ವಿವ್ ರಿಚರ್ಡ್ ಐತಿಹಾಸಿಕ ದಾಖಲೆ ಅಳಿಸಿದ ವಿರಾಟ್ ಕೊಹ್ಲಿ

ಐಸಿಸಿ ಪುರುಷರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್ ಗಳಿಂದ ಜಯ ದಾಖಲಿಸಿದ ಟೀಮ್ ಇಂಡಿಯಾ, ಗೆಲುವಿನ ಶುಭಾರಂಭ...
ವಿರಾಟ್ ಕೊಹ್ಲಿ, ವಿವ್ ರಿಚರ್ಡ್
ವಿರಾಟ್ ಕೊಹ್ಲಿ, ವಿವ್ ರಿಚರ್ಡ್
Updated on
ಸೌತಾಂಪ್ಟನ್: ಐಸಿಸಿ ಪುರುಷರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್ ಗಳಿಂದ ಜಯ ದಾಖಲಿಸಿದ ಟೀಮ್ ಇಂಡಿಯಾ, ಗೆಲುವಿನ ಶುಭಾರಂಭ ಮಾಡಿದ್ದು, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ದಾಖಲೆಯ 50ನೇ ಗೆಲುವು ಸಾಧಿಸಿದೆ.
ವಿರಾಟ್ ಕೊಹ್ಲಿ ನಾಯಕನಾಗಿ 69 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, ಈ ಪೈಕಿ 50ರಲ್ಲಿ ಜಯ ಸಾಧಿಸಿದೆ. ಅತಿ ಕಡಿಮೆ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 50ಗೆಲುವು ದಾಖಲಿಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ವೆಸ್ಟ್ ಇಂಡೀಸ್ ನ ವಿವಿಯನ್ ರಿಚರ್ಡ್ ಅವರ ದಾಖಲೆಯನ್ನು ಅಳಿಸಿ, ಮೂರನೇ ಸ್ಥಾನದಲ್ಲಿದ್ದಾರೆ. ರಿಚರ್ಡ್ಸ್ ಅವರು 70 ಪಂದ್ಯಗಳಲ್ಲಿ 50 ಗೆಲುವು ದಾಖಲಿಸಿದ್ದರು.
ದಕ್ಷಿಣ ಆಫ್ರಿಕಾದ ಹ್ಯಾನ್ಸಿ ಕ್ರೊನಿಯೋ 68 ಹಾಗೂ ವೆಸ್ಟ್ ಇಂಡೀಸ್ ನ ಕ್ಲೈವ್ ಲಾಯಡ್ ಅವರು 63 ಪಂದ್ಯಗಳಲ್ಲಿ 50 ಪಂದ್ಯ ಗೆದ್ದು ಬೀಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com