ಭಾನುವಾರ ನಡೆದ ಪಂದ್ಯದಲ್ಲಿ ಮುಂಬೈ ಬ್ಯಾಟಿಂಗ್ ಮಾಡುವಾಗ 4ನೇ ಓವರ್ ನಲ್ಲಿ ಕೆಕೆಆರ್ ಬೌಲರ್ ಹ್ಯಾರಿ ಗರ್ನಿ ಎಸೆತದಲ್ಲಿ ರೋಹಿತ್ ಶರ್ಮಾ ಎಲ್ಬಿ ಡಬ್ಲ್ಯೂ ಬಲೆಗೆ ಬಿದ್ದರು. ಆಗ ಫೀಲ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ರೋಗಿತ್ ಶರ್ಮಾ ಡಿಆರ್ಎಸ್ ಮೊರೆ ಹೋದರು. ಮೇಲ್ಮನವಿಯಲ್ಲಿ ಅಂಪೈರ್ ಪರವೇ ತೀರ್ಪು ಬಂದಿತು. ರೋಹಿತ್ ಒಲ್ಲದ ಮನಸ್ಸಿನಿಂದ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ಈ ವೇಳೆ ಅಂಪೈರ್ ನಿಂತಿದ್ದ ತುದಿಯಲ್ಲಿನ ವಿಕೆಟ್ ಗಳ ಬೇಲ್ಸ್ ಹಾರಿಸಿ ಅಸಾಮಾಧಾನ ಹೊರ ಹಾಕಿದರು.