ಸನ್ ರೈಸರ್ಸ್ ಹೈದರಾಬಾದ್ ಪ್ರಶಸ್ತಿ ಕನಸಿಗೆ ತಣ್ಣೀರೆರಚಿದ ಶೇನ್ ವಾಟ್ಸನ್!

ಟೂರ್ನಿಯುದ್ದಕ್ಕೂ ಪ್ರಬಲ ತಂಡವಾಗಿ ಗುರುತಿಸಿಕೊಂಡಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಫೈನಲ್ ಪಂದ್ಯದ ಗೆಲುವಿನ ಆಸೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಶೇನ್ ವಾಟ್ಸನ್ ಅಕ್ಷರಶಃ ನೀರೆರಚಿದರು.
ಶತಕ ಸಂಭ್ರಮದಲ್ಲಿ ವಾಟ್ಸನ್
ಶತಕ ಸಂಭ್ರಮದಲ್ಲಿ ವಾಟ್ಸನ್
ಮುಂಬೈ: ಟೂರ್ನಿಯುದ್ದಕ್ಕೂ ಪ್ರಬಲ ತಂಡವಾಗಿ ಗುರುತಿಸಿಕೊಂಡಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಫೈನಲ್ ಪಂದ್ಯದ ಗೆಲುವಿನ ಆಸೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಶೇನ್ ವಾಟ್ಸನ್ ಅಕ್ಷರಶಃ ನೀರೆರಚಿದರು.
ಹೈದರಾಬಾದ್ ತಂಡ ನೀಡಿದ್ದ 179 ರನ್ ಗಳ ಸವಾಲಿನ ಗುರಿ ಬೆನ್ನು ಹತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಈ ಗುರಿ ಇನ್ನಿಂಗ್ಸ್ ನ ಯಾವುದೇ ಹಂತದಲ್ಲೂ ಸವಾಲು ಎನಿಸಲೇ ಇಲ್ಲ. ಪ್ರಮುಖವಾಗಿ ಚೆನ್ನೈ ತಂಡದ ಕೇವಲ 4 ಆಟಗಾರರು ಈ ಸವಾಲಿನ ಗುರಿಯನ್ನು ಮೆಟ್ಟಿ ನಿಂತರು. ಪ್ರಮುಖವಾಗಿ ಚೆನ್ನೈ ಪರ ಆರಂಭಿಕರಾಗಿ ಕಣಕ್ಕಿಳಿದ ಶೇನ್ ವಾಟ್ಸನ್ ಶೇ.70ರಷ್ಚು ರನ್ ಗಳನ್ನು ತಾವೊಬ್ಬರೇ ಗಳಿಸುವ ಮೂಲಕ ಹೈದರಾಬಾದ್ ತಂಡದ ಗೆಲುವಿನ ಆಸೆಗೆ ನೀರೆರಚಿದರು.
ಕೇವಲ 578 ಎಸೆತಗಳನ್ನು ಎದುರಿಸಿದ ವಾಟ್ಸನ್ 11 ಬೌಂಡರಿ ಮತ್ತು 8 ಸಿಕ್ಸರ್ ಮೂಲಕ 117ರನ್ ಕಲೆಹಾಕಿದರು. ಈ ಪೈಕಿ ಒಂದು ಓವರ್ ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಕೂಡ ಸಿಡಿಸಿದ್ದರು. 
ಇನ್ನು ಹೈದರಾಬಾದ್ ನಂತೆಯೇ ಚೆನ್ನೈ ತಂಡಕ್ಕೂ ಆರಂಭಿಕ ಆಘಾತ ಎದುರಾಗಿತ್ತು. ಕೇವಲ 10 ರನ್ ಗಳಿಸಿ ಆರಂಭಿಕ ಆಟಗಾರ ಡುಪ್ಲೆಸಿಸ್ ಸಂದೀಪ್ ಶರ್ಮಾಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಸುರೇಶ್ ರೈನಾ ನೆಲಕಚ್ಚಿ ಆಡುವ ಪ್ರಯತ್ನ ಮಾಡಿದರಾದರೂ 32 ರನ್ ಗಳಿಸಿ ಬ್ರಾಥ್ ವೇಟ್ ಗೆ ವಿಕೆಟ್ ಒಪ್ಪಿಸಿದರು. ಒಂದೆಡೆ ವಿಕೆಟ್ ಉರುಳುತಿದ್ದರೂ ದೃತಿಗೆಡದ ವಾಟ್ಸನ್ ಸಿಕ್ಸರ್ ಬೌಂಡರಿಗಳ ಮೂಲಕ ತಂಡದ ರನ್ ವೇಗವನ್ನು ಹೆಚ್ಚಿಸುತ್ತಲೇ ಇದ್ದರು. ನೋಡ ನೋಡುತ್ತಿದ್ದಂತೆಯೇ ಶತಕ ಸಿಡಿಸಿ ಸಂಭ್ರಮಿಸಿದರು. ಅಂತಿಮವಾಗಿ 4ನೇ ಬ್ಯಾಟ್ಸಮನ್ ಆಗಿ ಕಣಕ್ಕಿಳಿದ ಅಂಬಾಟಿ ರಾಯುಡು 16 ರನ್ ಗಳಿಸಿ ತಂಡದ ಗೆಲುವಿನ ಔಪಚಾರಿಕತೆಯನ್ನು ಮುಕ್ತಾಯಗೊಳಿಸಿದರು.
117 ರನ್ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ ಶೇನ್ ವಾಟ್ಸನ್ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನಾರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com