'ಬೌಂಡರಿ ಸಿಗ್ನಲ್ ಹೇಗೆ ತೋರಿಸುತ್ತಾರೆ'... ಮತ್ತೆ ಟ್ರೋಲ್ ಗೆ ತುತ್ತಾದ ಕ್ಯಾಪ್ಟನ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರಿಗೆ ಬೌಂಡರಿ ಬಾರಿಸಿದಾಗ ಅಂಪೈರ್ ತೋರಿಸುವ ಸನ್ಹೆ ಗೊತ್ತಿಲ್ಲವೇ.. ಇಂತಹುದೊಂದು ಪ್ರಶ್ನೆಯನ್ನು ಅವರೇ ಹುಟ್ಟುಹಾಕಿದ್ದು, ಅವರ ಕುರಿತ ಒಂದು ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರಿಗೆ ಬೌಂಡರಿ ಬಾರಿಸಿದಾಗ ಅಂಪೈರ್ ತೋರಿಸುವ ಸನ್ಹೆ ಗೊತ್ತಿಲ್ಲವೇ.. ಇಂತಹುದೊಂದು ಪ್ರಶ್ನೆಯನ್ನು ಅವರೇ ಹುಟ್ಟುಹಾಕಿದ್ದು, ಅವರ ಕುರಿತ ಒಂದು ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ನಿನ್ನೆ ಇಂಗ್ಲೆಂಡ್ ನ ಲೀಡ್ಸ್ ನಲ್ಲಿ ಶ್ರೀಲಂಕಾ ಮತ್ತು ಭಾರತ ನಡುವಿನ ಅಂತಿಮ ಲೀಗ್ ಪಂದ್ಯ ವೀಕ್ಷಣೆಗೆ ಆಗಮಿಸಿದ್ದ ನಟಿ ಅನುಷ್ಕಾ ಶರ್ಮಾ, ತಮ್ಮ ಗೆಳೆಯನನ್ನು 'ಬೌಂಡರಿ ಸಿಗ್ನಲ್ ಹೇಗೆ ತೋರಿಸುತ್ತಾರೆ' ಎಂದು ಕೇಳಿದ್ದಾರೆ. ಈ ಕುರಿತ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡ ಎಂದೇ ಹೇಳಲಾಗುತ್ತಿರುವ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಪತ್ನಿಗೆ ಬೌಂಡರಿ ಸಿಗ್ನಲ್ ತಿಳಿದಿಲ್ಲವೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 7 ವಿಕೆಟ್ ಗಳಿಂದ ಭಾರತ ಮಣಿಸಿದಾಗ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಅನುಷ್ಕಾ ತಮ್ಮ ಗೆಳೆಯನನ್ನು 'ಬೌಂಡರಿ ಸಿಗ್ನಲ್ ಹೇಗೆ ತೋರಿಸುತ್ತಾರೆ' ಎಂದು ಕೇಳಿದ್ದಾರೆ.  ಇದಕ್ಕೆ ಉತ್ತರಿಸಿದ ಆತ ಬೌಂಡರಿ ಸಿಗ್ನಲ್ ತೋರಿಸುತ್ತಾನೆ. 
ಇದೀಗ ಇದೇ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದ್ದು, ಅನುಷ್ಕಾರನ್ನು ವ್ಯಾಪಕ ಟ್ರೋಲ್ ಮಾಡಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com