'ಡಿಆರ್ ಎಸ್ ಕಿಂಗ್': ಡಿಆರ್ ಎಸ್ ಎಂದರೆ 'ಧೋನಿ ರಿವ್ಯೂ ಸಿಸ್ಟಮ್' ಎಂಬುದು ಮತ್ತೆ ಸಾಬೀತು!

ಆಧುನಿಕ ಕ್ರಿಕೆಟ್ ದಿಗ್ಗಜ ಮತ್ತು ಭಾರತ ಕಂಡ ಸರ್ವಶ್ರೇಷ್ಠ ನಾಯಕ ಮಹೇಂದ್ರ ಸಿಂಗ್ ಧೋನಿ ತಾವು ಡಿಆರ್ ಎಸ್ ಕಿಂಗ್ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಧೋನಿ ಮತ್ತು ಡಿಆರ್ ಎಸ್
ಧೋನಿ ಮತ್ತು ಡಿಆರ್ ಎಸ್
ದುಬೈ: ಆಧುನಿಕ ಕ್ರಿಕೆಟ್ ದಿಗ್ಗಜ ಮತ್ತು ಭಾರತ ಕಂಡ ಸರ್ವಶ್ರೇಷ್ಠ ನಾಯಕ ಮಹೇಂದ್ರ ಸಿಂಗ್ ಧೋನಿ ತಾವು ಡಿಆರ್ ಎಸ್ ಕಿಂಗ್ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಭಾರತ ಆಡುವ ಯಾವುದೇ ಪಂದ್ಯದಲ್ಲಿ ರನೌಟ್ ಅಥವಾ ಡಿಆರ್ ಎಸ್ ಗೆ ಧೋನಿ ಎತ್ತಿದ ಕೈ. ಧೋನಿ ಸಕಾರಾತ್ಮಕವಾಗಿದ್ದಾರೆ ಎಂದರೆ ಖಂಡಿತಾ ಅದು ಔಟ್ ಎಂದು ಅರ್ಥ. ಆ ಮೂಲಕ ಧೋನಿ ಡಿಎರ್ ಎಸ್ (ಡಿಸಿಷನ್ ರಿವ್ಯೂ ಸಿಸ್ಟಮ್)ನ  ಕಿಂಗ್ ಎಂದು ಖ್ಯಾತರಾಗಿದ್ದಾರೆ. ಇದೇ ಕಾರಣಕ್ಕೆ ಡಿಆರ್ ಎಸ್ ಎನ್ನು ಧೋನಿ ರಿವ್ಯೂ ಸಿಸ್ಟಮ್ ಎಂದೂ ಹಾಸ್ಯ ಮಾಡಲಾಗುತ್ತದೆ.
ಇದು ಮತ್ತೊಮ್ಮೆ ಸಾಬೀತಾಗಿದ್ದು, ನಿನ್ನೆ ನಡೆದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಧೋನಿ ಮಾಸ್ಟರ್ ಮೈಂಡ್ ಗೆ ಪಾಕಿಸ್ತಾನದ ಆರಂಭಿಕ ಆಟಗಾರ ಇಮಾಮ್ ಉಲ್ ಹಕ್ ಬಲಿಯಾಗಿದ್ದಾರೆ. ಪಂದ್ಯದ 8ನೇ ಓವರ್ ನಲ್ಲಿ ಚಾಹಲ್ ಬೌಲಿಂಗ್ ನಲ್ಲಿ ಇಮಾಮ್ ಉಲ್ ಹಕ್ ಎಲ್ ಬಿ ಬಲೆಗೆ ಬಿದಿದ್ದರು. ಆದರೆ ಚಾಹಲ್ ಅಪೀಲ್ ಮಾಡಿದರೂ ಅಂಪೈರ್ ತೀರ್ಪು ನೀಡಿರಲಿಲ್ಲ. ಕೂಡಲೇ ಧೋನಿ ಡಿಆರ್ ಎಸ್ ಗೆ ಮನವಿ ಮಾಡಿದರು.
ಅಂಪೈರ್ ತೀರ್ಪು ನೀಡದ ಕಾರಣ ನೇರ ಧೋನಿ ಬಳಿ ಹೋದ ಸ್ಪಿನ್ನರ್ ಚಾಹಲ್ ಮತ್ತು ನಾಯಕ ರೋಹಿತ್ ಶರ್ಮಾ ಚರ್ಚೆ ನಡೆಸಿದರು. ಬಳಿಕ ಡಿಆರ್ ಎಸ್ ತೆಗೆದು ಕೊಳ್ಳಲು ನಿರ್ಧರಿಸಿದರು. ರಿವ್ಯೂ ಸಿಸ್ಟಮ್ ನಲ್ಲೂ ಚೆಂಡು ಬ್ಯಾಟ್ ಗೆ ತಗುಲದೇ ಪ್ಯಾಡ್ ಗೆ ಸ್ಪರ್ಶ ಮಾಡಿರುವುದು ಸ್ಪಷ್ಟವಾಗಿತ್ತು. ಆ ಮೂಲಕ ಇಮಾಮ್ ಎಲ್ ಬಿ ಬಲೆಗೆ ಬಿದ್ದಿದ್ದರು. ಧೋನಿ ಮಾಸ್ಚರ್ ಮೈಂಡ್ ಕುರಿತು ಡಗೌಟ್ ನಲ್ಲಿದ್ದ ವೀಕ್ಷಕ ವಿವರಣೆಗಾರರೂ ಕೂಡ ಶ್ಲಾಘನೆ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com