ವಿರಾಟ್ ಕೊಹ್ಲಿಯನ್ನು ನೋಡಿದರೆ ನನಗೆ ಇಮ್ರಾನ್ ಖಾನ್ ನೆನಪಾಗುತ್ತಾರೆ: ರವಿ ಶಾಸ್ತ್ರಿ
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಹಾಡಿ ಹೊಗಳಿರುವ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ವಿರಾಟ್ ಕೊಹ್ಲಿಯನ್ನು ಪಾಕಿಸ್ತಾನ ತಂಡದ ಮಾಜಿ ನಾಯಕ ಇಮ್ರಾನ್ ಖಾನ್ ಗೆ ಹೋಲಿಕೆ ಮಾಡಿದ್ದಾರೆ.
ಕೋಲ್ಕತ್ತಾ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಹಾಡಿ ಹೊಗಳಿರುವ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ವಿರಾಟ್ ಕೊಹ್ಲಿಯನ್ನು ಪಾಕಿಸ್ತಾನ ತಂಡದ ಮಾಜಿ ನಾಯಕ ಇಮ್ರಾನ್ ಖಾನ್ ಗೆ ಹೋಲಿಕೆ ಮಾಡಿದ್ದಾರೆ.
ವಿಶ್ವಕಪ್ ಗೆದ್ದಾಗ ಪಾಕ್ ತಂಡವನ್ನು ಮುನ್ನಡೆಸಿದ್ದ ಇಮ್ರಾನ್ ಖಾನ್ ಗೂ ವಿರಾಟ್ ಕೊಹ್ಲಿ ಗೂ ಸಾಕಷ್ಟು ಸಾಮ್ಯತೆ ಇದೆ ಎಂದು ಟೀಂ ಇಂಡಿಯ ಕೋಚ್ ಅಭಿಪ್ರಾಯಪಟ್ಟಿದ್ದಾರೆ. ವಿರಾಟ್ ಕೊಹ್ಲಿ ಇನ್ನೂ ಯುವಕ, ಆಗಲೇ ಅತ್ಯಂತ ಶ್ರೇಷ್ಠ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿದ್ದಾರೆ. ವಿರಾಟ್ ಕೊಹ್ಲಿಯನ್ನು ನೋಡಿದಾಗಲೆಲ್ಲಾ ಇಮ್ರಾನ್ ಖಾನ್ ನೆನಪಾಗುತಾರೆ. ತಂಡವನ್ನು ಮುನ್ನಡೆಸುವ ವಿಚಾರದಲ್ಲಿ ಇಮ್ರಾನ್ ಖಾನ್ ಗೆ ಇದ್ದ ಗುಣಗಳು ವಿರಾಟ್ ಕೊಹ್ಲಿಯಲ್ಲಿಯೂ ಕಾಣುತ್ತವೆ ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.
ಇತ್ತೀಚೆಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ 3 ಶತಕ ಹಾಗೂ 1 ಅರ್ಧ ಶತಕ ದಾಖಲಿಸುವ ಮೂಲಕ ಸರಣಿಯೊಂದರಲ್ಲಿ 500 ಕ್ಕೂ ಹೆಚ್ಚು ರನ್ ಗಳಿಸಿದ್ದ ಮೊದಲ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ವಿರಾಟ್ ಪಾತ್ರರಾಗಿದ್ದರು.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ರವಿ ಶಾಸ್ತ್ರಿ, ಶ್ರೇಷ್ಠ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಬೇಕೆಂಬ ಇಚ್ಛೆ, ಅಗಾಧವಾದ ಶಕ್ತಿ ಇಬ್ಬರಲ್ಲಿನ ಸಾಮ್ಯತೆ ಆದ್ದರಿಂದ ವಿರಾಟ್ ಕೊಹ್ಲಿಯನ್ನು ನೋಡಿದರೆ ನನಗೆ ಇಮ್ರಾನ್ ಖಾನ್ ನೆನಪಾಗುತ್ತಾರೆ ಎಂದಿದ್ದಾರೆ ರವಿಶಾಸ್ತ್ರಿ