ರಾಷ್ಟ್ರೀಯ ಆಯ್ಕೆ ಸಮಿತಿ ಸಲಹೆ ಪಡೆಯದೇ ಬಿಸಿಸಿಐನಿಂದ ಆಟಗಾರರ ವೇತನ ಪರಿಷ್ಕರಣೆ?

Published On :
ಚೆನ್ನೈ: ಇತ್ತೀಚೆಗೆ ಆಟಗಾರರ ವೇತನ ಪರಿಷ್ಕರಣಿ ಮಾಡಿ ಸುದ್ದಿಗೆ ಗ್ರಾಸವಾಗಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ವೇತನ ಪರಿಷ್ಕರಣೆ ವೇಳೆ ತಂಡ ಆಯ್ಕೆ ಸಮಿತಿ ಸಲಹೆಯನ್ನೇ ಪಡೆದಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಹೌದು..ಈ ಹಿಂದೆ ಟೀಂ ಇಂಡಿಯಾ ಆಟಗಾರರ ವೇತನ ಪರಿಷ್ಕರಣಾ ಪಟ್ಟಿ ಬಿಡುಗಡೆ ಮಾಡಿದ್ದ ಬಿಸಿಸಿಐ ಎಪ್ಲಸ್ ಕ್ಯಾಟಗರಿಯಿಂದ ಮಹೇಂದ್ರ ಸಿಂಗ್ ಧೋನಿ ಅವರಂತ ಹಿರಿಯ ಆಟಗಾರನ್ನು ಹಿಂಬಡ್ತಿ ನೀಡಿ ಕ್ರಿಕೆಟ್ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಬಿಸಿಸಿಐ ದುಡುಕಿನ ನಿರ್ಧಾರ ಕೈಗೊಂಡಿದೆ ಎಂಬ ಆರೋಪ ಕೇಳಿಬರುತ್ತಿರುವ ಹೊತ್ತಿನಲ್ಲೇ ಬಿಸಿಸಿಐ ವೇತನ ಪರಿಷ್ಕರಣೆಗೂ ಮುನ್ನ ತಂಡದ ಆಯ್ಕೆ ಸಮಿತಿಯ ಸಲಹೆಯನ್ನೇ ಪಡೆದಿಲ್ಲ ಎಂದು ಹೇಳಲಾಗಿದೆ. ಬಿಸಿಸಿಐನ ಈ ನಡೆ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು. ಸುಪ್ರೀಂ ಕೋರ್ಟ್ ಗೆ ಬಿಸಿಸಿಐ ನೀಡಿರುವ ಮಾಹಿತಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.
ಬಿಸಿಸಿಐ ಕಾರ್ಯಕಾರಿ ಅಧ್ಯಕ್ಷ ಅಮಿತಾಬ್ ಚೌದರಿ ಅವರು ವೇತನ ಪರಿಷ್ಕರಣೆ ವೇಳೆ ತಂಡದ ಆಯ್ಕೆ ಸಮಿತಿ ಸದಸ್ಯರ ಸಂಪರ್ಕಿಸಿದೆಯೇ ನೂತನ ವೇತನ ಪರಿಷ್ಕರಣಾ ಪಟ್ಟಿಗೆ ಸಹಿ ಹಾಕಿದ್ದಾರೆ. 2004-05ರಲ್ಲಿ ಜಾರಿಗೆ ಬಂದ ಬಿಸಿಸಿಐ ವಾರ್ಷಿಕ ವೇತನ ಪರಿಷ್ಕರಣೆ ವ್ಯವಸ್ಥೆಯಲ್ಲಿ ಈ ವರೆಗೂ ಪ್ರತೀ ವರ್ಷ ವೇತನ ಪರಿಷ್ಕರಣೆ ವೇಳೆ ತಂಡದ ಆಯ್ಕೆ ಸಮಿತಿ ಸದಸ್ಯರನ್ನು ಸಂಪರ್ಕಿಸಿಯೇ ವೇತನ ಪರಿಷ್ಕರಣೆ ಮಾಡಲಾಗುತ್ತಿತ್ತು. ಆದರೆ ಈ ನಿಯಮವನ್ನು ಮೀರಿ ಇದೀಗ ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರ ಪಾತ್ರವಿಲ್ಲದೇ ಆಟಗಾರರ ವೇತನ ಪರಿಷ್ಕರಣೆ ಮಾಡಿರುವುದು ಹಲವ ಹುಬ್ಬೇರಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಎಡುಲ್ಜಿ ಅವರು, ಬಿಸಿಸಿಐನ ಆರ್ಥಿಕ ಸಮಿತಿ ವೇತನ ಪರಿಷ್ಕರಣೆ ಸಂಬಂದ ಆಯ್ಕೆ ಸಮಿತಿ ಕನಿಷ್ಟ ಒಂದೇ ಒಂದು ಇ-ಮೇಲ್ ಕೂಡ ಮಾಡಿಲ್ಲ. ಬಿಸಿಸಿಐ ಖಜಾಂಚಿಗಳು ನೀಡಿರುವ ಪಟ್ಟಿಯಲ್ಲಿ ಅಂಪೈರ್ ಗಳು, ಕ್ಯುರೇಟರ್ ಗಳ ವೇತನ ಕೂಡ ಪರಿಷ್ಕರಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಅಂತೆಯೇ ಆಯ್ಕೆ ಸಮಿತಿ ಸಂಚಾಲಕರೂ ಕೂಡ ಆಗಿರುವ ಚೌದರಿ ಅವರು, ವೇತನ ಪರಿಷ್ಕರಣೆ ಸಂಬಂಧ ಆಯ್ಕೆ ಸಮಿತಿಯೊಂದಿಗೆ ಯಾವುದೇ ಸಭೆ ನಡೆಸಿಲ್ಲ, ವೇತನ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನಾನು ಭಾಗಿಯಾಗಿಲ್ಲ. ಓರ್ವ ಸಂಚಾಲಕನಾಗಿ ನಾನು ಆಯ್ಕೆ ಸಮಿತಿಯೊಂದಿಗೆ ಈ ಬಗ್ಗೆ ಯಾವುದೇ ಭೇಟಿಯಾಗಿಲ್ಲ ಎಂಬುದನ್ನು ಮಾತ್ರ ನಾನು ಹೇಳಬಲ್ಲೆ. ಈವರೆಗೂ ವೇತನ ಪರಿಷ್ಕರಣೆ ಸಂಬಂಧ ಯಾವುದೇ ರೀತಿಯ ಒಪ್ಪಂದ ಪತ್ರಗಳು ತಮ್ಮನ್ನು ತಲುಪಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.\
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


