ಕ್ರೀಡಾಂಗಣದಲ್ಲಿ ರಣಭೇರಿ, ಕ್ಯಾಮರಾ ಕಂಡರೆ ಪೇರಿ; ವೈರಲ್ ಆಯ್ತು ಧೋನಿ-ಚಹಲ್ ವಿಡಿಯೋ!

ವಿಕೆಟ್ ಹಿಂದೆ ನಿಂತು ಎದುರಾಳಿ ಬ್ಯಾಟ್ಸಮನ್ ಗಳಿಗೆ ಭೀತಿ ಹುಟ್ಟಿಸುವ ಧೋನಿ ಅದೇಕೋ ಕ್ಯಾಮೆರಾ ಕಂಡರ ಮಾತ್ರ ಮಾರುದ್ದ ಓಡುತ್ತಾರೆ.
ಡ್ರೆಸಿಂಗ್ ರೂಂನತ್ತ ಓಡಿದ ಧೋನಿ
ಡ್ರೆಸಿಂಗ್ ರೂಂನತ್ತ ಓಡಿದ ಧೋನಿ
Updated on
ವೆಲ್ಲಿಂಗ್ಟನ್: ವಿಕೆಟ್ ಹಿಂದೆ ನಿಂತು ಎದುರಾಳಿ ಬ್ಯಾಟ್ಸಮನ್ ಗಳಿಗೆ ಭೀತಿ ಹುಟ್ಟಿಸುವ ಧೋನಿ ಅದೇಕೋ ಕ್ಯಾಮೆರಾ ಕಂಡರ ಮಾತ್ರ ಮಾರುದ್ದ ಓಡುತ್ತಾರೆ.
ವೆಲ್ಲಿಂಗ್ಟನ್ ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದ ಗೆಲುವಿನ ಬಳಿಕ ನಡೆದ ಸಂಭ್ರಮಾಚರಣೆ ವೇಳೆ ಧೋನಿ ಅವರನ್ನು ಯಜುವೇಂದ್ರ ಚಹಲ್ ತಮ್ಮ ಚಹಲ್ ಟಿವಿ ಸಂದರ್ಶನಕ್ಕೆ ಆಹ್ವಾನಿಸಿದರು. ಹಾಸ್ಯಾತ್ಮಕ ಮಾತುಕತೆಗಳಿಂದಲೇ ಖ್ಯಾತಿ ಪಡೆದಿರುವ ಚಹಲ್ ಟಿವಿ ಕಾರ್ಯಕ್ರಮದಲ್ಲಿ ಈ ವರೆಗೂ ಧೋನಿ ಪಾಲ್ಗೊಂಡಿಲ್ಲ. ಹೀಗಾಗಿ ಈ ಪಂದ್ಯದ ಬಳಿಕ ಚಹಲ್ ಧೋನಿ ಅವರ ಆಹ್ವಾನಕ್ಕೆ ಮುಂದಾದರು. ಆದರೆ ಕ್ಯಾಮೆರಾ ಸಮೀಪಿಸುತ್ತಿದ್ದಂತೆಯೇ ಧೋನಿ ಚಹಲ್ ರ ಕೈ ಬಿಟ್ಟು ಡ್ರೆಸಿಂಗ್ ರೂಂನತ್ತ ಓಟಕಿತ್ತರು.
ಕ್ರೀಡಾಂಗಣದಲ್ಲಿ ಎಂತಹುದೇ ಪರಿಸ್ಥಿತಿಯಲ್ಲಿ ದೃತಿಗೆಡದೇ ಕೂಲ್ ಆಗಿ ನಿಭಾಯಿಸುವ ಧೋನಿ, ಕ್ಯಾಮೆರಾ ಹತ್ತಿರವಾಗುತ್ತಿದ್ದಂತೆಯೇ ಓಡಿದ ರೀತಿ ಎಂತಹವರಿಗೂ ನಗು ತರಿಸುತ್ತದೆ. ಈ ಹಿಂದೆ ಇದೇ ಧೋನಿ ಕುಲ್ ದೀಪ್ ಯಾದವ್ ರನ್ನು ಉದ್ದೇಶಿಸಿ ಬೇಗ ಬೌಲಿಂಗ್ ಮಾಡದಿದ್ದರೆ ಬೌಲರ್ ನನ್ನು ಬದಲಿಸುತ್ತೇನೆ ಎಂದು ಹೇಳುವ ಮೂಲಕ ಅವರಲ್ಲಿ ನಡುಕ ಹುಟ್ಟಿಸಿದ್ದರು. ಈ ಮಾತನ್ನು ಸ್ವತಃ ಕುಲ್ ದೀಪ್ ಯಾದವ್ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com