ಭಾರತದಲ್ಲಿ ಕ್ರಿಕೆಟ್ ಅನ್ನು ಧರ್ಮವನ್ನಾಗಿಸಿದ ಸಂಭ್ರಮದ ದಿನ!

ಜಾಗತಿಕ ಕ್ರಿಕೆಟ್ ನಲ್ಲಿ ಇಂದು ಭಾರತ ಸಾಮ್ರಾಟನಾಗಿ ಮೆರೆಯುತ್ತಿದ್ದು, ಭಾರತದ ಇಂದಿನ ಪಾರಮ್ಯಕ್ಕೆ ಕಾರಣವಾಗಿದ್ದು, 1983ರ ಇದೇ ದಿನ ನಡೆದ ಒಂದೇ ಒಂದು ಪಂದ್ಯ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಜಾಗತಿಕ ಕ್ರಿಕೆಟ್ ನಲ್ಲಿ ಇಂದು ಭಾರತ ಸಾಮ್ರಾಟನಾಗಿ ಮೆರೆಯುತ್ತಿದ್ದು, ಭಾರತದ ಇಂದಿನ ಪಾರಮ್ಯಕ್ಕೆ ಕಾರಣವಾಗಿದ್ದು, 1983ರ ಇದೇ ದಿನ ನಡೆದ ಒಂದೇ ಒಂದು ಪಂದ್ಯ...
ಹೌದು..ಭಾರತದಲ್ಲಿ ಕ್ರಿಕೆಟ್ ಅನ್ನು ಧರ್ಮವನ್ನಾಗಿಸಿದ ಸಂಭ್ರಮದ ದಿನಇದಾಗಿದ್ದು, 1983ರ ಜೂನ್ 25ರಂದು 'ಕಪಿಲ್ ಡೇವಿಲ್ಸ್' ಪಡೆ ಭಾರತಕ್ಕೆ ಮೊಟ್ಟ ಮೊದಲ ವಿಶ್ವಕಪ್ ಗೆದ್ದುಕೊಟ್ಟಿತ್ತು. ಆ ಅಪರೂಪದ ಗಳಿಗೆಗೆ ಇಂದಿಗೆ 36 ವರ್ಷಗಳು ತುಂಬಿದ್ದು, ಇಂದಿಗೂ ಕಪಿಲ್ ದೇವ್ ನಾಯಕತ್ವದ ಟೀಂ ಇಂಡಿಯಾ ಸಾಹಸ ಕ್ರಿಕೆಟ್ ಪ್ರೇಮಿಗಳ ಮನಸ್ಸಿನಲ್ಲಿ ಹಚ್ಚಹಸಿರಾಗಿದೆ. 
ಕಪಿಲ್‌ ದೇವ್‌ ನಾಯಕತ್ವದಲ್ಲಿ ಭಾರತ ಕ್ರಿಕೆಟ್‌ ತಂಡ ಬಲಿಷ್ಠ ವೆಸ್ಟ್‌ ಇಂಡೀಸ್‌ ತಂಡವನ್ನು 43 ರನ್‌ಗಳಿಂದ ಮಣಿಸಿ 1983ರಲ್ಲಿ ಚೊಚ್ಚಲ ವಿಶ್ವಕಪ್‌ ಗೆದ್ದು ವಿಶ್ವ ಕ್ರಿಕೆಟ್‌ನಲ್ಲಿ ನೂತನ ಮೈಲಿಗಲ್ಲು ಸೃಷ್ಠಿಸಿದ್ದ ಸುವರ್ಣ ಗಳಿಗೆಗೆ ಇಂದಿಗೆ 36 ವರ್ಷಗಳು ತುಂಬಿವೆ. 1983ರ ಜೂನ್‌ 25 ರಂದು ಲಂಡನ್‌ನ ಲಾರ್ಡ್ಸ್ ಅಂಗಳದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡಿದ್ದ ಭಾರತ 54.4 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್‌ ಕಳೆದುಕೊಂಡು 183 ರನ್‌ ಗಳಿಸಿತ್ತು. ಬಳಿಕ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್‌ 52 ಓವರ್‌ಗಳಿಗೆ 140 ರನ್‌ಗಳಿಗೆ ಆಲೌಟ್‌ ಆಗಿತ್ತು. ಈ ಪಂದ್ಯದಲ್ಲಿ ಮದನ್ ಲಾಲ್‌ ಹಾಗೂ ಎಂ. ಅಮರ್‌ನಾಥ್‌ ತಲಾ ಮೂರು ವಿಕೆಟ್‌ ಕಬಳಿಸಿದ್ದರು.
ಇನ್ನು ಅದೇ ಟೂರ್ನಿಯಲ್ಲಿ ಕಪಿಲ್ ದೇವ್‌ನ ಅವಿಸ್ಮರಣೀಯ ಇನ್ನಿಂಗ್ಸ್‌ಗೆ ಜೂನ್‌ 18ಕ್ಕೆ 36 ವರ್ಷ! 17 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡು ಭಾರತ ತಂಡ ಒದ್ದಾಡುತ್ತಿದ್ದ ಸಮಯದಲ್ಲಿ ರಕ್ಷಕನಾಗಿ ಬಂದಿದ್ದರು ನಾಯಕತ ಕಪಿಲ್ ದೇವ್. ಮೂರನೇ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಪ್ರಶಸ್ತಿ ಜಯಿಸಬಹುದು ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಆದರೆ, ಕಪಿಲ್‌ ಬಳಗ ಟ್ರೋಫಿ ಜಯಿಸಿ ಕ್ರಿಕೆಟ್‌ ಜಗತ್ತನ್ನು ನಿಬ್ಬೆರಗಾಗಿಸಿತ್ತು. ಈ ಜಯ ಭಾರತದಲ್ಲಿ ಕ್ರಿಕೆಟ್‌ ಕ್ರೀಡೆಯ ದಿಕ್ಕು ದೆಸೆಯನ್ನೇ ಬದಲಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com