ಸೆಮಿಫೈನಲ್ ಪ್ರವೇಶಿಸಲು ಪಾಕಿಸ್ತಾನಕ್ಕೆ ಭಾರತ ತಂಡದ ನೆರವು ಅತ್ಯಗತ್ಯ: ಶೋಯಬ್‌ ಅಖ್ತರ್‌

ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಸೆಮಿಫೈನಲ್ ಪ್ರವೇಶ ಮಾಡಲು ಭಾರತ ತಂಡದ ನೆರವು ಅತ್ಯಗತ್ಯ ಎಂದು ಮಾಜಿ ವೇಗಿ ಶೊಯಬ್ ಅಖ್ತರ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಸೆಮಿಫೈನಲ್ ಪ್ರವೇಶ ಮಾಡಲು ಭಾರತ ತಂಡದ ನೆರವು ಅತ್ಯಗತ್ಯ ಎಂದು ಮಾಜಿ ವೇಗಿ ಶೊಯಬ್ ಅಖ್ತರ್ ಹೇಳಿದ್ದಾರೆ.
ಈ ಕುರಿತಂತೆ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಅಖ್ತರ್, 'ಭಾರತ ತಂಡದವರೆ, ಪಾಕಿಸ್ತಾನ ತಂಡವು ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಲು ದಯವಿಟ್ಟು ಸಹಾಯ ಮಾಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ.
'ಭಾರತ ತಂಡದವರು ಭಾನುವಾರ ಇಂಗ್ಲೆಂಡ್‌ ಎದುರು ಆಡಲಿದ್ದಾರೆ. ಈ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಬಳಗ ಗೆದ್ದರೆ ಇಂಗ್ಲೆಂಡ್‌ ಟೂರ್ನಿಯಿಂದ ಹೊರಬೀಳಲಿದೆ. ಸರ್ಫರಾಜ್‌ ಅಹ್ಮದ್‌ ನೇತೃತ್ವದ ಪಾಕಿಸ್ತಾನವು ತನ್ನ ಪಾಲಿನ ಕೊನೆಯ ಎರಡು ಪಂದ್ಯಗಳಲ್ಲಿ ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳನ್ನು ಮಣಿಸಿದರೆ ತಂಡದ ಒಟ್ಟು ಪಾಯಿಂಟ್ಸ್‌ 11ಕ್ಕೇರಲಿದೆ. ಆಗ ಸೆಮಿಫೈನಲ್‌ ಹಾದಿ ಸುಗಮವಾಗಲಿದೆ ಎಂದು ಅಖ್ತರ್ ಹೇಳಿದ್ದಾರೆ.
ಸೆಮೀಸ್ ನಲ್ಲಿ ಪಾಕ್ ವಿರುದ್ದ ಭಾರತಕ್ಕೆ ಸೋಲು
ಅಂತೆಯೇ 'ಪಾಕಿಸ್ತಾನ ತಂಡವು ಹಿಂದಿನ ಎರಡು ಪಂದ್ಯಗಳಲ್ಲಿ ಗೆದ್ದು ಭರವಸೆ ಮೂಡಿಸಿದೆ. ಈಗ ಚೆಂಡು ಭಾರತದ ಅಂಗಳದಲ್ಲಿದೆ. ಕೊಹ್ಲಿ ಪಡೆ ಮೇಲೆ ಪಾಕಿಸ್ತಾನದವರ ಚಿತ್ತ ನೆಟ್ಟಿದೆ. ಭಾರತವು ಇಂಗ್ಲೆಂಡ್‌ ಎದುರು ಗೆಲ್ಲಲಿ ಎಂಬುದು ನಮ್ಮ ಹಾರೈಕೆ. ನಮ್ಮ ತಂಡವು ಮುಂದಿನ ಎರಡು ಪಂದ್ಯಗಳಲ್ಲಿ ಗೆದ್ದು ಸೆಮಿಫೈನಲ್‌ ಪ್ರವೇಶಿಸಿದರೆ, ನಾಲ್ಕರ ಘಟ್ಟದಲ್ಲಿ ಖಂಡಿತವಾಗಿಯೂ ನಿಮ್ಮನ್ನು (ಭಾರತ) ಸೋಲಿಸುತ್ತಾರೆ’ ಎಂದು ಅಕ್ತರ್ ಭವಿಷ್ಯ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com