ಐಪಿಎಲ್ 2019: ರಾಜಸ್ಥಾನ ರಾಯಲ್ಸ್ ವಿರುದ್ದ ಚೆನ್ನೈ ಸೂಪರ್ ಕಿಂಗ್ಸ್ ಗೆ 4 ವಿಕೆಟ್ ಗಳ ಭರ್ಜರಿ ಜಯ

ಐಪಿಎಲ್ 2019 ಇಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ 4 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಧೋನಿ ಮತ್ತು ಸಿಎಸ್ ಕೆ
ಧೋನಿ ಮತ್ತು ಸಿಎಸ್ ಕೆ
ಜೈಪುರ: ಐಪಿಎಲ್ 2019 ಇಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ 4 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಜೈಪುರದ ಸವಾಯ್​ ಮಾನ್​ ಸಿಂಗ್ ಸ್ಟೇಡಿಯಂನಲ್ಲಿ ಇಂದು ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ತಾನ ರಾಯಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 151 ರನ್ ಗಳ ಸವಾಲಿನ ಗುರಿ ನೀಡಿತು. ಮಧ್ಯಮ ಕ್ರಮಾಂಕದ ಆಟಗಾರ ಬೆನ್ ಸ್ಟೋಕ್ಸ್ ಗಳಿಸಿದ 28 ರನ್ ಗಳೇ ಆ ತಂಡದ ಬ್ಯಾಟ್ಸಮನ್ ಒಬ್ಬನ ವೈಯುಕ್ತಿಕ ಗರಿಷ್ಟ ರನ್ ಆಗಿತ್ತು. ಇನ್ನು ಚೆನ್ನೈ ಪರ ದೀಪಕ್ ಚಹಾರ್, ಶಾರ್ದೂಲ್ ಠಾಕೂರ್ ಮತ್ತು ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಕಬಳಿಸಿದರು. ಅಂತೆಯೇ ಸ್ಯಾಂಥನರ್ ಒಂದು ವಿಕೆಟ್ ಪಡೆದರು.
ಇನ್ನು ರಾಜಸ್ತಾನ ನೀಡಿದ 152 ರನ್ ಗಳ ಸವಾಲಿನ ಗುರಿ ಬೆನ್ನು ಹತ್ತಿದೆ ಚೆನ್ನೈ ತಂಡಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಮೊದಲ ಓವರ್ ನಲ್ಲೇ ಶೇನ್ ವಾಟ್ಸನ್ ಶೂನ್ಯಕ್ಕೆ ಔಟಾದರು. ಬಳಿಕ ಎರಡನೇ ಓವರ್ ನಲ್ಲಿಯೇ ಸುರೇಶ್ ರೈನಾ ಕೂಡ 4 ರನ್ ಗಳಿಸಿ ನಿರ್ಗಮಿಸಿದರು. ಚೆನ್ನೈ ಮೊತ್ತ 24 ರನ್ ಗಳಾಗುವಷ್ಟರಲ್ಲಿ ಆ ತಂಡದ ಪ್ರಮುಖ 4 ವಿಕೆಟ್ ಗಳು ಪತನವಾಗಿತ್ತು.
ಬಳಿಕ ಚೆನ್ನೈ ತಂಡಕ್ಕೆ ಆಸರೆಯಾಗಿದ್ದು ಮಧ್ಯಮ ಕ್ರಮಾಂಕದ ಆಟಗಾರ ಅಂಬಾಟಿ ರಾಯುಡು ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿದ ರಾಯುಡು 47 ಎಸೆತಗಳಲ್ಲಿ 2 ಬೌಂಡರಿ 3 ಸಿಕ್ಸರ್ ಗಳ ನೆರವಿನಿಂದ 57 ರನ್ ಗಳಿಸಿ ಔಟ್ ಆದರು. ಬಳಿಕ ಬಂದ ಕೇದಾರ್ ಜಾದವ್ ಕೂಡ 1 ರನ್ ಗೆ ನಿರ್ಗಮಿಸಿದ್ದು ಚೆನ್ನೈ ತಂಡಕ್ಕೆ ಹಿನ್ನಡೆಯಾಗುವಂತೆ ಮಾಡಿತು. ಬಳಿಕ ಕ್ರೀಸ್ ಗೆ ಬಂದ ಧೋನಿ ತಂಡವನ್ನು ಆಘಾತದಿಂದ ಮೇಲೆತ್ತಿದರು. 43 ಎಸೆತಗಳನ್ನು ಎದುರಿಸಿದ ಧೋನಿ 2 ಬೌಂಡರಿ ಹಾಗೂ 3 ಸಿಕ್ಸರ್ ಗಳ ನೆರವಿನಿಂದ 58 ರನ್ ಗಳಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದು ಅಂತಿಮ ಓವರ್ ನಲ್ಲಿ ಔಟ್ ಆದರು. ಆ ಬಳಿಕ ವಿಜಯಲಕ್ಷ್ನಿ ಅಕ್ಷರಶಃ ರಾಜಸ್ತಾನ ಮತ್ತು ಚೆನ್ನೈ ತಂಡಗಳ ನಡುವೆ ವಾಲುತ್ತಿದ್ದಳು.
ಚೆನ್ನೈಗೆ ಅಂತಿಮ ಓವರ್ ನಲ್ಲಿ ಗೆಲ್ಲಲು 18 ರನ್ ಗಳ ಅವಶ್ಯಕತೆ ಇದ್ದಾಗ ಜಡ್ಡು ಮೊದಲ ಎಸೆತವನ್ನೇ ಸಿಕ್ಸರ್ ಗೆ ಅಟ್ಟುವ ಮೂಲಕ ಭರ್ಜರಿ ಆರಂಭ ನೀಡಿದರು. ಆದರೆ ಮೂರನೇ ಎಸೆತದಲ್ಲಿ ಧೋನಿ ಕ್ಲೀನ್ ಬೋಲ್ಡ್ ಆಗುವುದರೊಂದಿಗೆ ಮತ್ತೆ ವಿಜಯಲಕ್ಷ್ಮಿ ರಾಜಸ್ಥಾನ ತಂಡದತ್ತ ವಾಲಿತ್ತು. ಆದರೆ ಅಂತಿಮ ಎಸೆತದಲ್ಲಿ ಸ್ಯಾಂಥನರ್ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಚೆನ್ನೈ ತಂಡಕ್ಕೆ ರೋಚಕ ಗೆಲುವು ತಂದಿತ್ತರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com