ಐಸಿಸಿ ವಿಶ್ವಕಪ್ 2019: ವೀಕ್ಷಣೆಯಲ್ಲಿ ದಾಖಲೆ ಬರೆದ ಇಂಡೋ-ಕಿವೀಸ್ ಸೆಮೀಸ್ ಪಂದ್ಯ!

ಐಸಿಸಿ ವಿಶ್ವಕಪ್ ಟೂರ್ನಿ ಅಂತಿಮ ಹಂತ ತಲುಪಿರುವಂತೆಯೇ ಅಭಿಮಾನಿಗಳ ಕುತೂಹಲ ಹೆಚ್ಚಾಗಿದ್ದು, ಟೂರ್ನಿ ವಿಕ್ಷಕರ ಸಂಖ್ಯೆ ಕೂಡ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ಐಸಿಸಿ ವಿಶ್ವಕಪ್ ಟೂರ್ನಿ ಅಂತಿಮ ಹಂತ ತಲುಪಿರುವಂತೆಯೇ ಅಭಿಮಾನಿಗಳ ಕುತೂಹಲ ಹೆಚ್ಚಾಗಿದ್ದು, ಟೂರ್ನಿ ವಿಕ್ಷಕರ ಸಂಖ್ಯೆ ಕೂಡ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ.
ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿ ಅತಿ ಹೆಚ್ಚು ವೀಕ್ಷಕರನ್ನು ಸೆಳೆದಿದ್ದು, ದಾಖಲೆ ನಿರ್ಮಿಸಿದೆ ಎಂದು ತಿಳಿದು ಬಂದಿದೆ. ನೇರ ಪ್ರಸಾರ, ಅಂತರ್ಜಾಲದ ಮುಖಂತಾರ ಕ್ರಿಕೆಟ್ ಪಂದ್ಯದ ವೀಕ್ಷಣೆ ಮತ್ತು ಮಾಹಿತಿ ಪಡೆದ ಅಭಿಮಾನಿಗಳ ಸಂಖ್ಯೆ ಗಣನೀಯವಾಗಿ ಏರಿಕೆ ಆಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಈ ಬಗ್ಗೆ ಮಾಹಿತಿ ನೀಡಿದ್ದು, ಲೀಗ್ ಹಂತದಲ್ಲಿ ಸಾಮಾಜಿಕ ತಾಣದಲ್ಲಿ ದೃಶ್ಯವನ್ನು ನೋಡಿದವರ ಸಂಖ್ಯೆ 2.6 ಬಿಲಿಯನ್ ಆಗಿದೆ. ಇನ್ನು ಆರು ವಾರಗಳಲ್ಲಿ ಸಾಮಾಜಿಕ ತಾಣದ ಹಿಂಬಾಲಕರ ಸಂಖ್ಯೆ 12 ಮಿಲಿಯನ್ ಗೆ ಏರಿಕೆಯಾಗಿದೆ. ಅಂತೆಯೇ ಐಸಿಸಿ ಅಧಿಕೃತ ವೆಬ್ ಪೇಜ್ ನ್ನು ಬರೊಬ್ಬಿರಿ 250 ಮಿಲಿಯನ್ ಜನ ವೀಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ವರೆಗಿನ ಅಂದರೆ ಒಟ್ಟು ಆರು ವಾರಗಳಲ್ಲಿ ನಡೆದ ಪಂದ್ಯಗಳಲ್ಲಿ ಬರೊಬ್ಬರಿ 386 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದು, ಐಸಿಸಿ ವೆಬ್ ಸೈಟಿಗೆ 65 ಮಿಲಿಯನ್ ಮಂದಿ ಭೇಟಿ ನೀಡಿದ್ದಾರೆ. ಬ್ರಿಟನ್ ವೊಂದರಲ್ಲೇ ಐಸಿಸಿಯ ಸಾಮಾಜಿಕ ಜಾಲತಾಣ ಪುಟವನ್ನು 250 ಮಿಲಿಯನ್ ಮಂದಿ ವೀಕ್ಷಿಸಿದ್ದು, ಸ್ಕೈ ಸ್ಪೋರ್ಟ್ಸ್ ಮೂಲಕ ಪಂದ್ಯ ವೀಕ್ಷಿಸಿದವರ ಸಂಖ್ಯೆ 20 ಮಿಲಿಯನ್ ಗೆ ಏರಿಕೆಯಾಗಿದೆ.
ಅಗ್ರಸ್ಥಾನದಲ್ಲಿ ಇಂಡೋ-ಕಿವೀಸ್ ಸೆಮೀಸ್ ಪಂದ್ಯ
ಇನ್ನು ಅತೀ ಹೆಚ್ಚು ವೀಕ್ಷಕರನ್ನು ಕಂಡ ಪಂದ್ಯಗಳ ಪಟ್ಟಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಸೆಮೀಸ್ ಪಂದ್ಯವಿದ್ದು, ಈ ಪಂದ್ಯವನ್ನು ಬರೊಬ್ಬರಿ 25.3 ಮಿಲಿಯನ್ ಮಂದಿ ಹಾಟ್ ಸ್ಟಾರ್ ಮೂಲಕ ವೀಕ್ಷಣೆ ಮಾಡಿದ್ದಾರೆ. ಆ ಬಳಿಕದ ಸ್ಥಾನದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಲೀಗ್ ಪಂದ್ಯವಿದ್ದು, ಈ ಪಂದ್ಯವನ್ನು 465,000 ಮಂದಿ ವೀಕ್ಷಣೆ ಮಾಡಿದ್ದಾರೆ. ಮೂರನೇ ಸ್ಥಾನದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಸೆಮಿ ಫೈನಲ್ ಪಂದ್ಯವಿದ್ದು, ಈ ಪಂದ್ಯ ಬ್ರಿಟನ್ ನಲ್ಲಿ ಅತೀ ಹೆಚ್ಚು ವೀಕ್ಷಕರನ್ನು ಸೆಳೆದ ಪಂದ್ಯ ಎಂಬ ಕೀರ್ತಿಗೂ ಭಾಜನವಾಗಿದೆ.
ಐಸಿಸಿ ನೀಡಿರುವ ಮಾಹಿತಿಗಳ ಅನ್ವಯ ಈ ಪಂದ್ಯವನ್ನು 220 ಪ್ರಾಂತ್ಯಗಳಲ್ಲಿ 46 ವಾಹಿನಿಗಳು ಪ್ರಸಾರ ಮಾಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com