ಐಸಿಸಿ ವಿಶ್ವಕಪ್ 2019: ಮೆಗ್ರಾತ್ ದಾಖಲೆಯ ಮೇಲೆ ಸ್ಟಾರ್ಕ್ ಕಣ್ಣು

ನಾಳೆ ಐಸಿಸಿ ವಿಶ್ವಕಪ್ ಟೂರ್ನಿಯ ಅಂತಿಮ ಲೀಗ್ ಪಂದ್ಯವನ್ನಾಡುತ್ತಿರುವ ಆಸ್ಟ್ರೇಲಿಯಾ ತಂಡ ವಿಶೇಷ ದಾಖಲೆಗೆ ಸಾಕ್ಷಿಯಾಗುವ ಸಾಧ್ಯತೆ ಇದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ನಾಳೆ ಐಸಿಸಿ ವಿಶ್ವಕಪ್ ಟೂರ್ನಿಯ ಅಂತಿಮ ಲೀಗ್ ಪಂದ್ಯವನ್ನಾಡುತ್ತಿರುವ ಆಸ್ಟ್ರೇಲಿಯಾ ತಂಡ ವಿಶೇಷ ದಾಖಲೆಗೆ ಸಾಕ್ಷಿಯಾಗುವ ಸಾಧ್ಯತೆ ಇದೆ.
ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡುತ್ತಿರುವ ಆಸಿಸ್ ವೇಗಿ ಮಿಚೆಲ್ ಸ್ಟಾರ್ಕ್, ತಮ್ಮದ ತಂಡದ ಮಾಜಿ ಆಟಗಾರ ಗ್ಲೇನ್ ಮೆಗ್ರಾತ್ ಅವರ ದಾಖಲೆಯೊಂದನ್ನು ಮುರಿಯುವ ಸನ್ನಾಹದಲ್ಲಿದ್ದಾರೆ. 
ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅಧಿಕ ವಿಕೆಟ್ ಪಡೆದು ಬೀಗಿದ ಕೀರ್ತಿಯನ್ನು ಹೊಂದಿರುವ ಆಸ್ಟ್ರೇಲಿಯಾದ ಸ್ಟಾರ್ ವೇಗಿ ಗ್ಲೇನ್ ಮೆಗ್ರಾತ್ ಅವರ ದಾಖಲೆಯ ಮೇಲೆ ಮಿಚೆಲ್ ಸ್ಟಾರ್ಕ್ ಕಣ್ಣು ನೆಟ್ಟಿದ್ದಾರೆ. ಮೆಗ್ರಾತ್ ಅವರು 2007ರ ವಿಶ್ವಕಪ್ ನಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿ 26 ವಿಕೆಟ್ ಕಬಳಿಸಿದ್ದರು. ಅಲ್ಲದೆ ತಮ್ಮ ತಂಡಕ್ಕೆ ಚಾಂಪಿಯನ್ ಪಟ್ಟ ತೊಡಿಸಿದ್ದರು. ಮೆಗ್ರಾತ್ ಅವರ ಈ ದಾಖಲೆಯನ್ನು ಅಳಿಸಿ ಹಾಕಲು ಮಿಚೆಲ್ ಸ್ಟಾರ್ಕ್ ಸಿದ್ಧರಾಗಿದ್ದಾರೆ. 
ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಮನಮೋಹಕ ಬೌಲಿಂಗ್ ದಾಳಿ ನಡೆಸಿರುವ ಮಿಚೆಲ್ ಸ್ಟಾರ್ಕ್ 24 ವಿಕೆಟ್ ಕಬಳಿಸಿದ್ದಾರೆ. ಮೆಗ್ರಾತ್ ದಾಖಲೆಯನ್ನು ಅಳಿಸಿ ಹಾಕಲು ಸ್ಟಾರ್ಕ್ ಗೆ ಇನ್ನು ಮೂರು ವಿಕೆಟ್ ಅವಶ್ಯಕತೆ ಇದೆ.
ಶನಿವಾರ ಆಸ್ಟ್ರೇಲಿಯಾ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕೆ ಇಳಿಯಲಿದೆ. ಅಲ್ಲದೆ ಆಸ್ಟ್ರೇಲಿಯಾ ತಂಡ ಈಗಾಗಲೇ ಸೆಮಿಫೈನಲ್ಸ್ ಪ್ರವೇಶ ಪಡೆದಿದೆ. ಸ್ಟಾರ್ಕ್ ಅವರಿಗೆ ಇನ್ನು ಮೂರು ವಿಕೆಟ್ ಪಡೆಯಲು ಇನ್ನು ಎರಡು ಪಂದ್ಯಗಳು ಲಭಿಸಲಿವೆ. ಈ ಪಂದ್ಯಗಳಲ್ಲಿ ಅವರು ಮೆಗ್ರಾತ್ ದಾಖಲೆ ಅಳಿಸುವ ಕನಸು ಕಾಣುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com