ವಿಶ್ವಕಪ್ ಫೈನಲ್: ಇಂಗ್ಲೆಂಡ್‌ಗೆ 242 ರನ್‍ಗಳ ಗುರಿ ನೀಡಿದ ನ್ಯೂಜಿಲ್ಯಾಂಡ್

ವಿಶ್ವಕಪ್ ಫೈನಲ್ ಪಂದ್ಯ ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿದ್ದು ಆತಿಥೇಯ ಆಂಗ್ಲರ ದಾಳಿಗೆ ಬೆದರಿದ ನ್ಯೂಜಿಲ್ಯಾಂಡ್ 241 ರನ್ ಪೇರಿಸಿದೆ.
ಇಂಗ್ಲೆಂಡ್-ನ್ಯೂಜಿಲ್ಯಾಂಡ್
ಇಂಗ್ಲೆಂಡ್-ನ್ಯೂಜಿಲ್ಯಾಂಡ್
Updated on: 
ಲಂಡನ್: ವಿಶ್ವಕಪ್ ಫೈನಲ್ ಪಂದ್ಯ ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿದ್ದು ಆತಿಥೇಯ ಆಂಗ್ಲರ ದಾಳಿಗೆ ಬೆದರಿದ ನ್ಯೂಜಿಲ್ಯಾಂಡ್ 241 ರನ್ ಪೇರಿಸಿದೆ. 
ಲಾರ್ಡ್ಸ್ ನಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ ನಿಗದಿತ ಓವರ್ ನಲ್ಲಿ 8 ವಿಕೆಟ್ ಕಳೆದುಕೊಂಡು 241 ರನ್ ಮಾತ್ರ ಪೇರಿಸಿದೆ. ಇನ್ನು ಇಂಗ್ಲೆಂಡ್ ಗೆ 242 ರನ್ ಗಳ ಗುರಿ ನೀಡಿದೆ. 
ಪ್ಲುಂಕೆಟ್ ಮಾರಕ ಬೌಲಿಂಗ್ ಗೆ ನ್ಯೂಜಿಲ್ಯಾಂಡ್ ತತ್ತರಿಸಿದೆ. ಮಾರ್ಟಿನ್ ಗುಪ್ಟಿಲ್ 19, ನಿಕೋಲಾಸ್ 55, ಕೇನ್ ವಿಲಿಯಮ್ಸನ್ 30, ಲ್ಯಾಥಂ 47, ನಿಶಾಮ್ 19 ರನ್ ಬಾರಿಸಿದ್ದಾರೆ. 
ಇಂಗ್ಲೆಂಡ್ ಪರ ಬೌಲಿಂಗ್ ನಲ್ಲಿ ಪ್ಲುಂಕೆಟ್ ಮತ್ತು ವೋಕ್ಸ್ ತಲಾ 3 ವಿಕೆಟ್ ಪಡೆದಿದ್ದಾರೆ. ಆರ್ಚರ್ ಮತ್ತು ಮಾರ್ಕ್ ವುಡ್ ತಲಾ 1 ವಿಕೆಟ್ ಪಡೆದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com