ಸಂಗ್ರಹ ಚಿತ್ರ
ಕ್ರಿಕೆಟ್
ಕ್ಲಾಸಿಕ್ ಕ್ಯಾಚ್: ಒಂದೇ ಕೈಯಲ್ಲಿ ಕ್ಯಾಚ್ ಹಿಡಿದ ಫೋಟೋಗ್ರಾಫರ್, ವಿಡಿಯೋ ನೋಡಿದ್ರೆ ವಾವ್ಹಾ ಅಂತೀರಾ!
ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಕರ್ಷಕ ಫೋಟೋಗಳನ್ನು ಹಿಡಿಯುತ್ತಿದ್ದ ಫೋಟೋಗ್ರಾಫರ್ ಒಬ್ಬರು ಬ್ಯಾಟ್ಸ್ ಮನ್ ಸಿಡಿಸಿದ ಚೆಂಡನ್ನು ಒಂದೇ ಕೈಯಲ್ಲಿ ಹಿಡಿದು ಸುದ್ದಿಯಾಗಿದ್ದಾರೆ.
ಲಂಡನ್: ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಕರ್ಷಕ ಫೋಟೋಗಳನ್ನು ಹಿಡಿಯುತ್ತಿದ್ದ ಫೋಟೋಗ್ರಾಫರ್ ಒಬ್ಬರು ಬ್ಯಾಟ್ಸ್ ಮನ್ ಸಿಡಿಸಿದ ಚೆಂಡನ್ನು ಒಂದೇ ಕೈಯಲ್ಲಿ ಹಿಡಿದು ಸುದ್ದಿಯಾಗಿದ್ದಾರೆ.
ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಆಫ್ರಿಕಾ ಬ್ಯಾಟ್ಸ್ ಮನ್ ಫಾಫ್ ಡು ಪ್ಲೆಸಿಸ್ ಬಾಂಗ್ಲಾದ ವೇಗಿ ಮೊಸದಿಕ್ ಹುಸೇನ್ ಓವರ್ ನಲ್ಲಿ ಸಿಕ್ಸರ್ ಬಾರಿಸಿದರು. ಈ ವೇಳೆ ಪೆಲಿವಿಯನ್ ಬಳಿ ನಿಂತಿದ್ದ ಫೋಟೋಗ್ರಾಫರ್ ಇಯಾನ್ ಕಿಂಗ್ಟನ್ ಎಡಗೈನಲ್ಲಿ ಕ್ಯಾಮೆರಾ ಹಿಡಿದುಕೊಂಡಿದ್ದು ಮತ್ತೊಂದು ಕೈಯಲ್ಲಿ ಕ್ಯಾಚ್ ಹಿಡಿದಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.
ಇನ್ನು ಫೋಟೋಗ್ರಾಫರ್ ಹಿಡಿದ ಕ್ಯಾಚನ್ನು ಕಾಮೆಂಟೇಟರ್ ಮಾರ್ಕ್ ನಿಕೋಲ್ಸ್ ಇದು ಕ್ಲಾಸಿಕ್ ಕ್ಯಾಚ್. ಇಂಗ್ಲೆಂಡ್ ತಂಡದ ಬೆನ್ ಸ್ಟೋಕ್ಸ್ ಹಿಡಿದ ಅದ್ಭುತ ಡೈ ಕ್ಯಾಚ್ ನಷ್ಟೇ ಆಕರ್ಷಣಿಯವಾಗಿತ್ತು ಎಂದು ಹೇಳಿದ್ದಾರೆ.
Looks like @benstokes38 has some competition for incredible catches in the deep!

