ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ಮೈದಾನದಲ್ಲೇ ಆಕ್ರೋಶ, ಕೊಹ್ಲಿಯನ್ನು ಕೆಣಕಿದ್ದು ಯಾರು? ಈ ವಿಡಿಯೋ ನೋಡಿ!
ಮೊಹಾಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ಭಾರತ ಗೆಲುವಿನ ನಗೆ ಬೀರಿದೆ. ಆದರೆ ಪಂದ್ಯದ ನಡುವೆ ವಿರಾಟ್ ಕೊಹ್ಲಿ ತಾಳ್ಮೆ ಕಳೆದುಕೊಂಡು ವೀರಾವೇಶ ತೋರಿಸಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.
ಮೊಹಾಲಿಯಲ್ಲಿ ಟಿ20 ಪಂದ್ಯ ನಡೆದಿದ್ದು ಮೊದಲ ಬ್ಯಾಟಿಂಗ್ ಮಾಡಿದ ಆಫ್ರಿಕಾ ತಂಡ ನಿಗದಿತ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 149 ರನ್ ಪೇರಿಸಿತು. 150 ರನ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 19 ಓವರ್ ಮುಕ್ತಾಯಕ್ಕೆ 3 ವಿಕೆಟ್ ಕಳೆದುಕೊಂಡು 151 ರನ್ ಪೇರಿಸಿ 7 ವಿಕೆಟ್ ಗಳಿಂದ ಗೆಲುವು ಸಾಧಿಸಿತು.
ಇನ್ನು ಆಫ್ರಿಕಾ ಬ್ಯಾಟಿಂಗ್ ವೇಳೆ ಹಾರ್ದಿಕ್ ಪಾಂಡ್ಯ 10ನೇ ಓವರ್ ಬೌಲಿಂಗ್ ಮಾಡಿದ್ದರು. ಈ ವೇಳೆ ತೆಂಬಾ ಬವುಮಾ ಮತ್ತು ಡಿ ಕಾಕ್ ಹೆಚ್ಚುವರಿ ರನ್ ಪಡೆದರು. ಇದನ್ನು ನೋಡಿದ ಕೊಹ್ಲಿ ಮೈದಾನದಲ್ಲೇ ಕೋಪಗೊಂಡರು.
ಫೀಲ್ಡಿಂಗ್ ಮಾಡುತ್ತಿದ್ದ ಶ್ರೇಯಸ್ ಅಯ್ಯರ್ ಚೆಂಡನ್ನು ಸರಿಯಾಗಿ ಥ್ರೋ ಮಾಡದ ಪರಿಣಾಮ ಚೆಂಡನ್ನು ಹಾರ್ದಿಕ್ ಪಾಂಡ್ಯ ಹಿಡಿಯಲು ಸಾಧ್ಯವಾಗಲಿಲ್ಲ. ಇದರಿಂದ ಆಫ್ರಿಕಾ ಬ್ಯಾಟ್ಸ್ ಮನ್ ಗಳು ಹೆಚ್ಚುವರಿಯಾಗಿ 1 ರನ್ ಪಡೆದುಕೊಂಡರು. ನಂತರ ಕೈಗೆ ಬಂದ ಚೆಂಡನ್ನು ವಿಕೆಟ್ ಗೆ ಬಡಿದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
Angry Virat #IndvsSA #INDvSA #ViratKohli pic.twitter.com/jV5EUqQEJ1
— Harshal Gadakh
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ