ಇದು ದೇಶಾದ್ಯಂತ ಬಾರಿ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೇ, ಅಭಿನಂದನ್ ಅವರನ್ನು ಪಾಕಿಸ್ತಾನದಿಂದ ಭಾರತಕ್ಕೆ ಬಹುಬೇಗ ಕರೆಸಿಕೊಳ್ಳಬೇಕು ಎಂಬ ಅಭಿಯಾನ ದೇಶಾದ್ಯಂತ ನಡೆದಿತ್ತು. ಅದರಂತೆ ಭಾರತದ ರಾಜತಾಂತ್ರಿಕ ನಿಯೋಗ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಿತ್ತು. ಪಾಕಿಸ್ತಾನದ ಅಧ್ಯಕ್ಷ ಇಮ್ರಾನ್ ಖಾನ್ ಸಂಸತ್‌ನಲ್ಲಿ ಅಭಿನಂದನ್ ಅವರನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು.