ಏಷ್ಯಾ ಕಪ್: ಶಿಖರ್ ಧವನ್ ಆಕರ್ಷಕ ಶತಕ, ಭಾರತ 285/7

Published On :
ದುಬೈ: ದುಬೈನಲ್ಲಿ ನಡೆಯುತ್ತಿರುವ ಏಷ್ಯಾಕಪ್ 2018 ಪಂದ್ಯಾವಳಿಯಲ್ಲಿ ಶಿಖರ್ ಧವನ್ ಅದ್ಭುತ ಶತಕದ ನೆರವಿನೊಡನೆ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 285 ರನ್ ಕಲೆ ಹಾಕಿದೆ.
ಟೂರ್ನಿಯ ‘ಎ’ ವಿಭಾಗದ ಭಾರತ- ಹಾಂಗ್ ಕಾಂಗ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಹಾಂಗ್ ಕಾಂಗ್ ಬೌಲಿಂಗ್ ಆಯ್ದುಕೊಂಡಿತ್ತು.
ಭಾರತದ ಪದ ನಾಯಕ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಉತ್ತ್ರಮ ಪ್ರದರ್ಶನ ನೀಡಿ ಮೊದಲ ವಿಕೆಟ್ ಗೆ 45 ರನ್ ಪೇರಿಸಿದ್ದರು.ಶಿಖರ್ ಧವನ್ 120 ಎಸೆತಗಳಲ್ಲಿ15 ಬೌಂಡರಿ, ಎರಡು ಸಿಕ್ಸರ್ ಸೇರಿ 127 ರನ್ ಕಲೆ ಹಾಕಿದ್ದಾರೆ.
ಇನ್ನು ತಂಡದ ಇನ್ನೋರ್ವ ಆಟಗಾರ ಅಂಬಟಿ ರಾಯುಡು ಆಕರ್ಷಕ ಅರ್ಧ ಶತಕ (60) ಗಳಿಸಿ ಮಿಂಚಿದ್ದಾರೆ. ಇನ್ನುಳಿದಂತೆ ನೇಶ್ ಕಾರ್ತಿಕ್ 33, ಮಹೇಂದ್ರ ಸಿಂಗ್ ಧೋನಿ. ಶೂನ್ಯ, ಜಾದವ್ 28, ಭುವನೇಶ್ವರ್ ಕುಮಾರ್ 9ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್ ಶೂನ್ಯಕ್ಕೆ ನಿರ್ಗಮಿಸಿದ್ದಾರೆ.
ಯುವರಾಜ್ ದಾಖಲೆ ಸರಿಗಟ್ಟಿದ ಧವನ್
ಶಿಖರ್ ಧವನ್ ಆಕರ್ಷಕ ಶತಕದೊಡನೆ ಭಾರತ ಕ್ರಿಕೆಟಿಗ ಯುವರಾಜ್ ಸಿಂಗ್ ದಾಖಲೆ ಸರಿಗಟ್ಟಿದ್ದಾರೆ.ಏಕದಿನದಲ್ಲಿ ಧವನ್ 14ನೇ ಶತಕ ಸಿಡಿಸಿದ್ದು ಭಾರತದ ಪರ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಪಟ್ಟಿಯಲ್ಲಿ ಯುವರಾಜ್ ಜತೆಗೆ ಆರನೇ ಸ್ಥಾನ ಹಂಚಿಕೊಂಡಿದ್ದಾರೆ.
ಇನ್ನೊಬ್ಬ ಭಾರತೀಯ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ 15 ಶತಕಗಸಿಡಿಸಿದ್ದು ಇದನ್ನೂ ಸಹ ಶಿಖರ್ ಧವನ್ ಸಧ್ಯದಲ್ಲೇ ತಲುಪಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಇದೇ ವೇಳೆ ಧವನ್ ಅತಿ ವೇಗದಲ್ಲಿ 14 ಶತಕಗಳನ್ನು ಸಿಡಿಸಿದ ಕ್ರಿಕೆಟಿಗರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಅಲಂಕರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


