ಕ್ರಿಕೆಟ್

ಗ್ರಾಮ ಪಂಚಾಯ್ತಿ ಅಭ್ಯರ್ಥಿಯೊಬ್ಬ ಡೂಪ್ ಕೊಹ್ಲಿಯನ್ನು ಕರೆತಂದು ಬಕ್ರಾ ಮಾಡಿದ ಕಥೆ!

ಚುನಾವಣೆಗಳಲ್ಲಿ ಮತದಾರರನ್ನು ಸೆಳೆಯಲು ಹಣ, ಹೆಂಡ ಹಂಚುವುದು, ಸಿನಿ ತಾರೆಯರನ್ನು ಗಣ್ಯರನ್ನು ಕರೆತಂದು ಪ್ರಚಾರ ಮಾಡುವುದು ಸಾಮಾನ್ಯ...

ಗ್ರಾಮ ಪಂಚಾಯ್ತಿ ಅಭ್ಯರ್ಥಿಯೊಬ್ಬ ಡೂಪ್ ಕೊಹ್ಲಿಯನ್ನು ಕರೆತಂದು ಬಕ್ರಾ ಮಾಡಿದ ಕಥೆ!
ಸಂಗ್ರಹ ಚಿತ್ರ
Published On :
ಪುಣೆ: ಚುನಾವಣೆಗಳಲ್ಲಿ ಮತದಾರರನ್ನು ಸೆಳೆಯಲು ಹಣ, ಹೆಂಡ ಹಂಚುವುದು, ಸಿನಿ ತಾರೆಯರನ್ನು ಗಣ್ಯರನ್ನು ಕರೆತಂದು ಪ್ರಚಾರ ಮಾಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಭೂಪ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಮ್ಮ ಪರ ಪ್ರಚಾರ ಮಾಡುತ್ತಾರೆ ಎಂದು ಹೇಳಿ ಕೊನೆಗೆ ಡೂಪ್ ಕೊಹ್ಲಿಯನ್ನು ಕರೆತಂದು ಜನರನ್ನು ಬಕ್ರಾ ಮಾಡಿದ್ದಾನೆ. 
ಮಹಾರಾಷ್ಟ್ರ ಸ್ಥಳೀಯ ಚುನಾವಣೆ ಅಭ್ಯರ್ಥಿ ವಿಠಲ್ ಗಣ್ಪತ್ ಘಾವಟೆ ಎಂಬುವರು ರಾಮಲಿಂಗಾ ಗ್ರಾಮ ಪಂಚಾಯ್ತಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ಇದೇ ಮೇ 25ರಂದು ತಮ್ಮ ಪರವಾಗಿ ವಿರಾಟ್ ಕೊಹ್ಲಿಯವರು ಪ್ರಚಾರ ಮಾಡಲು ಬರುತ್ತಿದ್ದಾರೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ಸ್ಥಳೀಯ ಜನರೆಲ್ಲಾ ಬರಬೇಕೆಂದು ಬ್ಯಾನರ್ ಹಾಕಿಸಿದ್ದರು. 
ನಂತರ ವಿಠಲ್ ಅವರು ಕೊಹ್ಲಿಯನ್ನೇ ಹೋಲುವಂತಾ ವ್ಯಕ್ತಿಯನ್ನು ಕರೆದುಕೊಂಡು ಚುನಾವಣಾ ಪ್ರಚಾರ ಮಾಡಿದ್ದಾರೆ. ಇದನ್ನು ಕಂಡ ಸ್ಥಳೀಯರೊಬ್ಬರು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದು ಈ ಫೋಟೋ ಇದೀಗ ವೈರಲ್ ಆಗಿದೆ. 
ಜತೆಗೆ ಟ್ವೀಟರಿಗರು ಹಾಸ್ಯಾತ್ಮಕ ಟ್ವೀಟ್ ಗಳನ್ನು ಮಾಡುವ ಮೂಲಕ ಹಾಸ್ಯ ಚಟಾಕಿ ಹಾರಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.