ಸ್ಟಾರ್ಕ್ ಮಾರಣಾಂತಿಕ ಬೌಲಿಂಗ್‌ಗೆ ಒಡೆದ ರೂಟ್ 'ಅಬ್ಡೊಮಿನಲ್ ಗಾರ್ಡ್', ಕುಸಿದು ಬಿದ್ದ ಜೋ, ವಿಡಿಯೋ!

ಶಸ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಮಾರಣಾಂತಿಕ ಬೌಲಿಂಗ್‌ಗೆ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಅವರ ಅಬ್ಡೊಮಿನಲ್ ಗಾರ್ಡ್ ಒಡೆದು ಹೋಗಿದೆ.
ಜೋ ರೂಟ್
ಜೋ ರೂಟ್
Updated on

ಮ್ಯಾಂಚೆಸ್ಟರ್: ಆ್ಯಶಸ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಮಾರಣಾಂತಿಕ ಬೌಲಿಂಗ್‌ಗೆ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಅವರ ಅಬ್ಡೊಮಿನಲ್ ಗಾರ್ಡ್ ಒಡೆದು ಹೋಗಿದೆ.

ಮಿಚೆಲ್ ಸ್ಟಾರ್ಕ್ ಗಂಟೆಗೆ 140 ಕಿ.ಮೀ ವೇಗದಲ್ಲಿ ಚೆಂಡನ್ನು ಎಸೆದಿದ್ದರು. ಈ ವೇಳೆ ರಕ್ಷಣಾತ್ಮಕ ಬ್ಯಾಟಿಂಗ್ ಮುಂದಾದಾಗ ಚೆಂಡು ನೇರವಾಗಿ ಅಬ್ಡೊಮಿನಲ್ ಗಾರ್ಡ್ ಗೆ ಬಿದ್ದಿದೆ. ಕೂಡಲೇ ನೋವಿನಿಂದ ರೂಟ್ ಕುಸಿದು ಬಿದ್ದರು. 

ನಂತರ ಅಬ್ಡೊಮಿನಲ್ ಗಾರ್ಡ್ ತೆಗೆದು ನೋಡಿದಾಗ ಎರಡು ಚೂರಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಸರಣಿಯ ನಾಲ್ಕನೇ ಪಂದ್ಯದಲ್ಲಿ ಆಸ್ಟ್ರೆಲಿಯಾ ಗೆಲುವು ಸಾಧಿಸಿದೆ. ಈ ಮೂಲಕ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದರೆ ಸರಣಿ ಕೈವಶ ಮಾಡಿಕೊಳ್ಳಲಿದೆ. ಇನ್ನು ಇಂಗ್ಲೆಂಡ್ ಗೆದ್ದರೆ ಸರಣಿ ಸಮಬಲವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com