ಜೇಸನ್‌ ಹೋಲ್ಡರ್‌ಗೆ 'ವರ್ಷದ ಟೆಸ್ಟ್‌ ಆಟಗಾರ' ಗೌರವ

ಟೆಸ್ಟ್ ಹಾಗೂ ಏಕದಿನ ವೆಸ್ಟ್‌ ಇಂಡೀಸ್‌ ತಂಡದ ನಾಯಕ ಜೇಸನ್‌ ಹೋಲ್ಡರ್‌ ಅವರು ವೆಸ್ಟ್‌ ಇಂಡೀಸ್‌ನ 'ವರ್ಷದ ಟೆಸ್ಟ್‌ ಆಟಗಾರ' ಗೌರವಕ್ಕೆ ಸೋಮವಾರ ಪಾತ್ರರಾಗಿದ್ದಾರೆ.
ಜೇಸನ್‌ ಹೋಲ್ಡರ್‌ಗೆ 'ವರ್ಷದ ಟೆಸ್ಟ್‌ ಆಟಗಾರ' ಗೌರವ
Updated on: 

ನವದೆಹಲಿ: ಟೆಸ್ಟ್ ಹಾಗೂ ಏಕದಿನ ವೆಸ್ಟ್‌ ಇಂಡೀಸ್‌ ತಂಡದ ನಾಯಕ ಜೇಸನ್‌ ಹೋಲ್ಡರ್‌ ಅವರು ವೆಸ್ಟ್‌ ಇಂಡೀಸ್‌ನ 'ವರ್ಷದ ಟೆಸ್ಟ್‌ ಆಟಗಾರ' ಗೌರವಕ್ಕೆ ಸೋಮವಾರ ಪಾತ್ರರಾಗಿದ್ದಾರೆ.

ಕಳೆದ ವರ್ಷ ವೆಸ್ಟ್ ಇಂಡೀಸ್‌ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತೋರಿದ ಗಣನೀಯ ಪ್ರದರ್ಶನ ಗಮನಿಸಿ ಅವರಿಗೆ ಈ ಗೌರವ ನೀಡಲಾಗಿದೆ. 2018ರಲ್ಲಿ 336 ರನ್‌ ಹಾಗೂ 33 ವಿಕೆಟ್‌ ಕಬಳಿಸಿದ್ದರು. ಈ ಬಗ್ಗೆ ಕ್ರಿಕೆಟ್‌ ವೆಸ್ಟ್‌ ಇಂಡೀಸ್‌ ಸರಣಿ ಟ್ವೀಟ್‌ ಮಾಡುವ ಮೂಲಕ ಈ ಮಾಹಿತಿ ನೀಡಿದೆ.

ವೆಸ್ಟ್ ಇಡೀಸ್‌ ಭರವಸೆಯ ಬ್ಯಾಟ್ಸ್‌ಮನ್‌ ಶಾಯ್‌ ಹೋಪ್‌ ಅವರು 'ವರ್ಷದ ಏಕದಿನ ಆಟಗಾರ' ಪ್ರಶಸ್ತಿಗೆ ಪಾತ್ರರಾದರೆ, ಕಿಪೋ ಪಾಲ್‌ ಅವರು 'ವರ್ಷದ ಟಿ-20 ಆಟಗಾರ' ಪ್ರಶಸ್ತಿಗೆ ಭಾಜನರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com