ಐಪಿಎಲ್-2018: ಪಂಜಾಬ್ ವಿರುದ್ಧ ಆರ್ ಸಿಬಿಗೆ 10 ವಿಕೆಟ್ ಗಳ ಗೆಲುವು

ಆರ್ ಸಿಬಿ ಬೌಲರ್ ಗಳ ಮಾರಕ ದಾಳಿಗೆ ತತ್ತರಿಸಿದ್ದ ಪಂಜಾಬ್ ವಿರುದ್ಧ ಆರ್ ಸಿಬಿ ತಂಡ 10 ವಿಕೆಟ್ ಗಳ ಗೆಲುವು ದಾಖಲಿಸಿದೆ.
ಐಪಿಎಲ್-2018:  ಪಂಜಾಬ್ ವಿರುದ್ಧ ಆರ್ ಸಿಬಿಗೆ 10 ವಿಕೆಟ್ ಗಳ ಗೆಲುವು
ಐಪಿಎಲ್-2018: ಪಂಜಾಬ್ ವಿರುದ್ಧ ಆರ್ ಸಿಬಿಗೆ 10 ವಿಕೆಟ್ ಗಳ ಗೆಲುವು
ಇಂದೋರ್: ಆರ್ ಸಿಬಿ ಬೌಲರ್ ಗಳ ಮಾರಕ ದಾಳಿಗೆ ತತ್ತರಿಸಿದ್ದ ಪಂಜಾಬ್ ವಿರುದ್ಧ ಆರ್ ಸಿಬಿ ತಂಡ 10 ವಿಕೆಟ್ ಗಳ ಗೆಲುವು ದಾಖಲಿಸಿದೆ. 
 ಟಾಸ್  ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ತಂಡ 88 ರನ್ ಗಳಿಗೆ ಸರ್ವತಪತನ ಕಂಡಿತ್ತು (88 ಕ್ಕೆ ಆಲ್ ಔಟ್: ಐಪಿಎಲ್-2018 ಆವೃತ್ತಿಯಲ್ಲಿ ದಾಖಲಾದ 2ನೇ ಅತಿ ಕನಿಷ್ಠ ರನ್) ಅತ್ಯಂತ ಸುಲಭದ ರನ್ ಗುರಿಯನ್ನು ಬೆನ್ನತ್ತಿದ ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ (28 ಎಸೆತಗಳಲ್ಲಿ 48 ರನ್) ಹಾಗೂ ಪಾರ್ಥಿವ್ ಪಟೇಲ್ 22 ಎಸೆತಗಳಲ್ಲಿ 40 ರನ್) ಅವರ ಜೊತೆಯಾಟ ಕೇವಲ 8.1 ಓವರ್ ಗಳಿಗೇ 92 ರನ್ ಗಳಿಸಿ ಜಯವನ್ನು ತನ್ನದಾಗಿಸಿಕೊಂಡಿದೆ. 
ಆರ್ ಸಿಬಿ ಪರ 3 ವಿಕೆಟ್ ಗಳಿಸಿದ ಉಮೇಶ್ ಯಾದವ್ ಉತ್ತಮ ಬೌಲರ್ ಎನಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com