ರನೌಟ್ ಮಾಡಿ ಕುಣಿದ ಬಾಂಗ್ಲಾ ಕೀಪರ್; ಅಂಪೈರ್ ತೀರ್ಪು ನೋಡಿ ದಂಗಾದ ಆಟಗಾರರು, ವಿಡಿಯೋ ವೈರಲ್!

ಕೀಪಿಂಗ್ ನಲ್ಲಿ ಮಿಸ್ಟರ್ ಕೂಲ್ ಟೀಂ ಇಂಡಿಯಾದ ಆಟಗಾರ ಎಂಎಸ್ ಧೋನಿಯನ್ನು ಮೀರಿಸುವವರಿಲ್ಲ. ಹೌದು ಆತುರಕ್ಕೆ ಬಿದ್ದು ಬಾಂಗ್ಲಾದ ವಿಕೆಟ್ ಕೀಪರ್ ಎಡವಟ್ಟು ಮಾಡಿಕೊಂಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಕೀಪಿಂಗ್ ನಲ್ಲಿ ಮಿಸ್ಟರ್ ಕೂಲ್ ಟೀಂ ಇಂಡಿಯಾದ ಆಟಗಾರ ಎಂಎಸ್ ಧೋನಿಯನ್ನು ಮೀರಿಸುವವರಿಲ್ಲ. ಹೌದು ಆತುರಕ್ಕೆ ಬಿದ್ದು ಬಾಂಗ್ಲಾದ ವಿಕೆಟ್ ಕೀಪರ್ ಎಡವಟ್ಟು ಮಾಡಿಕೊಂಡಿದ್ದಾರೆ. 
ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶ 2 ವಿಕೆಟ್ ಗಳಿಂದ ಸೋಲು ಕಂಡಿದೆ. ಈ ಪಂದ್ಯದಲ್ಲಿ ಸುಲಭವಾಗಿ ಔಟ್ ಮಾಡಬಹುದಿದ್ದ ಅವಕಾಶವನ್ನು ಆತುರಕ್ಕೆ ಬಿದ್ದ ಬಾಂಗ್ಲಾ ಕೀಪರ್ ರಹೀಂ ಚೆಂಡನ್ನು ಹಿಡುವ ಮೊದಲೆ ಕೈ ತಲುಗಿ ಬೇಲ್ಸ್ ಬಿದ್ದದ್ದರಿಂದ ರನೌಟ್ ಇದ್ದರು ಅಂಪೈರ್ ನಾಟೌಟ್ ತೀರ್ಪು ನೀಡಿದರು. 
ಶಕೀಬ್ ಬೌಲಿಂಗ್ ನಲ್ಲಿ ಟೇಲರ್ ಸಿಂಗಲ್ ರನ್ ತೆಗೆದುಕೊಳ್ಳಲು ಮುಂದಾದರು. ಈ ವೇಳೆ ಫೀಲ್ಡರ್ ಚೆಂಡನ್ನು ಹಿಡಿದು ನೇರವಾಗಿ ಕೀಪರ್ ಕೈಗೆ ಎಸೆದರು. ಚೆಂಡನ್ನು ಕೀಪರ್ ಕೈಸೇರಿದ ಸಮಯದಲ್ಲಿ ಬ್ಯಾಟ್ಸ್ ಮನ್ ಇನ್ನು ಕ್ರಿಸ್ ನ ಮಧ್ಯ ಭಾಗದಲ್ಲೇ ಇದ್ದಿದ್ದರಿಂದ ರನೌಟ್ ಸುಲಭವಾಗಿತ್ತು. ಆದರೆ ರಹೀಂ ಚೆಂಡನ್ನು ಹಿಡಿಯುವ ಭರದಲ್ಲಿ ಕೈಯಿಂದ ವಿಕೆಟ್ ಬೀಳಿಸಿದರು. ಹೀಗಾಗಿ ಮೂರನೇ ಅಂಪೈರ್ ನಟೌಟ್ ತೀರ್ಪು ನೀಡಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com