ಐಸಿಸಿ ವಿಶ್ವಕಪ್ 2019: ಸೆಮೀಸ್​ ನಲ್ಲಿ ಯಾರಿಗೆ ಯಾರು ಎದುರಾಳಿ? ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ

ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಸೆಮಿ ಫೈನಲ್ ಕದನ ನಡೆಯಲಿದ್ದು, ಯಾವ ತಂಡ ಯಾವ ತಂಡದ ವಿರುದ್ಧ ಫೈನಲ್ ಗಾಗಿ ಹೋರಾಟ ನಡೆಸಲಿದೆ ಎಂಬ ಲೆಕ್ಕಾಚಾರ ಆರಂಭವಾಗಿದೆ.
ಲಂಡನ್: ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ಮಾಡಬೇಕು ಎಂದಿದ್ದ ಮ್ಯಾಜಿಕ್ ಫೇಲ್ ಆಗಿದ್ದು, ಪಾಕಿಸ್ತಾನದ ಸೆಮಿ ಫೈನಲ್ ಕನಲು ಛಿದ್ರಗೊಂಡಿದೆ. ಅದರಂತೆ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಸೆಮಿ ಫೈನಲ್ ಕದನ ನಡೆಯಲಿದ್ದು, ಯಾವ ತಂಡ ಯಾವ ತಂಡದ ವಿರುದ್ಧ ಫೈನಲ್ ಗಾಗಿ ಹೋರಾಟ ನಡೆಸಲಿದೆ ಎಂಬ ಲೆಕ್ಕಾಚಾರ ಆರಂಭವಾಗಿದೆ.
ಬಾಂಗ್ಲಾದೇಶದ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲವಾದ ಪಾಕಿಸ್ತಾನ ಟೂರ್ನಿಯಿಂದ ಹೊರಬಿದ್ದಿದ್ದು, ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಸೆಮಿ ಫೈನಲ್ ಕದನ ನಡೆಯಲಿದೆ. ಸೆಮಿ ಫೈನಲ್ ಗೆ ತಂಡಗಳು ಅಂತಿಮವಾದರೂ ಯಾವ ತಂಡ ಯಾವ ತಂಡದ ವಿರುದ್ಧ ಸ್ಪರ್ಧೆ ಮಾಡಲಿದೆ ಎಂಬುದು ಖಚಿತವಾಗಿಲ್ಲ. ಭಾರತ ಮತ್ತು ಆಸ್ಟ್ಕೇಲಿಯಾ ತಂಡಗಳು ಟೂರ್ನಿ ಇನ್ನೂ ತಲಾ ಒಂದು ಲೀಗ್ ಪಂದ್ಯಗಳನ್ನಾಡಲಿದ್ದು, ಆಸ್ಟ್ರೇಲಿಯಾ ತಂಡ ನಾಳೆ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದ್ದು, ಭಾರತ ಕೂಡ ನಾಳೆ ಶ್ರೀಲಂಕಾ ತಂಡವನ್ನು ಎದುರಿಸಲಿದೆ.
ಇನ್ನು ಸದ್ಯದ ಅಂಕಪಟ್ಟಿಯಲ್ಲಿ ತಂಡಗಳು ತಾವಿರುವ ಸ್ಥಾನದ ಆಧಾರದ ಮೇಲೆ ಹೇಳುವುದಾದರೆ, ಪಟ್ಟಿಯಲ್ಲಿ ಅಗ್ರ ಸ್ಥಾನ ಹೊಂದಿರುವ ತಂಡ ನಾಲ್ಕನೇ ಸ್ಥಾನದಲ್ಲಿರುವ ತಂಡವನ್ನು ಮತ್ತು ಎರಡನೇ ಸ್ಥಾನದಲ್ಲಿರುವ ತಂಡ ಮೂರನೇ ಸ್ಥಾನದಲ್ಲಿರುವ ತಂಡವನ್ನು ಸೆಮಿ ಫೈನಲ್ ನಲ್ಲಿ ಎದುರಿಸಲಿದೆ. ಅದರಂತೆ ಹಾಲಿ ಇರುವ ಪಟ್ಟಿಯನ್ನು ವಿಶ್ಲೇಷಿಸಿ ಹೇಳುವುದಾದರೆ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ ತಂಡ ನಾಲ್ಕನೇ ಸ್ಥಾನಿಯಾದ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದ್ದು, ಎರಡನೇ ಸ್ಥಾನಿಯಾದ ಭಾರತ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ಆದರೆ ನಾಳೆ ಭಾರತ ಮತ್ತು ಆಸ್ಟ್ರೇಲಿಯಾ ಎರಡೂ ತಂಡಗಳು ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಕೊನೆಯ ಲೀಗ್ ಪಂದ್ಯಗಳನ್ನು ಆಡಲಿದ್ದು, ನಾಳಿನ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಎರಡೂ ತಂಡಗಳು ಗೆದ್ದರೆ ಅಥವಾ ಸೋತರೆ ಮೇಲಿನ ಲೆಕ್ಕಾಚಾರದಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ. ಆದರೆ ಆಫ್ರಿಕಾ ವಿರುದ್ಧ ಆಸಿಸ್ ಸೋತು, ಶ್ರೀಲಂಕಾ ವಿರುದ್ಧ ಭಾರತ ಗೆದ್ದರೆ ಆಗ ಭಾರತ ತಂಡ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರುತ್ತದೆ. ಆಗ ಭಾರತ ಮತ್ತು ನ್ಯೂಜಿಲೆಂಡ್ ತಂಡ ಸೆಮೀಸ್ ನಲ್ಲಿ ಸೆಣಸಾಡಲಿದೆ. ಒಂದು ವೇಳೆ ಭಾರತ ಸೋತು ಆಸಿಸ್ ಗೆದ್ದರೆ ಆಗಲೂ ಪಟ್ಟಿಯಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ. ಕಾರಣ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಲೀಗ್ ಹಂತದ ಎಲ್ಲ ಪಂದ್ಯಗಳನ್ನೂ ಪೂರ್ಣಗೊಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com