ಭಾರತ ಈ ಬಾರಿ ಗೆಲ್ಲದಿದ್ದರೆ, ಆಸ್ಟ್ರೇಲಿಯಾದಲ್ಲಿ ಇನ್ನೆಂದೂ ಗೆಲ್ಲಲು ಸಾಧ್ಯವಿಲ್ಲ: ಡೀನ್ ಜೋನ್ಸ್

ಭಾರತ ಈ ಬಾರಿ ಗೆಲ್ಲದಿದ್ದರೆ , ಆಸ್ಟ್ರೇಲಿಯಾದಲ್ಲಿ ಇನ್ನೆಂದೂ ಗೆಲ್ಲಲು ಸಾಧ್ಯವಿಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್ ಮನ್ ಡೀನ್ ಜೋನ್ಸ್ ಹೇಳಿದ್ದಾರೆ.
ಡೀನ್ ಜೋನ್ಸ್
ಡೀನ್ ಜೋನ್ಸ್

ಸಿಡ್ನಿ:  ಭಾರತ ಈ ಬಾರಿ ಗೆಲ್ಲದಿದ್ದರೆ , ಆಸ್ಟ್ರೇಲಿಯಾದಲ್ಲಿ ಇನ್ನೆಂದೂ ಗೆಲ್ಲಲು ಸಾಧ್ಯವಿಲ್ಲ  ಎಂದು ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್ ಮನ್ ಡೀನ್ ಜೋನ್ಸ್ ಹೇಳಿದ್ದಾರೆ.

ಎಲ್ಲಾ ಮಾದರಿಯ ಪಂದ್ಯಗಳಲ್ಲಿ ಆಸ್ಟ್ರೇಲಿಯಾಕ್ಕಿಂತ ಭಾರತ ಉತ್ತಮ ಸಾಧನೆ ಮಾಡಿದೆ. ಆದರೆ, ಈ ಬಾರಿ ಸರಣಿ  ಗೆಲ್ಲುವುದಾಗಿ ನಂಬಿಕೆ ಹೊಂದಿದ್ದಾರೆಯೇ, ಬೌಲರ್ ಗಳು ಸಮರ್ಥವಾಗಿ ಬೌಲಿಂಗ್ ಮಾಡಬಲ್ಲರೇ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್  ಪತ್ರಿಕೆಯಲ್ಲಿ ಹೇಳಿದ್ದಾರೆ.

ಸಾಗರದಾಚೆಗಿನ ದೇಶದಲ್ಲಿ ಟೀಂ ಇಂಡಿಯಾದ  ಕಳಪೆ ಪ್ರದರ್ಶನದ ಹೊರತಾಗಿಯೂ ಡಿಸೆಂಬರ್ 6ರಿಂದ ಆಡಿಲೇಡ್ ನಲ್ಲಿ ಆರಂಭವಾಗಲಿರುವ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ ಗೆಲ್ಲಬೇಕೆಂದು ಅವರು ಹೇಳಿದ್ದಾರೆ.

ಭಾರತದ ಇತಿಹಾಸದಿಂದ  ಈಗಲೇ ಸರಣಿ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ,  ಭಾರತ 2-0 ಅಥವಾ 3-0 ಅಂತರದಿಂದ ಗೆಲ್ಲುತ್ತದೆ ಎಂದು ಅನ್ನಿಸುತ್ತಿದೆ. ಆಸ್ಟ್ರೇಲಿಯಾ ಎಲ್ಲಿಯೂ ಟೆಸ್ಟ್ ಸರಣಿ ಗೆದ್ದಿರುವುದನ್ನು ನೋಡಿಲ್ಲ ಎಂದು ಅವರು  ಹೇಳಿದ್ದಾರೆ.

ತವರೂ ನೆಲದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವುದು ಕಷ್ಟ. ಆದರೆ, ಈ ಬಾರಿ ಸ್ಟಿವ್ ಸ್ಮಿತಾ ಹಾಗೂ ಡೇವಿಡ್ ವಾರ್ನರ್  ಆಡುತ್ತಿಲ್ಲ.ಹೀಗಾಗಿ ಅವರ ಸ್ಛಾನವನ್ನು ಯಾರು ತುಂಬುತ್ತಾರೆ ಎಂದು ಡೀನ್ ಜೋನ್ಸ್  ಹೇಳಿದ್ದಾರೆ.

ಟೀಂ ಇಂಡಿಯಾ ಕವರ್ ಡ್ರೈವ್ ನಿಲ್ಲಿಸಬೇಕು ಹಾಗೂ ವಿವಿಧ ಕಡೆಗಳಿಂದ ಬೌಲಿಂಗ್ ಮಾಡಬೇಕು. ಬೌಲರ್ ಗಳು ಉತ್ತಮವಾಗಿ ಆಡಬೇಕಾಗುತ್ತದೆ. ಆಸ್ಟ್ರೇಲಿಯಾ ವಿರುದ್ಧ ಹೆದರುವ ಅವಶ್ಯಕತೆ ಇಲ್ಲ. ಉತ್ತಮ ರೀತಿಯಲ್ಲಿ ಟೀಂ ಇಂಡಿಯಾ ಪ್ರದರ್ಶನ ನೀಡಬೇಕಾಗುತ್ತದೆ ಎಂದು ಡೀನ್ ಜೋನ್ಸ್  ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com