ಇದೇ ಮೊದಲ ಬಾರಿಗೆ ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿ ಟೂರ್ನಿಯ ಪ್ರಚಾರಕ್ಕಾಗಿ ಗೀತೆಯೊಂದನ್ನು ಹೊರತಂದಿದ್ದು, ಗೀತೆಯ ಬಿಡುಗಡೆ ಮೂಲಕ ಟೂರ್ನಿಯ ಪ್ರಚಾರ ಕಾರ್ಯಕ್ಕೆ ಅಧಿಕೃತ ಚಾಲನೆ ನೀಡಿದೆ. ಬಿಸಿಸಿಐ ಬಿಡುಗಡೆ ಮಾಡಿರುವ ಟೂರ್ನಿಯ ಬೆಸ್ಟ್ ವರ್ಸಸ್ ಬೆಸ್ಟ್ ಗೀತೆಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಗೀತೆ ಇದೀಗ ವ್ಯಾಪಕ ವೈರಲ್ ಆಗಿದೆ.