ಇನ್ನು ಆಫ್ಘಾನಿಸ್ತಾನ ತಂಡದಲ್ಲಿ 2 ಪ್ರಮುಖ ಬದಲಾವಣೆ ಮಾಡಲಾಗಿದ್ದು, ದಾವ್ಲತ್ ಜಡ್ರಾನ್ ಮತ್ತು ನೂರ್ ಅಲಿ ಜಡರನ್ ಅವರ ಬದಲಿಗೆ ಹಜರತುಲ್ಲಾ ಮತ್ತು ಅಫ್ತಾಬ್ ಕಣಕ್ಳಿಳಿದಿದ್ದಾರೆ. ಹಾಲಿ ಟೂರ್ನಿಯಲ್ಲಿ ಒಟ್ಟು 4 ಪಂದ್ಯಗಳನ್ನಾಡಿರುವ ಭಾರತ ತಂಡ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಐದು ಪಂದ್ಯಗಳನ್ನಾಡಿರುವ ಆಫ್ಘಾನಿಸ್ತಾನ ತಾನಾಡಿರುವ ಐದೂ ಪಂದ್ಯಗಳನ್ನು ಸೋತಿದ್ದು, ಅಂಕ ಪಟ್ಟಿಯಲ್ಲಿ ಇನ್ನು ಖಾತೆಯನ್ನೇ ತೆರೆದಿಲ್ಲ. ಆದರೆ ಅಂಕ ಪಟ್ಟಿಯಲ್ಲಿ 7 ಅಂಕಗಳನ್ನು ಹೊಂದಿರುವ ಭಾರತ 4ನೇ ಸ್ಥಾನದಲ್ಲಿದೆ.