ಭಾರತ-ಬಾಂಗ್ಲಾದೇಶ ಹಣಾಹಣಿ: ಪ್ರೇಕ್ಷಕರ ಗ್ಯಾಲರಿಯಲ್ಲಿ ಗಮನ ಸೆಳೆದ 87ರ ವೃದ್ಧೆ ಯಾರು ಗೊತ್ತಾ?

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಹಣಾಹಣಿಯಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಸುಮಾರು 87 ವರ್ಷದ ಅಜ್ದಿಯೊಬ್ಬರು ಇದೀಗ ಮಾಧ್ಯಮಗಳ ಕೇಂದ್ರ ಬಿಂದುವಾಗಿದ್ದಾರೆ.
87 ವರ್ಷದ ಅಜ್ಜಿ ಚಾರುಲತಾ ಪಟೇಲ್
87 ವರ್ಷದ ಅಜ್ಜಿ ಚಾರುಲತಾ ಪಟೇಲ್
Updated on: 
ಲಂಡನ್: ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಹಣಾಹಣಿಯಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಸುಮಾರು 87 ವರ್ಷದ ಅಜ್ದಿಯೊಬ್ಬರು ಇದೀಗ ಮಾಧ್ಯಮಗಳ ಕೇಂದ್ರ ಬಿಂದುವಾಗಿದ್ದಾರೆ.
ಇಂದು ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಆಟಗಾರರ ಪ್ರದರ್ಶನಕ್ಕಿಂತ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಅಜ್ಜಿಯೊಬ್ಬರು ವ್ಯಾಪಕ ಗಮನ ಸೆಳೆದರು. ಪ್ರತೀ ಬಾರಿ ಓವರ್ ಮುಕ್ತಾಯವಾದಾಗಲೂ ಕ್ಯಾಮೆರಾಗಳ ಕಣ್ಣು ನೇರವಾಗಿ ಅಜ್ಜಿಯತ್ತಲೇ ಹೋಗುತ್ತಿದ್ದು. ಸುಮಾರು 87 ವರ್ಷ ವಯಸ್ಸಿನ ಅಜ್ಜಿ ಭಾರತದ ಪರ ಘೋಷಣೆಗಳನ್ನು ಕೂಗುತ್ತಿದ್ದರು. ನಿಲ್ಲಲೂ ಆಗದ ನಡೆಯಲೂ ಆಗದ ಅಜ್ಜಿ ವೀಲ್ ಚೇರ್ ನಲ್ಲಿ ಕ್ರೀಡಾಂಗಣಕ್ಕೆ ಆಗಮಿಸಿ ಭಾರತ ತಂಡಕ್ಕೆ ಬೆಂಬಲ ನೀಡುತ್ತಿದ್ದರು.
ಭಾರತೀಯ ಆಟಗಾರರು ಪ್ರತೀ ಬಾರಿ ಬೌಂಡರಿ ಬಾರಿಸಿದಾಗಲೂ ಅಜ್ಜಿ ವೀಲ್ ಚೇರ್ ನಲ್ಲಿ ಕುಳಿತೇ ಕೂಗಿ ಭಾರತ ತಂಡದ ಆಟಗಾರರಿಗೆ ಪ್ರೋತ್ಯಾಹ ತುಂಬುತ್ತಿದ್ದರು. ಈ ಇಳಿ ವಯಸ್ಸಿನಲ್ಲಿಯೂ ಉತ್ಸಾಹದ ಚಿಲುಮೆಯಂತಿದ್ದ ಅಜ್ಜಿ ಅಕ್ಷರಶಃ ಕ್ಯಾಮೆರಾಗಳ ಕೇಂದ್ರ ಬಿಂದುವಾಗಿದ್ದರು.
ಏತನ್ಮಧ್ಯೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ 87 ವರ್ಷದ ಅಜ್ಜಿ ಚಾರುಲತಾ ಪಟೇಲ್ ಅವರು.  ನಾನು ಭಾರತ ಮೂಲದವಳು. ದಶಕಗಳಿಂದಲೂ ಆಫ್ರಿಕಾದಲ್ಲಿ ವಾಸಿಸುತ್ತಿದ್ದೇನೆ. ನಾನು ಈ ಹಿಂದೆ ಕೆಲಸ ಮಾಡುತ್ತಿದ್ದಾಗ ಕ್ರೀಡಾಂಗಣಕ್ಕೆ ಆಗಮಿಸಿ ಕ್ರಿಕೆಟ್ ವೀಕ್ಷಣೆ ಮಾಡಲು ಆಗುತ್ತಿರಲಿಲ್ಲ. ಇದೀಗ ನಿವೃತ್ತಿಯಾಗಿದ್ದೇನೆ. ಹೀಗಾಗಿ ಕ್ರೀಡಾಂಗಣಕ್ಕೆ ಬಂದು ಪಂದ್ಯ ವೀಕ್ಷಿಸುತ್ತಿದ್ದೇನೆ. ನನ್ನ ಭಾರತ ತಂಡ ಖಂಡಿತಾ ಗೆಲ್ಲುತ್ತದೆ. ಭಾರತ ತಂಡ ಗೆಲ್ಲಲಿ ಎಂದು ನನ್ನ ಇಷ್ಟ ದೇವರಾದ ಗಣೇಶನಿಗೆ ಪೂಜೆ ಮಾಡಿ ಬಂದಿದ್ದೇನೆ. 
1983ರಲ್ಲಿ ವಿಶ್ವಕಪ್ ವೇಳೆಯಲ್ಲೂ ನಾನು ಕ್ರೀಡಾಂಗಣಕ್ಕೆ ಆಗಮಿಸಿ ಪಂದ್ಯ ವೀಕ್ಷಣೆ ಮಾಡಿದ್ದೆ. ಅಂದು ಕಪಿಲ್ ದೇವ್ ಅವರ ಭಾರತ ತಂಡ ವಿಶ್ವಕಪ್ ಗೆದ್ದಿತ್ತು. ಈಗಲೂ ಭಾರತ ತಂಡವೇ ಗೆಲ್ಲಲಿದೆ ಎಂದು ಚಾರುಲತಾ ಪಟೇಲ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com