ನವದೆಹಲಿ: ಟೀಂ ಇಂಡಿಯಾದ ಉದಯೋನ್ಮುಖ ವಿಕೆಟ್ ಕೀಪರ್ ರಿಷಬ್ ಪಂತ್ ಅವರು 21ರ ಹರೆಯದಲ್ಲೇ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಕುಮಾರ ಸಂಗಕ್ಕಾರ ಅವರ ದಾಖಲೆಯನ್ನು ಮುರಿದಿದ್ದಾರೆ.
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ರಿಷಬ್ ಪಂತ್ ಅತೀ ಹೆಚ್ಚು ಅಂದರೆ 20 ಔಟ್ ಮಾಡಿರುವ ದಾಖಲೆ ಪಾತ್ರರಾಗಿದ್ದಾರೆ.
2011ರಲ್ಲಿ ಡೆಕ್ಕನ್ ಚಾರ್ಜರ್ಸ್ ಪರ ಕುಮಾರ ಸಂಗಕ್ಕಾರ 17 ಕ್ಯಾಚ್ ಹಾಗೂ ಎರಡು ಸ್ಟಂಪಿಂಗ್ ಸೇರಿ 19 ಔಟ್ ಗಳನ್ನು ಮಾಡಿದ್ದರು. ಇನ್ನು 2018-19ರ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ನಲ್ಲಿ ನರುಲ್ ಹಸನ್ ಕೂಡ ಈ ಸಾಧನೆಯನ್ನು ಸರಗಟ್ಟಿದ್ದರು.