ಧೋನಿ ಹವಾ: ಐಪಿಎಲ್ ಆಟಗಾರರ ಅಭ್ಯಾಸಕ್ಕೇ ಸ್ಟೇಡಿಯಂ ಹೌಸ್ ಫುಲ್! ವಿಡಿಯೋ ನೋಡಿ..

ಐಪಿಎಲ್ ಟೂರ್ನಿಗಾಗಿ ಕ್ರಿಕೆಟ್ ಪ್ರೇಮಿಗಳು ಎಷ್ಟರ ಮಟ್ಟಿಗೆ ಕಾತುರದಿಂದ ಕಾಯುತ್ತಿದ್ದಾರೆ ಎನ್ನುವುದಕ್ಕೆ ಇದು ಸ್ಪಷ್ಟ ಉದಾಹರಣೆಯಂತಿದ್ದು, ಕೇವಲ ಆಟಗಾರರ ಅಭ್ಯಾಸಕ್ಕೇ ಚೆನ್ನೈ ಸ್ಟೇಡಿಯಂ ಭರ್ತಿಯಾಗಿದ್ದ ಅಪೂರ್ವ ಘಟನೆ ನಡೆದಿದೆ.
ಅಭ್ಯಾಸ ಪಂದ್ಯದಲ್ಲಿ ಧೋನಿಗೆ ಸಿಕ್ಕ ಅಭೂತ ಪೂರ್ವ ಸ್ವಾಗತ
ಅಭ್ಯಾಸ ಪಂದ್ಯದಲ್ಲಿ ಧೋನಿಗೆ ಸಿಕ್ಕ ಅಭೂತ ಪೂರ್ವ ಸ್ವಾಗತ
Updated on
ಚೆನ್ನೈ: ಐಪಿಎಲ್ ಟೂರ್ನಿಗಾಗಿ ಕ್ರಿಕೆಟ್ ಪ್ರೇಮಿಗಳು ಎಷ್ಟರ ಮಟ್ಟಿಗೆ ಕಾತುರದಿಂದ ಕಾಯುತ್ತಿದ್ದಾರೆ ಎನ್ನುವುದಕ್ಕೆ ಇದು ಸ್ಪಷ್ಟ ಉದಾಹರಣೆಯಂತಿದ್ದು, ಕೇವಲ ಆಟಗಾರರ ಅಭ್ಯಾಸಕ್ಕೇ ಚೆನ್ನೈ ಸ್ಟೇಡಿಯಂ ಭರ್ತಿಯಾಗಿದ್ದ ಅಪೂರ್ವ ಘಟನೆ ನಡೆದಿದೆ.
ಹೌದು.. ಬಹು ನಿರೀಕ್ಷಿತ ಐಪಿಎಲ್ 2019ರ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದ್ದು, ಮಾರ್ಚ್​​ 23 ರಂದು ಐಪಿಎಲ್ 12ನೇ ಆವೃತ್ತಿಗೆ ಚಾಲನೆ ಸಿಗಲಿದ್ದು ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಗಳ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಹೊಡಿಬಡಿ ಆಟಕ್ಕೆ ಕ್ರೀಡಾಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಹೀಗಾಗಿಯೆ ಸಿಎಸ್​​ಕೆ ತಂಡ ಭರ್ಜರಿ ಅಭ್ಯಾಸದಲ್ಲಿ ತೊಡಗಿದೆ. ಭಾನುವಾರದಂದು ಚೆನ್ನೈನ ಎಂ. ಎ. ಚಿದಂಬರಂ ಕ್ರೀಡಾಂಗಣದಲ್ಲಿ ತಂಡದ ನಾಯಕ ಎಂಎಸ್ ಧೋನಿ ಸೇರಿದಂತೆ ಪ್ರಮುಖ ಆಟಗಾರರು ಅಭ್ಯಾಸಕ್ಕೆ ಕಣಕ್ಕಿಳಿದಿದ್ದರು.  ವಿಶೇಷ ಎಂದರೆ ಕೇವಲ ಅಭ್ಯಾಸ ಮಾಡುವುದನ್ನು ವೀಕ್ಷಿಸಲು ಸ್ಟೇಡಿಯಂ ಪೂರ್ತಿ ಅಭಿಮಾನಿಗಳು ತುಂಬಿದ್ದರು.
ಅಭ್ಯಾಸ ಪಂದ್ಯ ವೀಕ್ಷಣೆಗೆ 12 ಸಾವಿರ ಮಂದಿ ವೀಕ್ಷಕರು!
ಬಹುಶಃ ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲು ಎಂಬಂತೆ ಅಭ್ಯಾಸ ಪಂದ್ಯವೊಂದನ್ನು ವೀಕ್ಷಿಸಲು ಈ ಪರಿಯ ಕ್ರೀಡಾಭಿಮಾನಿಗಳು ಆಗಮಿಸಿರುವುದು ಇದೇ ಮೊದಲು ಎನ್ನಬಹುದು. ಭಾನುವಾರ ಬರೋಬ್ಬರಿ 12 ಸಾವಿರ ಮಂದಿ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಅಭ್ಯಾಸ ಮಾಡುವುದನ್ನು ವೀಕ್ಷಿಸಲು ಬಂದಿದ್ದರು. ಸ್ಟೇಡಿಯಂನಲ್ಲಿ ಅಭಿಮಾನಿಗಳ ಕೂಗು ಐಪಿಎಲ್ ಪಂದ್ಯ ನಡೆಯುವ ವೇಳೆ ಹೇಗಿರುತ್ತೊ ಅದೇ ರೀತಿಯಲ್ಲಿತ್ತು. ಅದರಲ್ಲೂ ಸಿಎಸ್ ಕೆ ನಾಯಕ 'ತಲಾ' ಧೋನಿ ಅಭ್ಯಾಸ ಮಾಡಲು ಮೈದಾನಕ್ಕೆ ಬಂದವೇಳೆ ಅಭಿಮಾನಿಗಳ ಕರತಾಡನ ಮುಗಿಲು ಮುಟ್ಟಿತ್ತು. ಗ್ಯಾಲರಿಯಲ್ಲಿ ಕಿಕ್ಕಿರಿದು ತುಂಬಿದ್ದ ಕ್ರೀಡಾಭಿಮಾನಿಗಳು ತಲಾ.. ತಲಾ.. ಧೋನಿ.. ಧೋನಿ ಎಂದು ಕೂಗುತ್ತಿದ್ದರು. 
ಮತ್ತೊಂದೆಡೆ ಧೋನಿ ಬೆನ್ನಲ್ಲೋ ಸಿಎಸ್ ಕೆಯ ಮತ್ತೋರ್ವ ಆಟಗಾರ ಸುರೇಶ್ ರೈನಾ ಕೂಡ ಬ್ಯಾಟ್ ಹಿಡಿದು ಮೈದಾನಕ್ಕೆ ಬಂದರು. ಆಗಲೂ ಕೂಡ ಚಿನ್ನ ತಲಾ ಎಂದು ಅಭಿಮಾನಿಗಳು ಕೂಗಿ ರೈನಾ.. ರೈನಾ.. ಎಂದು ಕೂಗುತ್ತಿದ್ದರು. ನಿನ್ನೆಯ ಸಂಜೆ ಅಕ್ಷರಶಃ ಕ್ರೀಡಾಂಗಣ ಅಭಿಮಾನಿಗಳಿಂದ ತುಂಬಿ ಹೋಗಿತ್ತು. ಈ ವಿಡಿಯೋವನ್ನು ಸಿಎಸ್ ಕೆ ತಂಡ ತನ್ನ ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com