ಅಂಪೈರ್ ನಾಟೌಟ್ ತೀರ್ಪು; ಕೊನೆಯ ಸೆಕೆಂಡ್‍ನಲ್ಲಿ ಡಿಆರ್‌ಎಸ್‌ ತೆಗೆದುಕೊಂಡ ಲಂಕಾ, ಗೆಲ್ತಾ-ಸೋಲ್ತಾ, ವಿಡಿಯೋ ವೈರಲ್!

ಕೆಲವೊಂದು ಪಂದ್ಯಗಳಲ್ಲಿ ನಾವು ಕೊನೆಯ ಸೆಕೆಂಡ್ ನಲ್ಲಿ ತೆಗೆದುಕೊಳ್ಳುವ ಕೆಲವೊಂದು ಮಹತ್ವದ ನಿರ್ಧಾರಗಳೇ ಗೆಲುವಿಗೆ ಕಾರಣವಾಗುತ್ತದೆ. ಅಂತೆ ಇಂಗ್ಲೆಂಡ್ ವಿರುದ್ಧ ಸೋಲಿನ...
ಜೋ ರೂಟ್
ಜೋ ರೂಟ್
ಕೆಲವೊಂದು ಪಂದ್ಯಗಳಲ್ಲಿ ನಾವು ಕೊನೆಯ ಸೆಕೆಂಡ್ ನಲ್ಲಿ ತೆಗೆದುಕೊಳ್ಳುವ ಕೆಲವೊಂದು ಮಹತ್ವದ ನಿರ್ಧಾರಗಳೇ ಗೆಲುವಿಗೆ ಕಾರಣವಾಗುತ್ತದೆ. ಅಂತೆ ಇಂಗ್ಲೆಂಡ್ ವಿರುದ್ಧ ಸೋಲಿನ ಸುಳಿಯಲ್ಲಿದ್ದ ಶ್ರೀಲಂಕಾ ಇಂಗ್ಲೆಂಡ್ ನ ಬ್ಯಾಟ್ಸ್ ಮನ್ ಜೋ ರೂಟ್ ರ ಅಂಪೈರ್ ನಾಟಾಟ್ ತೀರ್ಪಿಗೆ ವಿರುದ್ಧವಾಗಿ ಕೊನೆಯ ಸೆಕೆಂಡ್‍ನಲ್ಲಿ ಡಿಆರ್‌ಎಸ್‌ ತೆಗೆದುಕೊಂಡಿತ್ತು.
ಲಂಕಾ ನೀಡಿದ 233 ರನ್ ಗಳ ಸುಲಭ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೆ ಜೋ ರೂಟ್ ತಾಳ್ಮೆಯ ಆಟವಾಡಿ ಉತ್ತಮ ಭುನಾದಿಯನ್ನು ಹಾಕಿಕೊಟ್ಟಿದ್ದರು. ರೂಟ್ 57 ರನ್ ಗಳಿಸಿದ್ದಾಗ ಮಲಿಂಗಾ ಎಸೆತದಲ್ಲಿ ಲೆಗ್ ನಲ್ಲಿ ಸ್ವೀಪ್ ಮಾಡಿದ್ದರು. ಈ ವೇಳೆ ಚೆಂಡು ಬ್ಯಾಟ್ ಗೆ ತಗುಲಿ ಕೀಪರ್ ಕೈ ಸೇರಿತ್ತು. ಕೀಪರ್ ಹಾಗೂ ಆಟಗಾರರು ಬಲವಾದ ಅಪೀಲ್ ಮಾಡಿದರು. ಅಂಪೈರ್ ನಾಟೌಟ್ ತೀರ್ಪು ನೀಡಿದ್ದರು. 
ಈ ವೇಳೆ ಡಿಆರ್‌ಎಸ್‌ ತೆಗೆದುಕೊಳ್ಳಲು 10 ಸೆಕೆಂಡ್ ಮಾತ್ರ ಕಾಲಾವಕಾಶ ನೀಡಿದ್ದರು. ಇನ್ನು ಲಂಕಾ ಆಟಗಾರರು ಡಿಆರ್‌ಎಸ್‌ ತೆಗೆದುಕೊಳ್ಳಬೇಕಾ? ಬೇಡವಾ? ಎಂದು ಚಿಂತಿಸುತ್ತಿದ್ದರು. ಈ ಮಧ್ಯೆ ಕೀಪರ್ ಬ್ಯಾಟ್ ಟಚ್ ಆಗಿದೆ ಎಂದು ಧೃಡವಾಗಿ ಹೇಳಿದ್ದರಿಂದ ಕೊನೆಯ ಸೆಕೆಂಡ್ ನಲ್ಲಿ ನಾಯಕ ಡಿಆರ್‌ಎಸ್‌ ತೆಗೆದುಕೊಂಡರು. 
ಡಿಆರ್‌ಎಸ್‌ ನಲ್ಲಿ ಚೆಂಡು ಬ್ಯಾಟ್ ಗೆ ತಗುಲಿದ್ದು ಸ್ಪಷ್ಟವಾಗಿ ಕಂಡುಬಂದಿದ್ದು ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಇನ್ನು ಸೋಲಿನ ಸುಳಿಯಲ್ಲಿದ್ದ ಲಂಕಾಗೆ ಜೋ ರೂಟ್ ವಿಕೆಟ್ ಮುಖ್ಯವಾಯಿತು. ಅಂತೂ ಲಂಕಾ 20 ರನ್ ಗಳಿಂದ ಇಂಗ್ಲೆಂಡ್ ವಿರುದ್ಧ ರೋಚಕ ಗೆಲುವು ಸಾಧಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com