎಂದೇ ಖ್ಯಾತರಾಗಿರುವ ಎಂಎಸ್ ಧೋನಿ ಇದೀಗ ತಮ್ಮ ಸರಳತೆಯಿಂದ ಅಭಿಮಾನಿಗಳ ಮನಸನ್ನು ಗೆದ್ದಿದ್ದಾರೆ. 
ಹೌದು, ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ತಿರಸ್ಕರಿಸಿದ್ದನ್ನು ಎಂಎಸ್ ಧೋನಿ ಸ್ವ ಇಚ್ಛೆಯಿಂದ ಮಾಡಿದ್ದಾರೆ. ನಾಲ್ಕು ಯುವ ಕ್ರಿಕೆಟಿಗರು ಬೆಂಚ್ನಲ್ಲಿದ್ದರು ಇನ್ನಿಂಗ್ಸ್ ಮಧ್ಯೆ ಡ್ರಿಂಕ್ಸ್ ಪೂರೈಕೆ ಮಾಡುವ ಮೂಲಕ ಧೋನಿ ಮತ್ತೊಮ್ಮೆ ಸರಳತೆ ಮೆರೆದಿದ್ದಾರೆ. 
ಐರ್ಲೆಂಡ್ ವಿರುದ್ಧ ಭಾರತ ಟಿ20 ಸರಣಿಯನ್ನು ಕೈವಶ ಮಾಡಿಕೊಂಡಿದೆ. ನಿನ್ನೆ ನಡೆದ ಎರಡನೇ ಟಿ20 ಪಂದ್ಯದ ಡ್ರಿಂಕ್ಸ್ ಬ್ರೇಕ್ ವೇಳೆ ವೇಳೆ ಸ್ವತಃ ಎಂಎಸ್ ಧೋನಿಯೇ ನೀರು ಹಾಗೂ ತಂಪು ಪಾನೀಯವಿದ್ದ ಬ್ಯಾಗ್ ಅನ್ನು ಹಿಡಿದು ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮೈದಾನದಲ್ಲಿ ತಮ್ಮ ಸರಳತೆಯಿಂದಲೇ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ನಿನ್ನೆ ಡ್ರಿಂಕ್ಸ್ ಬಾಯ್ ಆಗಿ ಕೂಡ ಕೆಲಸ ಮಾಡಿ ತಂಡದಲ್ಲಿ ತಾನು ಒಬ್ಬ ಸಾಮಾನ್ಯ ಆಟಗಾರ ಎಂದು ತೋರಿಸಿದ್ದಾರೆ. 
1991ರಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಅಂದು ತಮ್ಮ ಸಹ ಆಟಗಾರರಿಗೆ ನೀರು ಕೊಡಲು ತಂಡದ ವ್ಯವಸ್ಥಾಪಕರು ಹೇಳಿದಾಗ ಡ್ರಿಂಕ್ಸ್ ತೆಗೆದುಕೊಂಡು ಹೋಗಲ್ಲ ಎಂದು ಖಡಕ್ಕಾಗಿಯೇ ಹೇಳಿದ್ದರು. ಇದು ಕೋಚ್ ಹಾಗೂ ವ್ಯವಸ್ಥಾಪಕರ ಕೆಂಗಣ್ಣಿಗೂ ಸಹ ಗುರಿಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com