ರಬಾಡ-ಸ್ಟೀವ್ ಸ್ಮಿತ್ ಜಗಳದಲ್ಲಿ ಕೊಹ್ಲಿ ಹೆಸರು ಎಳೆದು ತಂದ ಆಫ್ರಿಕಾ ಸ್ಪಿನ್ನರ್ ಪಾಲ್ ಹ್ಯಾರಿಸ್!

ರಬಾಡ ಮತ್ತು ಆಸಿಸ್ ನಾಯಕ ಸ್ಟೀವ್ ಸ್ಮಿತ್ ಅವರ ನಡುವಿನ ಜಗಳದ ವಿವಾದದಲ್ಲಿ ಆಫ್ರಿಕಾ ಸ್ಪಿನ್ನರ್ ಪಾಲ್ ಹ್ಯಾರಿಸ್ ಅನಾವಶ್ಯಕವಾಗಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಹೆಸರನ್ನು ಎಳೆದು ತಂದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ನಡುವಣ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಹರಿಣಗಳ ವೇಗಿ ಕಗಿಸೋ ರಬಾಡ ಮತ್ತು ಆಸಿಸ್ ನಾಯಕ ಸ್ಟೀವ್ ಸ್ಮಿತ್ ಅವರ ನಡುವಿನ ಜಗಳದ ವಿಚಾರ ಇದೀಗ ಕ್ರಿಕೆಟ್ ವಲಯದಲ್ಲಿ ಬಾರಿ ಸದ್ದು ಮಾಡುತ್ತಿದ್ದು, ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಆಫ್ರಿಕಾ ಸ್ಪಿನ್ನರ್ ಪಾಲ್ ಹ್ಯಾರಿಸ್ ವಿವಾದದಲ್ಲಿ ಅನಾವಶ್ಯಕವಾಗಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಹೆಸರನ್ನು ಎಳೆದು ತಂದಿದ್ದಾರೆ.
ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಹರಿಣಗಳ ವೇಗಿ ಕಗಿಸೋ ರಬಾಡ ಮತ್ತು ಆಸಿಸ್ ನಾಯಕ ಸ್ಟೀವ್ ಸ್ಮಿತ್ ಪರಸ್ಪರ ಭುಜ ಸ್ಪರ್ಶಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಐಸಿಸಿ ಆಪ್ರಿಕಾದ ವೇಗಿಗೆ 2 ಪಂದ್ಯಗಳ ನಿಷೇಧ ಹೇರಿತ್ತು. ಈ ಘಟನೆಗೂ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗೂ ಯಾವುದೇ ರೀತಿಯ ಸಂಬಂಧವಿಲ್ಲದೇ ಇದ್ದರೂ ಆಫ್ರಿಕಾದ ಸ್ಪಿನ್ನರ್ ಪಾಲ್ ಹ್ಯಾರಿಸ್ ವಿವಾದಲ್ಲಿ ಕೊಹ್ಲಿ ಹೆಸರನ್ನು ಪ್ರಸ್ತಾಪಿಸುವ ಮೂಲಕ ಹೊಸದೊಂದು ವಿವಾದ ಹುಟ್ಟುಹಾಕಿದ್ದಾರೆ.
ರಬಾಡಾಗೆ ಐಸಿಸಿ ವಿಧಿಸಿರುವ ನಿಷೇಧ ಶಿಕ್ಷೆಯನ್ನು ವಿರೋಧಿಸುವ ಭರದಲ್ಲಿ ಪಾಲ್ ಹ್ಯಾರಿಸ್ ಕೊಹ್ಲಿ ಹೆಸರನ್ನು ಉಲ್ಲೇಖ ಮಾಡಿದ್ದು, ಈ ಹಿಂದೆ ಭಾರತ ತಂಡ ಆಫ್ರಿಕಾ ಪ್ರವಾಸ ಕೈಗೊಂಡಿದ್ದಾಗಲೂ ಕೊಹ್ಲಿ ಆಕ್ಷೇಪಾರ್ಹವಾಗಿ ವರ್ತಿಸಿದ್ದರು. ಆದರೆ ಅಂದು ಕೊಹ್ಲಿ ಮೇಲೆ ಐಸಿಸಿ ಯಾವುದೇ ರೀತಿಯ ಶಿಸ್ತು ಕ್ರಮ ಕೈಗೊಂಡಿರಲಿಲ್ಲ. ಕೊಹ್ಲಿಗಿಲ್ಲದ ಶಿಕ್ಷೆ ರಬಾಡಾಗೆ ಏಕೆ ಎಂದು ಪಾಲ್ ಹ್ಯಾರಿಸ್ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ. 
ಇನ್ನು ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಸ್ಮಿತ್ ಮೇಲೆ ಭುಜ ಸ್ಪರ್ಶಿಸಿರುವ ರಬಾಡ ಮೇಲೆ ಪಂದ್ಯ ಶುಲ್ಕದ ಶೇಕಡಾ 50ರಷ್ಟು ದಂಡ ಹಾಗೂ ಮೂರು ಡಿಮೆರಿಟ್ ಪಾಯಿಂಟ್‌ಗಳನ್ನು ಹೇರಲಾಗಿತ್ತು. ಇದರಿಂದಾಗಿ ಎರಡು ಪಂದ್ಯಗಳನ್ನು ಕಳೆದುಕೊಳ್ಳುವಂತಾಗಿದೆ.
ಆಫ್ರಿಕನ್ ಸ್ಪಿನ್ನರ್ ನ ಈ ಟ್ವೀಟ್ ಇದೀಗ ಭಾರತೀಯ ಕ್ರಿಕೆಟ್ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಈ ಹಿಂದೆ ಆಫ್ರಿಕಾ ಸರಣಿಯಲ್ಲಿ ಅಂಪೈರ್ ವಿರುದ್ಧ ಅನುಚಿತವಾಗಿ ವರ್ತಿಸಿದ್ದ ಕೊಹ್ಲಿ, ಆಕ್ರೋಶ ಭರಿತರಾಗಿ ಚೆಂಡನ್ನು ನೆಲಕ್ಕೆ ಎಸೆದಿದ್ದರು. ಇದರ ಹೊರತಾಗಿಯೂ ಪಂದ್ಯ ಶುಲ್ಕದ ಶೇಕಡಾ 25ರಷ್ಟು ದಂಡವನ್ನು ವಿಧಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com