ಗಾಯದ ಸಮಸ್ಯೆ: 5ನೇ ಏಕದಿನ ಪಂದ್ಯಕ್ಕೆ ಕಿವೀಸ್ ಪಡೆಯ ಸ್ಫೋಟಕ ಬ್ಯಾಟ್ಸಮನ್ ಗಪ್ಟಿಲ್ ಅಲಭ್ಯ!

ಪ್ರವಾಸಿ ಭಾರತ ತಂಡದ ವಿರುದ್ಧ ಭಾನುವಾರ ನಡೆಯಲಿರುವ 5ನೇ ಹಾಗೂ ಅಂತಿಮ ಏಕದಿನ ಪಂದ್ಯದ ಆರಂಭಕ್ಕೂ ಮುನ್ನಲೇ ನ್ಯೂಜಿಲೆಂಡ್ ತಂಡ ಆಘಾತ ಎದುರಿಸಿದ್ದು, ಗಾಯದ ಸಮಸ್ಯೆಯಿಂದಾಗಿ ತಂಡದ ಸ್ಫೋಟಕ ಬ್ಯಾಟ್ಸಮನ್ ಮಾರ್ಟಿನ್ ಗಪ್ಟಿಲ್ ತಂಡದಿಂದ ಹೊರಗುಳಿದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವೆಲ್ಲಿಂಗ್ಟನ್: ಪ್ರವಾಸಿ ಭಾರತ ತಂಡದ ವಿರುದ್ಧ ಭಾನುವಾರ ನಡೆಯಲಿರುವ 5ನೇ ಹಾಗೂ ಅಂತಿಮ ಏಕದಿನ ಪಂದ್ಯದ ಆರಂಭಕ್ಕೂ ಮುನ್ನಲೇ ನ್ಯೂಜಿಲೆಂಡ್ ತಂಡ ಆಘಾತ ಎದುರಿಸಿದ್ದು, ಗಾಯದ ಸಮಸ್ಯೆಯಿಂದಾಗಿ ತಂಡದ ಸ್ಫೋಟಕ ಬ್ಯಾಟ್ಸಮನ್ ಮಾರ್ಟಿನ್ ಗಪ್ಟಿಲ್ ತಂಡದಿಂದ ಹೊರಗುಳಿಯುವ ಸಾಧ್ಯತೆ ಇದೆ.
ಶುಕ್ರವಾರ ಅಭ್ಯಾಸ ನಡೆಸುತ್ತಿದ್ದಾಗ ಗಪ್ಟಿಲ್ ಅವರು ಬೆನ್ನು ನೋವಿಗೆ ತುತ್ತಾಗಿ ಅಭ್ಯಾಸವನ್ನು ಅರ್ಧಕ್ಕೇ ಮೊಟಕುಗೊಳಿಸಿದ್ದರು. ಅವರನ್ನು ಪರೀಕ್ಷಿಸಿದ್ದ ಫಿಸಿಯೋ ವಿಶ್ರಾಂತಿಗೆ ಸಲಹೆ ನೀಡಿದ್ದಾರೆ. ಹೀಗಾಗಿ ನಾಳೆ ನಡೆಯಲಿರುವ ಅಂತಿಮ ಏಕದಿನ ಪಂದ್ಯಕ್ಕೆ ಗಪ್ಟಿಲ್ ಅಲಭ್ಯರಾಗಲಿದ್ದಾರೆ. ಇನ್ನು ಕಳಪೆ ಫಾರ್ಮ್ ನಿಂದ ಬಳಲುತ್ತಿದ್ದ ಗಪ್ಟಿಲ್ ಭಾರತದ ವಿರುದ್ಧದ ಕಳೆದ ನಾಲ್ಕು ಪಂದ್ಯಗಳಿಂದ ಕೇವಲ 47 ರನ್ (5, 15, 13, 14) ಗಳನ್ನಷ್ಟೇ ಕಲೆಹಾಕಿದ್ದರು. ಹೀಗಾಗಿ ಅಂತಿಮ ಪಂದ್ಯದಲ್ಲಿಯಾದರೂ ಫಾರ್ಮ್ ಕಂಡುಕೊಳ್ಳುವ ಭರವಸೆ ಹೊಂದಿದ್ದರು. ಆದರೆ ಗಾಯದ ಸಮಸ್ಯೆಯಿಂದಾಗಿ ಗಪ್ಟಿಲ್ ಹೊರಗುಳಿಯುವ ಸಾಧ್ಯತೆ ಇದೆ.
ಇಂದು ಗಪ್ಟಿಲ್ ಗೆ ಮತ್ತೆ ದೈಹಿಕ ಪರೀಕ್ಷೆ ಇದ್ದು, ಪರೀಕ್ಷೆಯಲ್ಲಿ ವಿಫಲರಾದರೆ ನಾಳಿನ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.
ಇನ್ನು ಗಪ್ಟಿಲ್ ಬದಲಿಗೆ ಮತ್ತೋರ್ವ ಆರಂಭಿಕ ಆಟಗಾರ ಕೊಲಿನ್ ಮುನ್ರೋ ಸ್ಥಾನ ಪಡೆಯುವ ಸಾಧ್ಯತೆ ಇದೆ. ಮುನ್ರೋ ಕೂಡ ಭಾರತದ ವಿರುದ್ಧ ಮೊದಲ ಮೂರು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿ ನಾಲ್ಕನೇ ಪಂದ್ಯದಲ್ಲಿ  ಹೊರಗುಳಿದಿದ್ದರು. 
ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಈಗಾಗಲೇ ಮೊದಲ ಮೂರು ಪಂದ್ಯಗಳಲ್ಲಿ ಜಯಗಳಿಸಿರುವ ಭಾರತ ತಂಡ ಸರಣಿಯನ್ನು ಕೈವಶ ಮಾಡಿಕೊಂಡಿದ್ದು, ನಾಳೆ ನಡೆಯಲಿರುವ ಅಂತಿಮ ಪಂದ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯವಾಗಿದೆ. ಆದರೂ ಗೆಲುವಿನೊಂದಿಗೆ ಸರಣಿ ಮುಕ್ತಾಯಗೊಳಿಸಬೇಕು ಎಂಬುದು ಅಭಿಮಾನಿಗಳ ಆಶಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com