'ವಿ ಚೀಟ್ ಕ್ರಿಕೆಟ್, ಓಹ್ ಎಸ್': ವೈರಲ್ ಆಯ್ತು ಆಸಿಸ್ ಕ್ರಿಕೆಟಿಗರ ಬಾಲ್ ಟ್ಯಾಂಪರಿಂಗ್ ವ್ಯಂಗ್ಯದ ಹಾಡು!

'ವಿ ಚೀಟ್ ಕ್ರಿಕೆಟ್, ಓಹ್ ಎಸ್' ಇದು ಯಾವುದೇ ಪಾಪ್ ಗೀತೆಯಲ್ಲ.. ಬದಲಿಗೆ ತಮ್ಮದೇ ಆಟಗಾರರ ವಿರುದ್ಧ ಆಸ್ಟ್ರೇಲಿಯಾದ ರೇಡಿಯೋ ಸ್ಟೇಷನ್ ವೊಂದು ವ್ಯಂಗ್ಯ ಮಾಡಿರುವ ಹಾಡು..
ವೈರಲ್ ಆಯ್ತು ಆಸಿಸ್ ಕ್ರಿಕೆಟಿಗರ ಬಾಲ್ ಟ್ಯಾಂಪರಿಂಗ್ ವ್ಯಂಗ್ಯದ ಹಾಡು
ವೈರಲ್ ಆಯ್ತು ಆಸಿಸ್ ಕ್ರಿಕೆಟಿಗರ ಬಾಲ್ ಟ್ಯಾಂಪರಿಂಗ್ ವ್ಯಂಗ್ಯದ ಹಾಡು
ಸಿಡ್ನಿ: 'ವಿ ಚೀಟ್ ಕ್ರಿಕೆಟ್, ಓಹ್ ಎಸ್' ಇದು ಯಾವುದೇ ಪಾಪ್ ಗೀತೆಯಲ್ಲ.. ಬದಲಿಗೆ ತಮ್ಮದೇ ಆಟಗಾರರ ವಿರುದ್ಧ ಆಸ್ಟ್ರೇಲಿಯಾದ ರೇಡಿಯೋ ಸ್ಟೇಷನ್ ವೊಂದು ವ್ಯಂಗ್ಯ ಮಾಡಿರುವ ಹಾಡು..
ಹೌದು.. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ಲೇಲಿಯಾ ಆಟಗಾರರು ಚೆಂಡು ವಿರೂಪಗೊಳಿಸಿ ಆಸ್ಟ್ಲೇಲಿಯಾದ ಮಾನ ಹರಾಜು ಹಾಕಿದ ಹಿನ್ನಲೆಯಲ್ಲಿ ಕ್ರಿಕೆಟಿಗರ ವಿರುದ್ಧ ಕೆಂಡಾಮಂಡಲರಾಗಿರುವ ಅಭಿಮಾನಿಗಳು ತಮ್ಮದೇ ನಾಡಿನ ಕ್ರಿಕೆಟಿಗರ ವಿರುದ್ಧ ವ್ಯಂಗ್ಯ, ತಮಾಷೆಗಳ ಮೂಲಕ ಘಟನೆಯನ್ನು ಖಂಡಿಸುತ್ತಿದ್ದಾರೆ. ಇದಕ್ಕೆ ನೂತನ ಸೇರ್ಪಡೆ ಎಂಬಂತೆ ಆಸ್ಟ್ರೇಲಿಯಾದ ಟ್ರಿಪಲ್ ಜೆ ರೆಡಿಯೋ ಸ್ಟೇಷನ್ 'ವಿ ಚೀಟ್ ಕ್ರಿಕೆಟ್, ಓಹ್ ಎಸ್' ಎಂಬ ಹಾಡನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದೆ. 
ಆ ಮೂಲಕ ತನ್ನದೇ ಆದ ದಾಟಿಯಲ್ಲಿ ಸ್ಟೀವ್ ಸ್ಮಿತ್ ಬಳಕ್ಕೆ ಛೀಮಾರಿ ಹಾಕಿದೆ. ಆಸಿಸ್ ಕ್ರಿಕೆಟಿಗರ ಚೆಂಡು ವಿರೂಪಗೊಳಿಸಿದ ಪ್ರಕರಣದಿಂದಾಗಿ ಆಸ್ಟ್ರೇಲಿಯನ್ ಕ್ರಿಕೆಟ್ ಅಭಿಮಾನಿಗಳು ಯಾವ ಮಟ್ಟಿಗೆ ಅವರ ಮೇಲೆ ಕೊಪಗೊಂಡಿದ್ದಾರೆ ಎನ್ನುವುದಕ್ಕೆ ಈ ಹಾಡು ಸಾಕ್ಷಿ ಎಂಬಂತಿದೆ. ಹಾಡಿನಲ್ಲಿ ಆಸಿಸ್ ತಂಡದ ನಾಯಕ ಸ್ಟೀವ್ ಸ್ಮಿತ್, ಚೆಂಡು ವಿರೂಪಗೊಳಿಸಿದ ಬ್ಯಾಂಕ್ರಾಫ್ಟ್ ಮತ್ತು ಕೋಚ್ ಲೆಹ್ಮನ್, ತನ್ನದಲ್ಲದ ತಪ್ಪಿಗೆ ಶಿಕ್ಷೆಗೆ ಗುರಿಯಾಗಿರುವ ಉಪನಾಯಕ ಡೇವಿಡ್ ವಾರ್ನರ್ ಅವರನ್ನು ವ್ಯಂಗ್ಯ ಮಾಡಲಾಗಿದೆ.
ಅಲ್ಲದೇ ಇದೇ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಗ್ರೇಗ್ ಚಾಪೆಲ್ ಅವರನ್ನೂ ಈ ಹಾಡಿನಲ್ಲಿ ಅಣಕ ಮಾಡಲಾಗಿದ್ದು, 1981ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಗ್ರೇಗ್ ಚೆಂಡನ್ನು ಬೌಲಿಂಗ್ ಮಾಡುವ ಬದಲು ಬ್ಯಾಟ್ಸಮನ್ ನತ್ತ ಉರುಳಿಸುವಂತೆ ನೀಡಿದ್ದ ನಿರ್ದೇಶನವನ್ನೂ ಅಣಕಿಸಲಾಗಿದೆ. 
ಒಟ್ಟಾರೆ ಆಸಿಸ್ ತಂಡ ಈ ವರೆಗೂ ಮಾಡಿರುವ ಮೋಸದಾಟವನ್ನು ಈ ಹಾಡಿನಲ್ಲಿ ಎಳೆಎಳೆಯಾಗಿ ಚಿತ್ರಿಸುವ ಮೂಲಕ ಆಸಿಸ್ ತಂಡಕ್ಕೆ ಛೀಮಾರಿ ಹಾಕಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com