ವಿಂಡೀಸ್ ವಿರುದ್ಧದ ಸರಣಿ ಮೂಲಕ ಭಾರತದ ಟೆಸ್ಟ್ ಚಾಂಪಿಯನ್ ಷಿಪ್ ಅಭಿಯಾನ ಆರಂಭ

ಐಸಿಸಿ ವಿಶ್ವಕಪ್ ಟೂರ್ನಿ ಬೆನ್ವಲ್ಲೇ ಟೀಂ ಇಂಡಿಯಾ ಸುದೀರ್ಘ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲ್ಲಿದ್ದು, ಪ್ರಮುಖವಾಗಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿರುವ ಕೊಹ್ಲಿ ಪಡೆ ಅಲ್ಲಿಂದಲೇ ತನ್ನ ಮೊಟ್ಟ ಮೊದಲ ಟೆಸ್ಟ್ ಚಾಂಪಿಯನ್ ಷಿಪ್ ಅಭಿಯಾನ ಆರಂಭಿಸಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ಐಸಿಸಿ ವಿಶ್ವಕಪ್ ಟೂರ್ನಿ ಬೆನ್ವಲ್ಲೇ ಟೀಂ ಇಂಡಿಯಾ ಸುದೀರ್ಘ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲ್ಲಿದ್ದು, ಪ್ರಮುಖವಾಗಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿರುವ ಕೊಹ್ಲಿ ಪಡೆ ಅಲ್ಲಿಂದಲೇ ತನ್ನ ಮೊಟ್ಟ ಮೊದಲ ಟೆಸ್ಟ್ ಚಾಂಪಿಯನ್ ಷಿಪ್ ಅಭಿಯಾನ ಆರಂಭಿಸಲಿದೆ.
ಐಸಿಸಿ ವಿಶ್ವಕಪ್‌ ಟೂರ್ನಿ ಮುಗಿದ ಬಳಿಕ ವಿರಾಟ್‌ ನಾಯಕತ್ವದ ಭಾರತ ತಂಡ ಕೆರಿಬಿಯನ್ ಪ್ರವಾಸ ಹಮ್ಮಿಕೊಳ್ಳಲಿದ್ದು, ಟಿ-20, ಏಕದಿನ ಜತೆಗೆ ಆಗಸ್ಟ್‌ 22 ರಿಂದ ವೆಸ್ಟ್‌ ಇಂಡೀಸ್‌ ವಿರುದ್ಧ ಎರಡು ಪಂದ್ಯಗಳ ಐಸಿಸಿ ಟೆಸ್ಟ್‌ ಚಾಂಪಿಯನ್ ಶಿಪ್ ನ ಆಡಲಿದೆ. ಐದು ವಾರಗಳ ವಿಂಡೀಸ್‌ ಪ್ರವಾಸದಲ್ಲಿ ಮೂರು ಟಿ-20, ಮೂರು ಏಕದಿನ ಪಂದ್ಯಗಳು ಹಾಗೂ ಎರಡು ಟೆಸ್ಟ್‌ ಪಂದ್ಯಗಳಲ್ಲಿ ವೆಸ್ಟ್‌ ಇಂಡೀಸ್‌ ಹಾಗೂ ಭಾರತ ತಂಡಗಳು ಎದುರಾಗಲಿವೆ. ಆಗಸ್ಟ್‌ 3 ಮತ್ತು 4 ರಂದು ಮೊದಲ ಎರಡು ಟಿ-20 ಅಮೆರಿಕದ ಫ್ಲೋರಿಡಾದ ಬ್ರೋವಾರ್ಡ್‌ ಕಂಟ್ರಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಮೂರನೇ ಟಿ-20 ಪಂದ್ಯ ಆಗಸ್ಟ್ 6 ರಂದು ಗಯಾನದ ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಪ್ರವಾಸದ ನಡುವೆಯೇ ಭಾರತ ತಂಡ ಐಸಿಸಿ ಮೊಟ್ಟ ಮೊದಲ ಟೆಸ್ಟ್ ಚಾಂಪಿಯನ್ ಷಿಪ್ ಅಭಿಯಾನವನ್ನೂ ಕೂಡ ಅರಂಭಿಸಲಿದ್ದು, 2019ರಿಂದ 2021ರವರೆಗೂ ನಡೆಯಲಿರುವ ಸುದೀರ್ಘ ಅವದಿಯವರೆಗೂ ಟೂರ್ನಿ ನಡೆಯಲಿದೆ. ಆಗಸ್ಚ್ 22 ರಿಂದ 26ರವರೆಗೆ ಗುಯಾನಾ ಆ್ಯಂಟಿಗುವಾ ಮತ್ತು ಆಗಸ್ಟ್ 30 ರಿಂದ ಸೆಪ್ಟೆಂಬರ್ 3 ವರೆಗೆ ಜಮೈಕಾ 2 ಟೆಸ್ಟ್ ಪಂದ್ಯಗಳನ್ನಾಡಲಿದೆ. ಕ್ರಿಕೆಟ್ ಇತಿಹಾಸದಲ್ಲೇ ಐಸಿಸಿ ಆಯೋಜಿಸುತ್ತಿರುವ ಸುದೀರ್ಘ ಕ್ರಿಕೆಟ್ ಸರಣಿ ಇದಾಗಿದ್ದು, ಮುಂದಿನ 2 ವರ್ಷಗಳ ಕಾಲ ನಡೆಯಲಿದೆ. 
ಟೆಸ್ಟ್ ಮಾನ್ಯತೆ ಪಡೆದಿರುವ 12 ತಂಡಗಳ ಪೈಕಿ 9 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಪ್ರತೀ ತಂಡ ಕೂಡ ಉಳಿದ ತಂಡಗಳ ವಿರುದ್ಧ ತಲಾ 2 ಪಂದ್ಯಗಳನ್ನಾಡಲಿವೆ. 
ವೇಳಾ ಪಟ್ಟಿ ಇಂತಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com