ಐಪಿಎಲ್ 2019: ಆರ್‌ಸಿಬಿ ಗೆಲುವಿಗೆ 188 ಗುರಿ

ಐಪಿಎಲ್ 2019ನೇ ಆವೃತ್ತಿಯ ಭಾನುವಾರದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ ೨೦ ಓವರ್ ಗಳಲ್ಲಿ 5.ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿದೆ. ಈ ಮೂಲಕ ಆರ್‌ಸಿಬಿಗೆ ಗೆಲ್ಲಲು 188ರನ್ ಟಾರ್ಗೆಟ್ ನೀಡಿದೆ.
ಐಪಿಎಲ್ 2019: ಆರ್‌ಸಿಬಿ ಗೆಲುವಿಗೆ 188 ಗುರಿ
ಐಪಿಎಲ್ 2019: ಆರ್‌ಸಿಬಿ ಗೆಲುವಿಗೆ 188 ಗುರಿ
Updated on: 
ನವದೆಹಲಿ: ಐಪಿಎಲ್ 2019ನೇ ಆವೃತ್ತಿಯ ಭಾನುವಾರದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್ ಗಳಲ್ಲಿ 5.ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿದೆ. ಈ ಮೂಲಕ ಆರ್‌ಸಿಬಿಗೆ ಗೆಲ್ಲಲು 188ರನ್ ಟಾರ್ಗೆಟ್ ನೀಡಿದೆ.
ಪ್ರಾರಂಭಿಕ ಆಟಗಾರನಾಗಿದ್ದ ಶಿಖರ್ ಧವನ್ (50) ಹಾಗೂ ನಾಯಕ ಶ್ರೇಯಸ್ ಅಯ್ಯರ್ (52)  ಉತ್ತಮ ಪ್ರದರ್ಶನ ನೀಡುವುದರೊಡನೆ ಡೆಲ್ಲಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. 
ಇನ್ನು ಪೃಥ್ವಿ ಶಾ 18, ರಿಷಬ್ ಪಂತ್ 7,  ಕಾಲಿನ್ ಇನ್‌ಗ್ರಾಂ  11, ಶೆರ್ಫಾನ್ ರುಥರ್‌ಫಾರ್ಡ್ ಔಟಾಗದೆ 28 ರನ್ ಹಾಗೂ ಅಕ್ಷರ್ ಪಟೇಲ್ 16 ರನ್ ಕಲೆ ಹಾಕಿದ್ದರು. 
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವೈ. ಚಹಾಲ್ 2, ನವದೀಪ್ ಸಾನಿ, ಉಮೇಶ್ ಯಾದವ್, ವಾಷಿಂಗ್ಟನ್ ಸುಂದರ್ ತಲಾ ಒಂದೊಂದು ವಿಕೆಟ್ ಕಬಳಿಸಿ ಗಮನ ಸೆಳೆದರು.
ಡೆಲ್ಲಿ ಕ್ಯಾಪಿಟಲ್ ಒಡ್ಡಿರುವ ಗುರಿಯನ್ನು ಬೆನ್ನತ್ತಿರುವ ವಿರಾಟ್ ಕೊಹ್ಲಿ ಪಡೆ ಇತ್ತೀಚಿನ ವರದಿ ಬಂದಾಗ 9 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 82 ರನ್ ಗಳಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com