ಕ್ರೀಡಾಸ್ಪೂರ್ತಿಯ ಪರೀಕ್ಷೆಯಲ್ಲಿ ಭಾರತ ವಿಫಲ: ವಕಾರ್ ಯೂನಿಸ್

ನಿರ್ಣಾಯಕ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡ ಬೆನ್ನಲ್ಲೇ ಪಾಕಿಸ್ತಾನ ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್ ಭಾರತ ತಂಡದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ನಿರ್ಣಾಯಕ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡ ಬೆನ್ನಲ್ಲೇ ಪಾಕಿಸ್ತಾನ ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್ ಭಾರತ ತಂಡದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಿನ್ನೆ ಬರ್ಮಿಂಗ್​ಹ್ಯಾಮ್​ನಲ್ಲಿ ನಡೆದ ವಿಶ್ವಕಪ್​ ಪಂದ್ಯದಲ್ಲಿ ಟೀಂ ಇಂಡಿಯಾ, ಆತಿಥೇಯ ಇಂಗ್ಲೆಂಡ್​ ವಿರುದ್ಧ 31 ರನ್​ಗಳ ಅಂತರದಲ್ಲಿ ಸೋಲು ಅನುಭವಿಸಿತ್ತು. ಇದರೊಂದಿಗೆ ಪಾಕಿಸ್ತಾನ ಸೆಮಿಫೈನಲ್​ ಆಸೆಗೂ ಕೊಹ್ಲಿ ಪಡೆ ಬಹುತೇಕ ತಣ್ಣೀರರೆಚಿತ್ತು. ಕೊನೆಯ 10 ಓವರ್​ಗಳಲ್ಲಿ ಭಾರತೀಯ ಬ್ಯಾಟ್ಸ್ ​ಮನ್​ಗಳು ತೋರಿದ ನಿರಾಶಾದಾಯಕ ಪ್ರದರ್ಶನದ ವಿರುದ್ಧ, ಪಾಕ್ ಮಾಜಿ ಕ್ರಿಕೆಟಿಗರು ಮತ್ತು ಪಾಕ್ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ. 
ಈ ಬಗ್ಗೆ ಮಾತನಾಡಿದ ಪಾಕ್​ ಮಾಜಿ ವೇಗಿ ವಾಕಾರ್​ ಯೂನಿಸ್, ಭಾರತ ತಂಡದ ಸ್ಪೋರ್ಟ್ಸ್ ಮನ್​ ಶಿಪ್​ ಅನ್ನು ಪ್ರಶ್ನಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ವಕಾರ್ ಯೂನಿಸ್, 'ವಿಶ್ವಕಪ್ ನಲ್ಲಿ ನೀವು ಯಾರು ಅನ್ನೋದು ಮುಖ್ಯವಲ್ಲ, ಜೀವನದಲ್ಲಿ ನೀವು ಏನು ಮಾಡುತ್ತೀರಿ ಎಂಬುದು ನೀವೇನು ಎಂಬುದನ್ನು ತಿಳಿಸುತ್ತದೆ. ಪಾಕಿಸ್ತಾನ ಸೆಮಿಸ್ ಗೆ ಹೋಗದೇ ಇರುವುದರ ಬಗ್ಗೆ ನನಗೆ ಬೇಸರವಿಲ್ಲ. ಆದರೆ ಈ ಪಂದ್ಯದಲ್ಲಿ ಕೆಲವು ಚಾಂಪಿಯನ್ ಗಳ ಕ್ರೀಡಾ ಕೌಶಲ್ಯವನ್ನು ಪರೀಕ್ಷೆ ಮಾಡಲಾಯಿತು. ಅದನ್ನು ಸಾಬೀತು ಪಡಿಸುವಲ್ಲಿ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ' ಎಂದು ವಾಕಾರ್​​ ಯೂನಿಸ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com