ವಿಸ್ಡನ್ ದಶಕದ ಏಕದಿನ ತಂಡ ಪ್ರಕಟ; ಕೊಹ್ಲಿ, ಧೋನಿ ಸೇರಿ 3 ಭಾರತೀಯರಿಗೆ ಸ್ಥಾನ!

2020ರ ದಶಕ ಮುಕ್ತಾಯವಾಗಲು ಕೆಲವೇ ದಿನಗಳು ಬಾಕಿ ಇರುವಂತೆಯೇ ವಿಸ್ಡನ್ ದಶಕದ ಶ್ರೇಷ್ಠ ಏಕದಿನ ತಂಡವನ್ನು ಪ್ರಕಟಿಸಿದ್ದು, ತಂಡಕ್ಕೆ ಮೂವರು ಭಾರತೀಯ ಆಟಗಾರರನ್ನು ಆಯ್ಕೆ ಮಾಡಲಾಗಿದೆ.
ವಿಸ್ಡನ್ ದಶಕದ ಏಕದಿನ ತಂಡ
ವಿಸ್ಡನ್ ದಶಕದ ಏಕದಿನ ತಂಡ
Updated on

ನವದೆಹಲಿ: 2020ರ ದಶಕ ಮುಕ್ತಾಯವಾಗಲು ಕೆಲವೇ ದಿನಗಳು ಬಾಕಿ ಇರುವಂತೆಯೇ ವಿಸ್ಡನ್ ದಶಕದ ಶ್ರೇಷ್ಠ ಏಕದಿನ ತಂಡವನ್ನು ಪ್ರಕಟಿಸಿದ್ದು, ತಂಡಕ್ಕೆ ಮೂವರು ಭಾರತೀಯ ಆಟಗಾರರನ್ನು ಆಯ್ಕೆ ಮಾಡಲಾಗಿದೆ.

ಕಳೆದ 10 ವರ್ಷ ಕ್ರಿಕೆಟ್ ಲೋಕದಲ್ಲಿ ಹಲವಾರು ಅವಿಸ್ಮರಣೀಯ ಘಟನೆಗಳು ನಡೆದು ಹೋಗಿದ್ದು, ಹಲವಾರು ಕ್ರಿಕೆಟಿಗರು ಸ್ಫೋಟಕ ಬ್ಯಾಟ್ಸಮನ್ ಗಳಾಗಿ ಬೆಳೆದು ನಿಂತರೆ, ಇನ್ನು ಕೆಲವರು ಚಾಣಾಕ್ಷ ಬೌಲರ್ ಗಳಾಗಿ ಹೊರಹೊಮ್ಮಿದ್ದಾರೆ.ಈ ದಶಕದಲ್ಲೇ ಮೂರು ಐಸಿಸಿ ಏಕದಿನ ವಿಶ್ವಕಪ್ ನಡೆದಿದ್ದು, 2011ರಲ್ಲಿ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿದರೆ, 2015ರಲ್ಲಿ ಆಸ್ಟ್ರೇಲಿಯಾ ಹಾಗೂ 2019ರಲ್ಲಿ ಆತಿಥೇಯ ಇಂಗ್ಲೆಂಡ್ ಚೊಚ್ಚಲ ಬಾರಿಗೆ ಕಪ್ ಎತ್ತಿಹಿಡಿದು ಸಂಭ್ರಮಿಸಿತ್ತು. 

ಇನ್ನು ಈ ದಶಕದಲ್ಲಿ ಮೈಲುಗಲ್ಲು ಸ್ಥಾಪಿಸಿದ ಕ್ರಿಕೆಟಿಗರ ಟಾಪ್ 10 ಪಟ್ಟಿಯನ್ನು ವಿಸ್ಡನ್ ಕ್ರಿಕೆಟ್ ಆಯ್ಕೆ ಮಾಡಿದೆ. ಈ ಪಟ್ಟಿಯಲ್ಲಿ ಮೂವರು ಬ್ಯಾಟ್ಸ್ ಮನ್ ಗಳು ಸ್ಥಾನ ಪಡೆದಿದ್ದು, ಆಸ್ಟ್ರೇಲಿಯಾದ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದಾರೆ. 

ಈ ಕುರಿತಂತೆ ಟ್ವೀಟ್ ಮಾಡಿರುವ ವಿಸ್ಡನ್ ಪತ್ರಿಕೆ, ತಂಡದ ಆಯ್ಕೆ ಅಷ್ಟು ಸುಲಭವಾಗಿರಲಿಲ್ಲ. ಆಯ್ಕೆಗಾರರು ಸಾಕಷ್ಟು ಚರ್ಚೆ ನಡೆಸಿ ಈ ತಂಡವನ್ನು ಆಯ್ಕೆ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದೆ.

ವಿಸ್ಡನ್ ಆಯ್ಕೆಮಾಡಿದ ಈ ದಶಕದ ಏಕದಿನ ತಂಡ ಇಂತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com