3ನೇ ಏಕದಿನ: ಶತಕ ವಂಚಿತ ಟೇಲರ್, ದಿಢೀರ್ ಕುಸಿದ ಕಿವೀಸ್ 243ಕ್ಕೆ ಆಲೌಟ್

ಆತಿಥೇಯ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭಾರತೀಯ ಬೌಲರ್ ಗಳ ಸಾಂಘಿಕ ಹೋರಾಟದಿಂದಾಗಿ ಕೇವಲ 243ರನ್ ಗಳಿಗೆ ಆಲೌಟ್ ಆಗಿದೆ.
ವಿಕೆಟ್ ಪಡೆದ ಸಂಭ್ರಮದಲ್ಲಿ ಶಮಿ
ವಿಕೆಟ್ ಪಡೆದ ಸಂಭ್ರಮದಲ್ಲಿ ಶಮಿ
ಬೇ ಓವಲ್: ಆತಿಥೇಯ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭಾರತೀಯ ಬೌಲರ್ ಗಳ ಸಾಂಘಿಕ ಹೋರಾಟದಿಂದಾಗಿ ಕೇವಲ  243ರನ್ ಗಳಿಗೆ ಆಲೌಟ್ ಆಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೇನ್ ವಿಲಿಯಮ್ಸನ್ ಪಡೆ ಆರಂಭಿಕ ಆಘಾತ ಎದುರಿಸಿತು. ಕೇವಲ 26 ರನ್ ಗಳಿಗೆ ಆರಂಭಿಕರಾದ ಮಾರ್ಟಿನ್ ಗಪ್ಟಿಲ್ (13 ರನ್) ಮತ್ತು ಕೊಲಿನ್ ಮನ್ರೋ (7 ರನ್) ಔಟ್ ಆದರು ಭಾರತಕ್ಕೆ ವೇಗಿಗಳಾದ ಭುವನೇಶ್ವರ್ ಕುಮಾರ್ ಹಾಗೂ ಮಹಮದ್ ಶಮಿ ಉತ್ತಮ ಆರಂಭ ಒದಗಿಸಿದರು. ಬಳಿಕ ಕ್ರೀಸ್ ಗೆ ಆಗಮಿಸಿದ ನಾಯಕ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ಮಧ್ಯಮ ಕ್ರಮಾಂಕದಲ್ಲಿ ಭಾರತೀಯ ಬೌಲರ್ ಗಳಿಗೆ ಪ್ರತಿರೋಧ ತೋರಿದರು. ಆದರೆ 17ನೇ ಓವರ್ ನಲ್ಲಿ ಹಾರ್ದಿಕ್ ಪಾಂಡ್ಯಾ ಹಿಡಿದ ಅದ್ಭುತ ಕ್ಯಾಚ್ ನಿಂದಾಗಿ ವಿಲಿಯಮ್ಸನ್ ಪೆವಿಲಿಯನ್ ಸೇರ ಬೇಕಾಯಿತು.
ಬಳಿಕ ಬಂದ ಲಾಥಮ್ ರಾಸ್ ಟೇಲರ್ ಗೆ ಉತ್ತಮ ಸಾಥ್ ನೀಡಿದರು. ಶತಕದ ಜೊತೆಯಾಟವಾಡಿದ ಈ ಜೋಡಿ ತಂಡದ ಬ್ಯಾಟಿಂಗ್ ಬಲ ತುಂಬಿತು. ಆದರೆ 38ನೇ ಓವರ್ ನಲ್ಲಿ ಆಗತಾನೇ ಅರ್ಧಶತಕ ಸಿಡಿಸಿದ್ದ ಲಾಥಮ್ ಚಾಹಲ್ ಬೌಲಿಂಗ್ ನಲ್ಲಿ ಔಟ್ ಆದರು. ಲಾಥಮ್ ಔಟಾದ ಬೆನ್ನಲ್ಲೇ ಹೆನ್ರಿ ನಿಕೋಲಸ್ (6 ರನ್), ಸ್ಯಾಂಥನರ್ (3 ರನ್) ಔಟ್ ಆದರು. ಅಲ್ಲಿಯವರೆಗೂ ಏಕಾಂಗಿ ಹೋರಾಟ ನಡೆಸಿ 93 ರನ್ ಗಳಿಸಿ ಶತಕದ ಹೊಸ್ತಿಲಲ್ಲಿದ್ದ ರಾಸ್ ಟೇಲರ್ ತಾಳ್ಮೆ ಕಳೆದುಕೊಂಡ ಪರಿಣಾಮ ಶಮಿ ಬೌಲಿಂಗ್ ನಲ್ಲಿ ಔಟ್ ಆದರು.
ಟೇಲರ್ ಬಂದ ಬಳಿಕ ಕ್ರೀಸ್ ಗೆ ಬಂದ ಸೋಧಿ 12 ರನ್ ಗಳಿಗೇ ಪೆವಿಲಿಯನ್ ಸೇರಿಕೊಂಡರೆ, ಬ್ರೇಸ್ ವೆಲ್ ರನ್ನು ಕೊಹ್ಲಿ ರನೌಟ್ ಮಾಡಿದರು. ಅಂತಿಮವಾಹಿ ಬೌಲ್ಟ್ 2 ರನ್ ಗೆ ಔಟ್ ಆಗುವುದರೊಂದಿಗೆ ನ್ಯೂಜಿಲೆಂಡ್ ತಂಡ 49 ಓವರ್ ಗಳಲ್ಲಿ 243 ರನ್ ಗಳಿಗೆ ಆಲೌಟ್ ಆಯಿತು.
ಭಾರತದ ಪರ ಮಹಮದ್ ಶಮಿ 3 ವಿಕೆಟ್ ಕಬಳಿಸಿದರೆ, ಪಾಂಡ್ಯಾ, ಭುವನೇಶ್ವರ್ ಕುಮಾರ್ ಮತ್ತು ಯಜುವೇಂದ್ರ ಚಾಹಲ್ ತಲಾ 2 ವಿಕೆಟ್ ಪಡೆದರು.
ಇದೀಗ 244 ರನ್ ಗಳ ಗುರಿ ಬೆನ್ನು ಹತ್ತಿರುವ ಭಾರತ ತಂಡದ ಪರ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಬ್ಯಾಟಿಂಗ್ ಆರಂಭಿಸಿದ್ದು, ತಂಡ 4 ರನ್ ಗಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com