ಜಡೇಜಾರನ್ನು ಹೆಚ್ಚುವರಿ ಆಯ್ಕೆಯಾಗಿ ಪರಿಗಣಿಸಲಾಗಿದೆ: ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್

ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾರನ್ನು ತಂಡದ ಹೆಚ್ಚುವರಿ ಆಯ್ಕೆಯಾಗಿ ಪರಿಗಣಿಸಲಾಗಿದೆ ಎಂದು ತಂಡದ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾರನ್ನು ತಂಡದ ಹೆಚ್ಚುವರಿ ಆಯ್ಕೆಯಾಗಿ ಪರಿಗಣಿಸಲಾಗಿದೆ ಎಂದು ತಂಡದ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ಬಂಗಾರ್ ಅವರು, ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಎದುರಿಸಿದರು. ಪ್ರಮುಖವಾಗಿ, ಮಧ್ಯಮ ಕ್ರಮಾಂಕದ ವೈಫಲ್ಯ ತಂಡಕ್ಕೆ ಸೋಲು ತಂದಿತೇ ಎಂಬ ಪ್ರಶ್ನೆಗೆ ಉತ್ತರಿಸಿದ ಬಂಗಾರ್, ತಂಡದ ಬ್ಯಾಟಿಂಗ್ ತಂತ್ರಗಾರಿಕೆ ಫಲ ನೀಡಲಿಲ್ಲ. ಮೊದಲ 10 ಓವರ್ ಮತ್ತು ಇನ್ನಿಂಗ್ಸ್ ಅಂತಿಮ ಐದು ಓವರ್ ಗಳಲ್ಲಿ ತಂಡದ ಬ್ಯಾಟಿಂಗ್ ತಂತ್ರಗಾರಿಕೆ ಸಫಲವಾಗಲಿಲ್ಲ. ಹೀಗಾಗಿ ತಂಡ 40 ರನ್ ಗಳ ಕೊರತೆ ಎದುರಿಸಿತು. ಇದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು ಎಂದು ಹೇಳಿದ್ದಾರೆ.
ಇದೇ ವೇಳೆ ಸ್ಪಿನ್ನರ್ ಗಳಾದ ಚಾಹಲ್ ಮತ್ತು ಕುಲದೀಪ್ ಯಾದವ್ ಕುರಿತು ಮಾತನಾಡಿದ ಬಂಗಾರ್, ಒಂದೇ ಒಂದು ಪಂದ್ಯದ ವೈಫಲ್ಯದ ಆಧಾರದ ಮೇಲೆ ಚಾಹಲ್, ಕುಲದೀಪ್ ಯಾದವ್ ಸಾಮರ್ಥ್ಯ ನಗಣ್ಯ ಬೇಡ. ಇಬ್ಬರ ಪೈಕಿ ಒಬ್ಬರನ್ನು ತೆಗೆದು ರವೀಂದ್ರ ಜಡೇಜಾ ಅವರಿಗೆ ಸ್ಥಾನ ನೀಡಬೇಕು ಎಂಬ ಮಾತುಗಳು ಮಾಧ್ಯಮಗಳಲ್ಲಿ ಕೇಳಿಬರುತ್ತಿವೆ. ಆದರೆ ರವೀಂದ್ರ ಜಡೇಜಾರನ್ನು ನಾವು ಹೆಚ್ಚುವರಿ ಆಯ್ಕೆಯಾಗಿ ಪರಿಗಣಿಸಿದ್ದೇವೆ. ಬಹುಶಃ ಮಂಗಳವಾರದ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಅವರು ಕಣಕ್ಕಿಳಿಯಲೂ ಬಹುದು. ಆದರೆ ಈ ಬಗ್ಗೆ ಈಗಲೇ ನಿರ್ಧರಿಸಲು ಸಾಧ್ಯವಿಲ್ಲ. 
ತಂಡದಲ್ಲಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಸೇರಿದಂತೆ ಮೂವರು ವೇಗಿಗಳಿದ್ದು, ಜಡೇಜಾ ಕೂಡ ನಮ್ಮ ಯೋಜನೆಯ ಭಾಗವಾಗಿದ್ದಾರೆ. ಆದರೆ ಆಯಾ ಸಂದರ್ಭಕ್ಕೆ ಅನುಗುಣವಾಗಿ ಅವರ ಬಳಕೆ ಮಾಡುವ ಕುರಿತು ಚಿಂತಿಸಲಾಗುತ್ತದೆ ಎಂದು ಹೇಳಿದ್ದಾರೆ. ಕೆಳಕ್ರಮಾಂಕದಿಂದಲೂ ರನ್ ಗಳ ನಿರೀಕ್ಷೆ ಇದೆ. ಈ ವಿಚಾರದಲ್ಲಿ ಭುವನೇಶ್ವರ್ ಕುಮಾರ್ ಪ್ರಮುಖರಾಗುತ್ತಾರೆ ಎಂದು ಬಂಗಾರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com